ಶ್ರೀ ಶಂಕರರ ಚುಟುಕು ಉಪದೇಶ– ಮಹಾನ್‍ಆದರ್ಶ

posted in: Gurubodhe | 0

ಶ್ರೀಮದಾದಿ ಶಂಕರಾಚಾರ್ಯರು ಹೇಳಿರುವ ಪ್ರಸಿದ್ಧವಾಗಿರುವ ಚುಟುಕು ಮಾತು ಹೀಗಿದೆ–ಗೇಯಂಗೀತಾ ನಾಮ ಸಹಸ್ರಮ್ | ಧ್ಯೇಯಂ ಶ್ರೀಪತಿ ರೂಮಮಜಸ್ರಮ್ || ಜ್ಞೇಯಂ ಸಜ್ಜನ ಸಂಗೇಚಿತ್ತಮ್ | ದೇಯಂ ದೀನಜನಾಯಚ ವಿತ್ತಮ್ || ಇಹ-ಪರಗಳೆರಡರಲ್ಲಿಯೂ ಸುಖಿಯಾಗಲು ನಾಲ್ಕು ಸೂತ್ರಗಳನ್ನು ಇಲ್ಲಿ ಹೇಳಿದ್ದಾರೆ. ಈ ನಾಲ್ಕನ್ನೇಜೀವನದುದ್ದಕ್ಕೂಗಟ್ಟಿಯಾಗಿತೆಗೆದುಕೊಂಡು ಸಾಗಿದರೆ ಮತ್ತೆಯಾವುದೇಧರ್ಮಾಚರಣೆಇಲ್ಲದಿದ್ದರೂ ಶ್ರೇಯಸ್ಸಿಗೆ ಭಂಗವಾಗುವುದಿಲ್ಲ.

          1) ಭಗವದ್ಗೀತೆ ಮತ್ತು ಸಹಸ್ರನಾಮಗಳನ್ನು ಹೇಳಬೇಕು. ಸಹಸ್ರನಾಮವೆಂದರೆಇಲ್ಲಿ ವಿಷ್ಣುಸಹಸ್ರನಾಮ್ವೆಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಭಜಗೋವಿಂದ ಸ್ತೋತ್ರದಲ್ಲಿ ಈಸಾಲು ಬಂದಿದೆ. ಆದರೂತನ್ನಇಷ್ಟದೇವರ ಸಹಸ್ರನಾಮವನ್ನು ಸ್ವೀಕರಿಸಬಹುದು. ಪ್ರತಿದಿನವೂ ಒಂದೇ ಸಹಸ್ರನಾಮವಿದ್ದರೆ ಭಕ್ತಿ ಬೆಳೆಯಲು ಅನುಕೂಲವಾಗುತ್ತದೆ.

          2) ಶ್ರೀಪತಿಯ ರೂಪವನ್ನುಗಾಢವಾಗಿಧ್ಯಾನಿಸಬೇಕು.ಶ್ರೀಪತಿ ಎಂಬ ಶಬಕ್ಕೆ ಸಹಜವಾಗಿ ಮಹಾವಿಷ್ಣು ಎಂಬುದಾಗಿಅರ್ಥ. ಆದರೆತನ್ನ ಇಷ್ಟ ದೇವರನ್ನು ಹೃದಯದಲ್ಲಿಧ್ಯಾನಿಸಬೇಕೆಂದು ಹೇಳಲು ಅಡ್ಡಿಯಿಲ್ಲ. ಎಲ್ಲದೇವರನ್ನು ಶ್ರದ್ಧೆಯಿಂದಕಾಣುವರೂಢಿ ಒಳ್ಳೆಯದಾದರೂ ಭಕ್ತಿ-ಧ್ಯಾನ ಸಾಧನೆಗೆಒಂದೇದೇವರನ್ನುಇಟ್ಟುಕೊಳ್ಳಬೇಕು. ಆ ಇಷ್ಟದೇವರ ಸುಂದರಆಕಾರವನ್ನು ಹೃದಯದಲ್ಲಿಗಾಢವಾದ ಭಾವದಿಂದ ಗಮನಿಸಬೇಕು. ದೇವರು ವಸ್ತುತಃ ನಿರಾಕಾರನಾಗಿದ್ದರೂ ಭಕ್ತರಅನುಗ್ರಹಕ್ಕೋಸ್ಕರ ಅವನು ಸಾಕಾರನಾಗುತ್ತಾನೆ. ಸಾಕಾರದ ಮೂಲಕವೇ ನಿರಾಕಾರ್ಕ್ಕೆ ಹೋಗಬೇಕು.

3) ಸಜ್ಜನರ ಸಹವಾಸದಿಂದ ಮನಸ್ಸನ್ನು ಸನ್ಮಾರ್ಗದಲ್ಲಿ ಮುಂದುವರಿಯುವಂತೆ ಮಾಡಿಕೊಳ್ಳಬೇಕು. ಸಜ್ಜನರೆಂದರೆಅಧ್ಯಾತ್ಮ ಸಾಧನೆಯಲ್ಲಿ ಅನುಭವಗಳ ಮೂಲಕ ಮುಂದುವರೆದವರು. ಅಂತಹ ಸಜ್ಜನರ ಮಾತು – ನಡತೆಗಳು ನಮಗೆ ಅಧ್ಯಾತ್ಮಪಥದಲ್ಲಿ ಮುಂದುವರಿಯಲು ಪ್ರೇರಣೆಯಾಗುತ್ತವೆ. ಮಾರ್ಗದ್ರ್ಶನವಾಗುತ್ತದೆ. ಅಧ್ಯಾತ್ಮ್‍ಪಥತುಂಬಾ ಸೂಕ್ಷ್ಮವಾದ್ದರಿಂದ ಅನುಭವಗಳ ಪ್ರೇರಣೆ ಮಾರ್ಗದರ್ಶನಗಳು ಅವಶ್ಯವಾಗಿರುತ್ತದೆ.           4) ಕಷ್ಟದಲ್ಲಿರುವವರಿಗೆ , ಬಡವರಿಗೆತನ್ನ ಸಂಪಾದನೆಯ ಕೆಲವು ಭಾಗ ಹಣವನ್ನುದಾನ ಮಾಡಬೇಕು. ಕೈಗಳಿಗೆ ಆಭರಣಗಳಿಗಿಂತಲೂ ದಾನವೇ ಶ್ರೇಷ್ಟವಾದ ಭೂಷಣ. ಬಡಬಗ್ಗರಿಗೆದಾನ ಮಾಡಿದ್ದರಿಂದಹಣವು ಶುದ್ಧವಾಗುತ್ತದೆ. ಸ್ವಲ್ಪವೂದಾನವಿಲ್ಲದ ಹಣವುದೇವರದೃಷ್ಟಿಯಲ್ಲಿಕಪ್ಪು ಹಣವಾಗುತ್ತದೆ. ಪುಣ್ಯಕಾಲದಲ್ಲಿ ಪುಣ್ಯಸ್ಥಳದಲ್ಲಿ ಅರ್ಹವ್ಯಕ್ತಿಗಳಿಗೆ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವದಾನವು ಸಾತ್ವಿಕದಾನವಾಗುತ್ತದೆ. ಅದೇ ಶ್ರೇಷ್ಠದಾನ.