ಜ್ಞಾನಯೋಗಿಯ ಹೊಣೆ

posted in: Gurubodhe | 0

ಜ್ಞಾನಿಗಳು ಅಜ್ಞಾನಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅಥವಾ ಅಜ್ಞಾನಿಗಳಿಗೆ ಹೇಗೆ ಮಾರ್ಗದರ್ಶನ ಮಾಡಬೇಕು? ಈ ಬಗ್ಗೆ ಭಗವಂತ ಭಗವದ್ಗೀತೆಯಲ್ಲಿ ಹೇಳಿದ ಒಂದು ಮಾತು ಮಾರ್ಮಿಕವಾಗಿದೆ“ನ ಬುದ್ಧಿ ಭೇದಂಜನಯೇತ್‌ಅಜ್ಞಾನಾಂ ಕರ್ಮಸಂಗಿನಾಮ್ | ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್ || ತಾನುಕರ್ಮಯೋಗಕ್ಕಿಂತ ಮಿಗಿಲಾದಜ್ಞಾನಯೋಗದಲ್ಲಿಇದ್ದರೂ, ಜ್ಞಾನಯೋಗಕ್ಕೆ ಹತ್ತುವ ಸಾಮರ್ಥ್ಯವಿಲ್ಲದಜನರನ್ನುಕರ್ಮಯೋಗದಲ್ಲೇ ಮುನ್ನಡೆಸಬೇಕು. ಜನರುಕರ್ಮಯೋಗದಲ್ಲಿ ಮುಂದುವರಿಯುವದಕ್ಕೋಸ್ಕರತಾನುತನ್ನಜ್ಞಾನಯೋಗಕ್ಕೆ ಭಂಗ ಬರದಿರುವಂತೆಕರ್ಮವನ್ನು ಮಾಡಬೇಕು. ಕರ್ಮಮಾಡಿದ್ದರಿಂದತನಗೆಯಾವ ಪ್ರಯೋಜನವಿಲ್ಲದಿದ್ದರೂಜನರಿಗೋಸ್ಕರಕರ್ಮಮಾಡಬೇಕು.
ಜ್ಞಾನಯೋಗವುಒಂದು ವಿಶಿಷ್ಟವಾದ ಮನಃಸ್ಥಿತಿ. ಅದುಕರ್ಮಾತೀತನಾದ ಪರಮಾತ್ಮನೊಡನೆತನ್ನ ನಿಜ ಸ್ವರೂಪವನ್ನು ಗುರುತಿಸಿಕೊಳ್ಳುವ ಮನಃಸ್ಥಿತಿ. ಆದ್ದರಿಂದಲೇಜ್ಞಾನಯೋಗಿಗೆ ಕರ್ಮಗಳು ಬೇಕಾಗುವುದಿಲ್ಲ. ಕರ್ಮಯೋಗದಲ್ಲಿಆಸಕ್ತಿಯಿಂದತೊಡಗಿದರೆ ಅವನ ಜ್ಞಾನಯೋಗಕ್ಕೆತೊಂದರೆಯಾಗುವ ಸಂಭವವಿರುತ್ತದೆ. ಯಾಕೆಂದರೆ ಕರ್ಮಗಳಲ್ಲಿ ಆಸಕ್ತನಾದಾಗ‘ನಾನು ಮಾಡುತ್ತಿದ್ದೇನೆ’ ಎಂಬ ಭಾವವು ಬಂದುಬಿಡುತ್ತದೆ. ಕರ್ಮದ ಬಗ್ಗೆ ಅಹಂಕಾರ ಬಂದಿತೆAದರೆಕರ್ಮಾತೀತ ಪರಮಾತ್ಮನಿಂದತಾನುದೂರವಾದAತೆ ಸರಿ. ಇದಕ್ಕೆಅವಕಾಶವಾಗದಂತೆಅAದರೆಜ್ಞಾನಯೋಗದತನ್ನ ಮನಃಸ್ಥಿತಿ ಹಾಳಾಗದಂತೆ ಎಚ್ಚರವಹಿಸಿಕೊಂಡು ಜ್ಞಾನಯೋÃಗಿಯುಕರ್ಮದಲ್ಲಿತೊಡಗಬೇಕಾಗುತ್ತದೆ. ಅದನ್ನೇ ಈ ಶ್ಲೋಕದಲ್ಲಿ‘ವಿದ್ವಾನ್ಯುಕ್ತಃ ಸಮಾಚರನ್’ ಎಂಬಲ್ಲಿ ಹೇಳಿದ್ದಾರೆ.
ಕರ್ಮಯೋಗ ಪುಟ್‌ಪಾತ್ ಮೇಲೆ ನೆಡೆದುಕೊಂಡು ಹೋದಂತೆ.ಜ್ಞಾನಯೋಗ ವಾಹನವನ್ನು ಚಾಲನೆಮಾಡಿಕೊಂಡು ಹೋದಂತೆ. ಪುಟ್‌ಪಾತ್ ಮೇಲೆ ಹೋಗುವವರು ಪುಟ್‌ಪಾತ್ ಬಿಟ್ಟು ವಾಹನಗಳು ಚಲಿಸುವ ರಸ್ತೆಯಲ್ಲೆ ಹೋಗಲು ಬರುವುದಿಲ್ಲ. ವಾಹನಗಳ ಚಾಲನೆಯತರಬೇತು ಪಡೆದುಕೊಂಡು ಹೋದನಂತರವೇ ಅವನು ವಾಹನದ ಚಾಲನೆಗೆ ತೊಡಗಬಹುದು. ಆಗ ವಾಹನಗಳ ರಸ್ತೆಯಲ್ಲಿ ಸಾಗಬಹುದು. ಹಾಗೆಯೇಜ್ಞಾನಯೋಗದಒಂದು ಸ್ಥಿತಿ ಬರುವವರೆಗೆಕರ್ಮಯೋಗವನ್ನು ಮಾಡಲೇ ಬೇಕಾಗುತ್ತದೆ. ಜ್ಞಾನಯೋಗದಅರ್ಹತೆ ಬರದೆಅದರಲ್ಲಿತೊಡಗಿದರೆತರಬೇತಿಯಿಲ್ಲದವನು ವಾಹನ ಚಾಲನೆ ಮಾಡಿದಂತಗುತ್ತದೆ. ವಾಹನಯಚಂದವನ್ನು ನೋಡಿಕೊಂಡು ಆ ಆಕರ್ಷಣೆಯಿಂದಯಾರಾದರೂ ವಾಹನ ಚಾಲನೆಗೆ ಮುಂದಾಗಬಹುದು. ಅಂತವರನ್ನು ವಾಹನಚಾಲನೆಗೆ ಅವಕಾಶ ಕೊಡದೇ ಪುಟ್‌ಪಾತ್‌ನಲ್ಲಿ ನಡೆಯಲು ಕಳಿಸಬೇಕಾಗುತ್ತದೆ. ಹಾಗೆಯೇ ಲೋಕದಲ್ಲಿ ಜ್ಞಾನಯೋಗಿಗಳಿಗಿರುವ ಗೌರವ-ಆದರಗಳನ್ನು ಕಂಡುಕರ್ಮವನ್ನು ಬಿಟ್ಟುಜ್ಞಾನಕ್ಕೆ ಕೈ ಹಾಕುವವನನ್ನುತಿರುಗಿಕರ್ಮಯೋಗಕ್ಕೆ ಕಳಿಸಬೇಕಾಗುತ್ತದೆ. ಈ ಕೆಲಸವನ್ನು ಜ್ಞಾನಯೋಗಿಗಳೇ ಮಾಡಬೇಕಾಗುತ್ತದೆ. ಜ್ಞಾನಯೋಗದಅರ್ಹತೆಯಿಲ್ಲದವನನ್ನುಕರ್ಮಯೋಗದಲ್ಲಿ ಮುನ್ನೆಡೆಯಲು ಪ್ರೇರಣೆ ನೀಡಬೇಕಾಗುತ್ತದೆ. ಹೀಗೆ ಪ್ರೇರಣೆ ನೀಡುವುದುಜ್ಞಾನಯೋಗಿಯ ಹೊಣೆಗಾರಿಕೆ. ಈ ಹೋಣೆಗಾರಿಕೆಯನ್ನು ಈ ಶ್ಲೋಕದಲ್ಲಿ ಭಗವಂತನು ಸೂಚಿಸಿದ್ದಾನೆ. ಹಿಂದೆ ಹೇಳಿದಂತೆ ತನ್ನಜ್ಞಾನಯೋಗಕ್ಕೆ ಭಂಗ ಬರದಂತೆಕರ್ಮವನ್ನು ಮಾಡುವ ಮೂಲಕ ಇತರರಿಗೆ ಅವನು ಮಾರ್ಗದರ್ಶನ ಮಾಡಬೇಕಾಗುತ್ತದೆ.