Publications

ಗೀತಾಂತರಂಗ – ಸಂಪುಟ 1

(ಭಗವದ್ದೀತೆಯ 1 ರಿಂದ  6 ನೆ ಅಧ್ಯಾಯದ ವರೆಗಿನ ವ್ಯಾಖ್ಯಾನ)

ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತಿದ್ದ “ಗೀತಾಂತರಂಗ” 1 ರಿಂದ 566 ವರೆಗಿನ “ ಅಂಕಣ” ಬರಹಗಳನ್ನು ಸಂಕಲಿಸಿ ಕೊಡಲಾಗಿದ್ದು, ಅರ್ಜುನ ವಿಷಾದ ಯೋಗ, ಸಾಂಖ್ಯ ಯೋಗ, ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಧ್ಯಾನಯೋಗ ಎಂಬ 1 ರಿಂದ 6 ನೇ ಅಧ್ಯಾಯಗಳ  ಶ್ಲೋಕಗಳ ಸಂಕ್ಷಿಪ್ತಾರ್ಥ ಹಾಗೂ ಸುಂದರವೂ ಸರಳವೂ ಆದ ವ್ಯಾಖ್ಯಾನ ಇಲ್ಲಿದೆ.

ಅನೇಕ ಲೌಕಿಕ ಉದಾಹರಣೆಗಳನ್ನೂ, ವೇದ-ಸ್ಮೃತಿ-ಶಾಸ್ತ್ರ, ಪೌರಾಣಿಕ ಹಾಗೂ ಕಾವ್ಯಗಳ ಆಧಾರ ಮತ್ತು ದೃಷ್ಟಾಂತಗಳನ್ನೂ ಕೊಡಲಾಗಿದ್ದು ಸುಲಭವಾಗಿ ಅರ್ಥಬೋಧ ಆಗುವಂತಿದೆ ಮೇಲೆ ಹೇಳಿದ ಆರು ಅಧ್ಯಾಯಗಳ ಮೂಲವನ್ನೂ ಕೊಡಲಾಗಿದ್ದು ಶ್ರೀಮದ್ ಭಗವದ್ಗೀತೆಯ ಅಂತರಂಗವನ್ನು ಕಾಣಲು ತುಂಬ ಉಪಯುಕ್ತವಾದ ಗೀತೆಗೆ ಹಿಡಿದ ಕನ್ನಡಿ ಇದಾಗಿದೆ. ಅಭ್ಯಾಸಿಗಳಿಗೂ, ಜಿಜ್ಞಾಸುಗಳಿಗೂ  ಪ್ರಿಯವಾಗುವ ಈ ಗ್ರಂಥ ಗೀತೆಯ ಮೇಲೆ  ಚಿಂತನ ಧಾರೆಯನ್ನು ಹರಿಸಿದ ಉತ್ಕೃಷ್ಠ ಗ್ರಂಥವಾಗಿದೆ.

ಗೀತಾಂತರಂಗ – ಸಂಪುಟ 2

(ಭಗವದ್ದೀತೆಯ 7 ರಿಂದ 14 ನೆ ಅಧ್ಯಾಯದ ವರೆಗೆ)

ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತಿದ್ದ “ಗೀತಾಂತರಂಗ” 567 ರಿಂದ 933 “ ಅಂಕಣ” ಬರಹಗಳನ್ನು ಸಂಕಲಿಸಿ ಕೊಡಲಾಗಿದ್ದು, ಜ್ಞಾನವಿಜ್ಞಾನ ಯೋಗ, ಅಕ್ಷರಬ್ರಹ್ಮ ಯೋಗ, ರಾಜವಿದ್ಯಾ ರಾಜಗುಹ್ಯ ಯೋಗ, ವಿಭೂತಿ ಯೋಗ, ವಿಶ್ವರೂಪ ದರ್ಶನ, ಭಕ್ತಿಯೋಗ ಎಂಬ 7 ರಿಂದ 12 ಅಧ್ಯಾಯಗಳ  ಶ್ಲೋಕಗಳ ಸಂಕ್ಷಿಪ್ತಾರ್ಥ ಹಾಗೂ ಸುಂದರವೂ ಸರಳವೂ ಆದ ವ್ಯಾಖ್ಯಾನ ಇಲ್ಲಿದೆ. ಅನೇಕ ಲೌಕಿಕ ಉದಾಹರಣೆಗಳನ್ನೂ, ವೇದ-ಸ್ಮೃತಿ-ಶಾಸ್ತ್ರ, ಪೌರಾಣಿಕ ಹಾಗೂ ಕಾವ್ಯಗಳ ಆಧಾರ ಮತ್ತು ದೃಷ್ಟಾಂತಗಳನ್ನೂ ಕೊಡಲಾಗಿದ್ದು ಸುಲಭವಾಗಿ ಅರ್ಥಬೋಧ ಆಗುವಂತಿದೆ.

ಮೇಲೆ ಹೇಳಿದ ಆರು ಅಧ್ಯಾಯಗಳ ಮೂಲವನ್ನೂ ಕೊಡಲಾಗಿದ್ದು ಶ್ರೀಮದ್ ಭಗವದ್ಗೀತೆಯ ಅಂತರಂಗವನ್ನು ಕಾಣಲು ತುಂಬ ಉಪಯುಕ್ತವಾದ ಗೀತೆಗೆ ಹಿಡಿದ ಕನ್ನಡಿ ಇದಾಗಿದೆ. ಅಭ್ಯಾಸಿಗಳಿಗೂ, ಜಿಜ್ಞಾಸುಗಳಿಗೂ  ಪ್ರಿಯವಾಗುವ ಈ ಗ್ರಂಥ ಗೀತೆಯ ಮೇಲೆ  ಚಿಂತನ ಧಾರೆಯನ್ನು ಹರಿಸಿದ ಉತ್ಕøಷ್ಟ ಗ್ರಂಥವಾಗಿದೆ. ವೇದಮಂತ್ರ ಹೋಮಕ್ಕೆ ಅತ್ಯಂತ ಉಪಯುಕ್ತ ಪುಸ್ತಕವಾಗಿದೆ. ಕ್ಯಾಲಿಕೋ ಬೈಂಡಿಂಗಿನಲ್ಲಿದೆ.

ಅದ್ವೈತಾನುಭವ

ಲೇ:  ವಿ.ಎಂ. ಉಪಾದ್ಯಾಯ

ಇಲ್ಲಿ ಲೇಖಕರು ಪ್ರಾಚ್ಯ ಮತ್ತು ಪಾಶ್ಚಿಮಾತ್ಯ ತತ್ತ್ವಶಾಸ್ತ್ರಗಳ ಅಡಿಯಲ್ಲಿ ಅದ್ವೈತಾನುಭವದ ವಿಶ್ಲೇಶಣೆಯನ್ನು  ಮಾಡಿದ್ದಾರೆ. ಪ್ರಶ್ನಿಸುವ ಸತ್ಯಕಾಮ ಮತ್ತು ಉತ್ತರಿಸುವ ಅದ್ವೈತಿಗಳ ಮೂಲಕ ಎದುರಾಗುವ ಅನೇಕ ಸಂದೇಹಗಳಿಗೆ ಸಮಾಧಾನವನ್ನೂ,  ಪರಿಹಾರವನ್ನೂ ಇಲ್ಲಿ ಅರ್ಥಪೂರ್ಣವಾಗಿಯೂ, ಸ್ವಾರಸ್ಯಕರವಾಗಿಯೂ ನಿರೂಪಿಸಿದ್ದಾರೆ. ಸತ್ಯಕಾಮನ ಅರ್ಥವತ್ತಾದ 4ಂ5 ಪ್ರಶ್ನೆಗಳಿಗೆ ಅದ್ವೈತಿ ಉತ್ತರಿಸಿದಾಗ ಸತ್ಯಕಾಮ (ಜಿಜ್ಞಾಸು) 406 ರಲ್ಲಿ ಧನ್ಯೋಸ್ಮಿ ಎಂದು ಅರಿವಿನ ಸಮಾಧಾನ ಹೊಂದುತ್ತಾನೆ.  ಇದೊಂದು ಅಮೂಲ್ಯ ಕೃತಿಯಾಗಿದ್ದು ಜಿಜ್ಞಾಸುಗಳಿಗೆ ಉಪಯುಕ್ತವಾದುದಾಗಿದೆ.  ಪುಸ್ತಕ ಸುಂದರ ಮುಖಪುಟ ಹೊತ್ತು ಓದುಗರನ್ನು ಆಕರ್ಷಿಸುತ್ತಿದೆ. ಕ್ಯಾಲಿಕೋ ಬೈಂಡಿಂಗಿನಲ್ಲಿದೆ.

ಅದ್ವೈತಾನುಸಂಧಾನ

ಲೇ : ವಿ. ಎಂ. ಉಪಾಧ್ಯಾಯ

ಪರಬ್ರಹ್ಮ ಅಥವಾ ಪರಮಾತ್ಮನನ್ನು ಕುರಿತು ಮಾಡುವ ಅನ್ವೇೀಷಣೆಯೇ ಅನುಸಂಧಾನ.  ಅಂತಹ ಅನುಸಂಧಾನವನ್ನು ಕೈಗೊಂಡಿರುವ ಲೇಖಕರು  ವೇದವಾಙ್ಮಯದ ತಳಹದಿಯಮೇಲೆ ಪರತತ್ತ್ವದ  ಅನೇಕ ಸಂಗತಿಗಳನ್ನು ಸರಳವಾಗಿಯೂ ಸುಂದರವಾಗಿಯೂ, ಉದಾಹರಣೆ ಸಹಿತ ಇಲ್ಲಿ ವಿವರಿಸಿದ್ದಾರೆ.. 25 ಅಧ್ಯಾಯಗಳಲ್ಲಿ ತೆರೆದುಕೊಂಡಿರುವ ಈ ನಿರೂಪಣೆ ಲೌಕಿಕ ಮತ್ತು ಅಲೌಕಿಕ ಸಂಗತಿಗಳ ಬಗ್ಗೆ ವಿವರಿಸುವುದರಿಂದ ಜ್ಞಾನಾರ್ಥಿಗಳಾದ ಪಂಡಿತ ಪಾಮರರೆಲ್ಲರಿಗೂ ಮೆಚ್ಚುಗೆಯಾಗುವುದರಲ್ಲಿ ಸಂಶಯವಿಲ್ಲ.

*In Books order page Books rate includes additional costs and shipping charges also.