ಶಾಸ್ತ್ರ ಚಿಂತನ ಸತ್ರ

posted in: Events | 0

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶಾಂಕರ ಸರಸ್ವತೀ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರ ಚಿಂತನ ಸತ್ರ ನಡೆಯಿತು. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದರು.

ಡಾ. ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ, ಡಾ. ಮಹಾಬಲೇಶ್ವರ ಭಟ್ಟ ಕಿಚ್ಚಿಕೇರಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಸರಗೋಡಿನ ವಿ. ಶೃತಿಪ್ರಿಯ ಶರ್ಮಾ ಮತ್ತು ವಿ. ನಾಗರಾಜ ಹೆಗಡೆ ಮಣಿಗಾರ ಇವರುಗಳು ಮೀಮಾಂಸಾ ಶಾಸ್ತ್ರದ ಕುರಿತು ವಿಷಯವನ್ನು ಪ್ರಸ್ತುತಗೊಳಿಸಿದರು.