ದೇವರು ಸರ್ವವ್ಯಾಪಕನೆಂದು ಕೆಲವರು ಹೇಳುತ್ತಾರೆ. ಹೃದಯದಲ್ಲಿದೇವರಿದ್ದಾನೆಂದು ಕೆಲವರು ಹೇಳುತ್ತಾರೆ. ಇವುಗಳಲ್ಲಿ ಯಾವುದು ಸರಿ ? ಹಿಂದೂಧರ್ಮದ ಪ್ರಕಾರ ಮೂರೂ ಸರಿ. ಮೂರಕ್ಕೂಇಲ್ಲಿ ಅವಕಾಶ ಇದೆ. ಸಾಧನಾಮಾರ್ಗದಲ್ಲಿ ಇವು ಮೂರೂಒಂದೊAದು ಹಂತಗಳಾಗಿವೆ. ಆ ಹಂತಗಳನ್ನು ಪರಿಚಯಿಸಿಕೊಂಡರೆ ಮೂರಕ್ಕೂ ಅವಕಾಶ ಇರುವುದುಗೊತ್ತಾಗುತ್ತದೆ.
ಮೊದಲ ಹಂತದಲ್ಲಿ ಮೂರ್ತಿಗಳಲ್ಲಿ ದೇವರದರ್ಶನ. ಮೂರ್ತಿಗಳು ಕೇವಲ ಕಲ್ಪನೆಗಳಲ್ಲ. ತಪಸ್ವಿಗಳಿಗೆ ಮತ್ತುಉಪಾಸಕರಿಗೆ ದೇವತೆಗಳು ದರ್ಶನವನ್ನು ಕೊಡುತ್ತಾರೆ. ದರ್ಶನಗಳಲ್ಲಿ ಕಂಡ ಆಕಾರಗಳನ್ನೇ ಅವರು ಶಾಸ್ತçಗಳಲ್ಲಿ ಬರೆದಿಟ್ಟರು. ಶಾಸ್ತçಗಳಲ್ಲಿ ಬರೆಯಲ್ಪಟ್ಟ ಆಕಾರಗಳುಳ್ಳ ಮೂರ್ತಿಗಳೇ ಇವತ್ತು ದೇವಾಲಯಗಳಲ್ಲಿ ಪೂಜಿಸಲ್ಪಡುತ್ತವೆ. ಮೂರ್ತಿಪೂಜೆಯಂತೆಅಗ್ನಿಯಲ್ಲಿದೇವತಾದರ್ಶನ ಮಹತ್ವವುಳ್ಳದ್ದು. ಲಿಂಗದಲ್ಲಿ ಶಿವ ಪೂಜೆ, ಶಾಲಗ್ರಮದಲ್ಲಿ ವಿಷ್ಣುಪೂಜೆ ಮುಂತಾದ ಸ್ಥೂಲ ದೇವತಾ ದರ್ಶನಗಳೆಲ್ಲವೂ ಈ ಮೊದಲ ಹಂತಕ್ಕೆ ಸೇರಿತ್ತವೆ. ಮೂರ್ತಿಗಳಲ್ಲಿ ದೇವತಾದರ್ಶನಕಾಲ್ಪನಿಕವಾಗಿರದೇವಾಸ್ತವಿಕ ಹಿನ್ನಲೆಯುಳ್ಳದ್ದು ಎಂದು ನೆನಪಿಡಬೇಕಾದ ಸಂಗತಿ.
ಎರಡನೇ ಹಂತದಲ್ಲಿ ಹೃದಯದಲ್ಲಿದೇವತಾದರ್ಶನ. ಸಾಧನಾ ಮಾರ್ಗದಲ್ಲಿಇದು ಮೊದಲನೇ ಹಂತಕ್ಕೆಏರಿದವರಿಗೆ ಸಿಗುತ್ತದೆ. ಅಂದರೆ ಪ್ರತಿಮೆಗಳಲ್ಲಿ ದೇವತೆಗಳ ಉಪಾಸನೆ, ಭಕ್ತಿ-ದರ್ಶನಗಳು ಯಾರಿಗೆಉಂಟಾಗಿವೆಯೋಅವರೇತಮ್ಮ ಹೃದಯದಲ್ಲಿದೇವರ ಚಿಂತನೆ-ದರ್ಶನಗಳು ಪಡೆಯಲುಅರ್ಹರಾಗುತ್ತಾರೆ. ಆದರೆಎರಡನೇ ಹಂತವು ಮೊದಲನೇ ಹಂತಕ್ಕಿAತ ಮುಂದಿನ ಹಂತ, ಅಥವಾಎರಡನೆ ಮೆಟ್ಟಿಲು. ಆಶ್ಚರ್ಯಕರ ಸಂಗತಿಎAದರೆ ಹೃದಯದಲ್ಲಿದೇವರದರ್ಶನವಾದವರು ಹೊರಗಿನ ಮೂರ್ತಿಗಳಲ್ಲಿ ದೇವರ-ಚಿಂತನೆ ದರ್ಶನಗಳನ್ನು ನಿರಾಕರಿಸುವುದಿಲ್ಲ. ಬಾಹ್ಯವಿಗ್ರಹಗಳ ಪೂಜೆಗೂ ಸಾಧನಾಮಾರ್ಗದಲ್ಲಿಒಂದುಸ್ಥಾನವಿದೆ. ಬಾಹ್ಯವಿಗ್ರಹಗಳ ಮೂಲಕವೂ ದೇವರುಉಪಾಸಕರನ್ನುಅನುಗ್ರಹಿಸುತ್ತಾರೆ- ಎಂಬುದಾಗಿಯೇಅವರು ಹೇಳುತ್ತಾರೆ.
ಮೂರನೇ ಹಂತದಲ್ಲಿಎಲ್ಲಕಡೆದೇವರದರ್ಶನ. ದೇವರು ಸರ್ವವ್ಯಾಪಕನೆಂಬುದು ಮೂರನೇ ಹಂತದಲ್ಲಿರುವವರಿಗೆಅನುಭವಕ್ಕೆ ಬರುತ್ತದೆ. ಹಿಂದಿನ ಎರಡು ಹಂತಗಳಲ್ಲಿ ಕ್ರಮವಾಗಿದಾಟಿಬಂದವರಿಗೆ ಈ ಹಂತವು ಕೈಗೆ ಸಿಗುತ್ತದೆ. ಇಲ್ಲಿಯೂ ಹಿಂದಿನAತೆಯೇಆಶ್ಚರ್ಯಕರವಾದ ಸಂಗತಿಯಿದೆ. ಅದೇನೆಂದರೆ ಈ ಹಂತಕ್ಕೆತಲುಪಿದವರು ಮೂರ್ತಿಪೂಜೆಯನ್ನು ಮತ್ತು ಹೃದಯದಲ್ಲಿದೇವತೋಪಾಸನೆಯನ್ನು ನಿರಾಕರಿಸುವುದಿಲ್ಲ. ಎಲ್ಲಕಡೆದೇವರದರ್ಶನವೇಕೊನೇಯ ಹಂತ. ದೇವರು ಸರ್ವವ್ಯಾಪಕನೆಂಬುದೇ ಸರ್ವಸತ್ಯ. ಆದರೂ ಹಿಂದೆಎರಡು ಹಂತಗಳನ್ನು ಈ ಹಂತಕ್ಕೆತಲುಪಿದ ಜ್ಞಾನಿಗಳು ನಿರಾಕರಿಸುವುದಿಲ್ಲ ಬದಲಾಗಿ ಪ್ರೋತ್ಸಾಹಿಸುತ್ತಾರೆ. ಆದ್ದರಿಂದಲೇ ನಮ್ಮಲ್ಲಿ ದೇವಾಲಯಗಳಲ್ಲಿ ಮೂರ್ತಿಪೂಜೆಗೆ ಮಹತ್ವವಿದೆ. ಹೆಚ್ಚಿನ ಜನಗಳು ಮೊದಲ ಹಂತದಲ್ಲಿರುವವರೇ ಹೆಚ್ಚು. ಆದ್ದರಿಂದ ಮೂರ್ತಿಪೂಜೆತುಂಬಾ ವ್ಯಾಪ್ತಿ ಪಡೆದುಕೊಂಡಿದೆ. ಆದರೆ ಮೂರು ಹಂತಗಳು ಆಯಾ ಹಂತದಲ್ಲಿರುವವರಿಗೆ ಸತ್ಯವೇಆಗಿದೆ, ಸತ್ಯಕ್ಕೆ ಅನೇಕ ಸ್ತರಗಳಿವೆ.