ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯ.ಶಿರಸಿ.
15 ಮಾರ್ಚ್ ರಿಂದ 10ನೇ ತರಗತಿ ಪರೀಕ್ಷೆಗಳಿಗೆ ಇನ್ನು 10ದಿನ ಇದೆ.ಈ ಅವಧಿ ಅತ್ಯಂತ ಮಹತ್ವದ್ದು.ಈ ಹತ್ತುದಿನಗಳ ಕಾಲ ಮನೆಯಲ್ಲಿಯೇ ತಯಾರಾದ ಅಥವಾ ತಾವು ವಸತಿ ಇರುವ ಸ್ಥಳದ ಆಹಾರವನ್ನು ಮಾತ್ರ ಸ್ವೀಕರಿಸಿ.ಎಣ್ಣೆಯಲ್ಲಿ ಕರಿದ, ಫ್ರೀಜ್ ಗಳಲ್ಲಿಯ ಜ್ಯೂಸ, ಐಸ್ಕ್ರೀಂ, ಅಲ್ಲದೇ ಹೊಸ ಪದ್ಧತಿಯ ಆಹಾರ ಸ್ವೀಕರಿಸುವುದು ಬೇಡ.ಅನ್ನ ,ಬೇಳೆಯ ಸಾರು ಸಾಂಬಾರು ಅಥವಾ ತೋವೆ, ರೊಟ್ಟಿ ಚಪಾತಿಯ ರೂಢಿಯವರು ಅದನ್ನು,ಪಲ್ಯ, ಮಜ್ಜಿಗೆ ಮೊಸರು, ಹಸಿ ತರಕಾರಿ ಊಟದಲ್ಲಿ ಇರಲಿ.ಹಾಲು ಸ್ವೀಕರಿಸುತಿದ್ದರೆ ಅದನ್ನು ಆದಷ್ಟು ಬೆಳಗಿನ ಹೊತ್ತಿನಲ್ಲಿ ಇರಲಿ.ಅತಿ ಹುಳಿ ಖಾರದ ಆಹಾರ ಬೇಡ.
ನಿಮ್ಮ ಆರೋಗ್ಯ ಕಾಪಾಡುವ ನಿಯಮಿತ ಆಹಾರ ಸ್ವೀಕಾರಮಾಡಿ.ಕನಿಷ್ಟ 7 ಗಂಟೆಯಾದರೂ ಉತ್ತಮ ನಿದ್ದೆ ನಿಮ್ಮದಾಗಬೇಕು.ನಿಮ್ಮ ಮನಸ್ಸನ್ನು ಸ್ಥಿಮಿತವಾಗಿ ಇರುವಂತೆ ನೀಗಾವಹಿಸಿ.ಆತಂಕ, ಚಿಂತೆ , ಒತ್ತಡಕ್ಕೆ ಆಸ್ಪದ ಬೇಡ.ಮನೆಯಲ್ಲಿ ಅನಾವಶ್ಯಕ ಚರ್ಚೆ, ರಾಜಕೀಯ ವಿಚಾರಧಾರೆ, ಚುನಾವಣಾ ಚರ್ಚೆ,ಜಾತ್ರಾ ಚರ್ಚೆ ಕುಟುಂಬದ ಸದಸ್ಯರಿಂದಲೂ ಬೇಡ. ಪಾಲಕರು ವರ್ಷವಿಡೀ ಇಷ್ಟು ಶೇಕಡಾ ಅಂಕಗಳ ಧ್ಯಾನ ಮಾಡಿದ್ದು ಸಹಜವಾಗಿ ಇರುತ್ತದೆ, ಆದರೆ ಈ ಹತ್ತುದಿನ ಒತ್ತಡ ಬೇಡ.ಮಕ್ಕಳು ಒತ್ತಡ ರಹಿತವಾಗಿ ಇರುವಂತೆ ಮಾಡುವ ಪ್ರಯತ್ನ ನಿಮ್ಮದಾಗಲಿ.ಇತರ ಏಕಾಗ್ರತೆಗೆ ತೊಂದರೆಯಾಗುವ ವಿಚಾರಗಳು ಬೇಡ.ಪ್ರತಿಯೊಂದರಲ್ಲೂ ಸಕಾರಾತ್ಮಕ ವಿಚಾರಗಳು ಇರಲಿ, ಪರೀಕ್ಷೆಗಳು ಹತ್ತಿರ ಬಂದಾಗ ಹೊಸ ಪ್ರಯೋಗ ಬೇಡ.ವಿಶೇಷವಾಗಿ ಜಾಗರಣೆ ಬೇಡ, ಈವರೆಗೆ ಮಾಡಿದ್ದು ಪ್ರಯತ್ನ.ಈ ಕೊನೆ ಕ್ಷಣದ ಪ್ರಯತ್ನಕ್ಕೆ ಕೈಹಾಕುವುದು ಬೇಡ.ಯಶಸ್ಸು, ಆರೋಗ್ಯ, ಏಕಾಗ್ರತೆ, ಸಮಾಧಾನ, ಸ್ವಲ್ಪ ವ್ಯಾಯಾಮ,ಧ್ಯಾನ,ಯೋಗ, ಸಣ್ಣ ವಾಯುವಿಹಾರ ಅವಶ್ಯಕ.
ಇನ್ನೂ ಕೆಲವು ವಿದ್ಯಾರ್ಥಿಗಳ ಅತೀ ಆತ್ಮವಿಶ್ವಾಸ ಬೇಡ.ವರ್ಗದ ಇತರ ವಿಧ್ಯಾರ್ಥಿಗಳ ಅಭ್ಯಾಸದ ಶೈಲಿಯ ಹೋಲಿಕೆ ಬೇಡ. ಹಿಂದಿನ ವರ್ಷದ ವಿದ್ಯಾರ್ಥಿಗಳ ಪರಿಣಾಮಗಳ ಚರ್ಚೆ ಬೇಡವೇ ಬೇಡ.ಅನವಶ್ಯಕ ಪ್ರಶ್ನೆ ಪತ್ರಿಕೆ, ಪರಿಣಾಮಗಳ ತಾರ್ಕಿಕ ತರ್ಕ ಬೇಡ.
ಉತ್ತಮ ಯಶಸ್ಸಿನೂಂದಿಗೆ ಭಾರತದ ಉತ್ತಮ, ರಾಷ್ಟ್ರ ಭಕ್ತ ಪ್ರಜೆಗಳಾಗಿ ಎಂಬ ಶುಭ ಹಾರೈಕೆಗಳು