ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ (ರಿ)
ಆತ್ಮೀಯರೇ
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ ಹಾಗೂ ತತ್ಕರಕಮಲ ಸಂಜಾತ ಪರಮಪೂಜ್ಯ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜೀಯವರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ರಾಜ್ಯಾದ್ಯಂತ ನಡೆಯುವ ಈ ವರ್ಷದ ಭಗವದ್ಗೀತಾ ಅಭಿಯಾನಕ್ಕೆ ಭಗವದ್ಗೀತೆಯ 11 ನೇ ಅಧ್ಯಾಯವನ್ನು (ವಿಶ್ವರೂಪ ದರ್ಶನ ಯೋಗ) ಪೂಜ್ಯ ಶ್ರೀಗಳು ಸೂಚಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭಗವದ್ಗೀತಾ ಅಭಿಯಾನ, ಭಗವದ್ಗೀತಾ ವಿವಿಧ ಸ್ಪರ್ಧೆಗಳು, ಭಗವದ್ಗೀತೆಯ ಆರಾಧನೆ ನಡೆಯಲಿದ್ದು, ನವೆಂಬರ್ ತಿಂಗಳ ಕೊನೆಯಲ್ಲಿ ರಾಜ್ಯ ಮಟ್ಟದ ಮಹಾ ಸಮರ್ಪಣಾ ಸಮಾರಂಭ ನಡೆಯಲಿದೆ.
ಭಗವದ್ಗೀತಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.