ಸದ್ಗುರುಶ್ರೀಶಂಕರ

posted in: Kavan | 0

ಸದ್ಗುರು ಶ್ರೀ ಶಂಕರಾSSSS
ನಮಿಸುವೆ ಶಂಕರ
ಶ್ರೀಗುರುವರಾ||

ಆರ್ಯಾಂಬೆ ವರಪುತ್ರ ಪರಿ ಪಾಲಿಸೋ
ದೇವಾ ಶಂಕರ ರೂಪ ಭವ ದಾಟಿಸೋ
ಆರು ದೋಷಗಳಳಿಸಿ
ಚರಣದಿ ಮನ ನಿಲಿಸೋ
ಸದ್ಗುರು ಶ್ರೀ ಶಂಕರಾ// 1 //

ಕರದಿ ಕಮಂಡಲು ಜಪ ಮಾಲೆಯು
ಧರೆಯೋಳು ವರವಾದ
ತವ ಲೀಲೆಯು
ಕಾವೀ ಬಟ್ಟೆಯನುಟ್ಟ
ದೇವಾ ಶಂಕರ ರೂಪ
ಸದ್ಗುರು ಶ್ರೀ ಶಂಕರಾ// 2 //

ಧರ್ಮವೆ ಸತ್ಯ ವೆಂಬುದ ಸಾರಿದೆ
ಜ್ಞಾನವೇ ಮುಕ್ತಿಯೆಂಬುದ ತೋರಿದೆ
ಅದ್ವೈತ ಸಿದ್ದಾಂತ ಜಗಕೇ ನೀ ತೋರಿದೆ
ಸದ್ಗುರು ಶ್ರೀ ಶಂಕರಾ// 3 //

ಅಜ್ಞಾನದಂಧತ್ವ ಸಂಹರಿಸಿದೆ
ಸುಜ್ಞಾನದಾ ದೀಪವಾ ಬೆಳಗಿದೆ
ಸದ್ಭುದ್ಧಿ ಸೌಭಾಗ್ಯ ಸದ್ಭಕ್ತಿಗಳನೀಯೊ’
ಸದ್ಗುರು ಶ್ರೀ ಶಂಕರಾ// 4 //

ಜಯಲಕ್ಷ್ಮೀ ಗಾಂವ್ಕರ್. ಕಲ್ಲೇಶ್ವರ.

Leave a Reply

Your email address will not be published. Required fields are marked *