ಋಷಿಗಳು ತ್ರಿಕಾಲ ಜ್ಞಾನಿಗಳೆಂದು ಹೇಳುತ್ತಾರೆ. ಅಂದರೆ ಭೂತಕಾಲದ, ವರ್ತಮಾನ ಕಾಲದ ಮತ್ತು ಭವಿಷ್ಯತ್ಕಾಲದ ಘಟನೆಗಳ ಅರಿವು ಅವರಿಗೆ ಇರುತ್ತದೆ. ಈ ಅರಿವು ಯಾವಾಗಲೂ ಇರುತ್ತದೆಯೇ? ವರ್ತಮಾನ ಕಾಲದ ಕೆಲವು ಘಟನೆಗಳು ನಮ್ಮೆಲ್ಲರಿಗೂ ಗೊತ್ತಿರುತ್ತವೆ. ಅಷ್ಟರಿಂದಲೇ ನಮ್ಮ ಬುದ್ಧಿ ಅಷ್ಟೊಂದು ಚಂಚಲವಾಗಿರುತ್ತದೆ. ಹಾಗಿದ್ದರೆ ಎಲ್ಲಾ ಕಾಲದ, ಎಲ್ಲಾ ಘಟನೆಗಳ ಅರಿವು ಇದ್ದರೆ ಎಷ್ಟೊಂದು ಚಂಚಲತೆ ಉಂಟಾದೀತು? ಹಾಗಾದರೆ ತ್ರಿಕಾಲ ಜ್ಞಾನಿಗಳ ಬುದ್ಧಿ ನಮ್ಮ ಬುದ್ಧಿಗಿಂತಲೂ ಚಂಚಲವೇ?
ತ್ರಿಕಾಲ ಜ್ಞಾನಿಗಳ ಬುದ್ಧಿ ಖಂಡಿತ ಚಂಚಲವಲ್ಲ ಬುದ್ಧಿ ಚಂಚಲವಾಗಿರುತ್ತಿದ್ದರೆ ಋಷಿಗಳು ಆಗಲು ಸಾಧ್ಯವಿಲ್ಲ ಅಲ್ಲದೆ ವರ್ತಮಾನ ಕಾಲೀನ ವರ್ತಂತೆ ಹಿಚಕ್ಷಣಾ ಎಂಬ ಪ್ರಸಿದ್ಧ ಸುಭಾಷಿತವು ಋಷಿಗಳು ವರ್ತಮಾನ ಕಾಲದಲ್ಲಿ ನಿಂತಿರುತ್ತಾರೆ ಎಂಬುದಾಗಿ ಹೇಳುತ್ತದೆ. ಆದ್ದರಿಂದ ಅನಗತ್ಯವಾಗಿ ಭೂತಕಾಲ ಮತ್ತು ಭವಿಷ್ಯತ್ಕಾಲದ ಘಟನೆಗಳ ಕಡೆ ಗಮನ ಹರಿಸದೆ ವರ್ತಮಾನ ಕಾಲದಲ್ಲಿ ತಾನು ಮಾಡುತ್ತಿರುವ ಕೆಲಸದಲ್ಲಿಯೇ ಸಂಪೂರ್ಣ ಮನಸ್ಸನ್ನು ಇಡುವುದರಿಂದ ಅನೇಕ ಸತ್ ಪ್ರಯೋಜನಗಳಿವೆ. ಮಾಡುತ್ತಿರುವ ಕೆಲಸ ಉತ್ತಮವಾಗುತ್ತದೆ ಮನಸ್ಸಿಗೆ ಏಕಾಗ್ರತೆ ಇರುತ್ತದೆ ಉದ್ವೇಗ ಇರುವುದಿಲ್ಲ ಅದಕ್ಕೋಸ್ಕರವೇ ಪ್ರಜ್ಞರು ವರ್ತಮಾನ ಕಾಲದಲ್ಲಿ ತಾವು ಮಾಡುತ್ತಿರುವ ಕೆಲಸದಲ್ಲಿಯೇ ಮನಸ್ಸನ್ನು ನೂರಕ್ಕೆ ನೂರರಷ್ಟು ತೊಡಗಿಸಿ ಕೊಂಡಿರುತ್ತಾರೆ ಹಾಗಾದರೆ ಋಷಿಗಳ ಈ ತ್ರಿಕಾಲ ಜ್ಞಾನಕ್ಕೂ ವರ್ತಮಾನ ಕಾಲದಲ್ಲಿ ನಿಂತಿರುವಿಕೆಗೂ ಹೊಂದಿಕೆ ಹೇಗೆ ಋಷಿಗಳಿಗೆ ಭೂತ ಭವಿಷ್ಯತ್ ಕಾಲಗಳ ಅರಿವು ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿತರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.
ಈ ಸೂತ್ರವೂ ಹೇಳುವಂತೆ ಯಾವುದೇ ವಸ್ತುವಿನ ಧರ್ಮ ಲಕ್ಷಣ ಅವಸ್ತಾ ಎಂಬ ಮೂರು ಪರಿಣಾಮಗಳಲ್ಲಿ ಮನಸ್ಸನ್ನು ಸಂಯಮ ಮಾಡುವುದರಿಂದ ಆ ವಸ್ತುವಿನ ತ್ರಿಕಾಲ ಜ್ಞಾನ ಉಂಟಾಗುತ್ತದೆ. ಸಹಿಯಮ ಎಂದರೆ ಧಾರಣ ಜಾಣ ಮತ್ತು ಸಮಾಧಿ ಇವು ಮೂರು ಏಕಾಗ್ರತೆಯ ಮೂರು ಸೋಪಾನಗಳೆಂದು ಹೇಳಬಹುದು. ಇವುಗಳು ಬರಬೇಕಾದರೆ ಮೊದಲ ಪ್ರತ್ಯಾರ ಅಂದರೆ ಇಂದ್ರಿಯಗಳ ಮೂಲಕ ಹುಟ್ಟುವ ಮನೋವೃತ್ತಿಯನ್ನು ವಿಷಯಗಳಿಂದ ವಿಮುಖಗೊಳಿಸಿಕೊಳ್ಳುವಿಕೆ ಅಗತ್ಯ. ಒಟ್ಟಾರೆ ಏಕಾಗ್ರತೆಯ ಅತ್ಯುತ್ಕೃಷ್ಟ ಸ್ಥಿತಿಯಾಗಿರುವ ಸಂಯಮವನ್ನು ಮಾಡುವುದರಿಂದ ತ್ರಿಕಾಲ ಜ್ಞಾನ ಬರುತ್ತದೆ ಅಲ್ಲಿ ಚಂಚಲತೆಗೆ ಅವಕಾಶವಿಲ್ಲ ಯಾವ ವಿಷಯದಲ್ಲಿ ಹಿಂದೆ ಹೇಳಿದಂತೆ ಮನಸ್ಸು ಸಹಿಯಮ ಗೊಳಿಸಲ್ಪಟ್ಟಿರುತ್ತದೆಯೋ ಆ ವಿಷಯದ ಭೂತ ಭವಿಷ್ಯ ಕಾಲಗಳು ಅರಿವಿಗೆ ಬರುತ್ತದೆ ಮತ್ತು ಪ್ರಪಂಚದ ಎಲ್ಲಾ ವಿಷಯಗಳ ಜ್ಞಾನ ಗೊಂದಲವಾಗುವ ರೀತಿಯಲ್ಲಿ ಮನಸ್ಸಿಗೆ ಬರುವುದಿಲ್ಲ ಋಷಿಗಳ ಅರಿವಿನ ವೈಖರಿಯನ್ನು ಅರ್ಥ ಮಾಡಿಕೊಳ್ಳಲು ತಪಸ್ಸೇ ಬೇಕು.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ