ದೇವರು ಕೂಡ ನಿದ್ದೆ ಮಾಡುತ್ತಾನೆಯೇ?
ಎಲ್ಲ ಪ್ರಾಣಿಗಳಿಗೆ ಶ್ರಮ ಜಾಸ್ತಿಯಾದಾಗ ನಿದ್ರೆ ಬರುತ್ತದೆ. ವಿಶ್ರಾಂತಿಯಲ್ಲಿ ಶ್ರಮ ಪರಿಹಾರವಾಗುತ್ತದೆ. ಭಗವಂತನಿಗೆ ಶ್ರಮವಿಲ್ಲ, ನಿದ್ರೆಯಿಂದ ಶ್ರಮದ ಪರಿಹಾರವೂ ಇಲ್ಲ. ಪಂಚ ಮಹಾಭೂತಗಳ ಕಾರ್ಯವಾಗಿರುವ ಶರೀರಕ್ಕೆ ಮತ್ತು ಇಂದ್ರಿಯಗಳಿಗೆ ಶ್ರಮ ಇರುತ್ತದೆ. ಮನಸ್ಸು ಕೂಡ ಪಂಚ ಮಹಾಭೂತಗಳಿಂದಲೇ ಆದುದರಿಂದ ಅದಕ್ಕೆ ಶ್ರಮವಿರುತ್ತದೆ. ಭಗವಂತನಿಗೆ ಪಂಚಮಹಾಭೂತಗಳ ದೇಹೇಂದ್ರಿಯಗಳಿಲ್ಲ. ಅವನ ಮೂಲಸ್ವರೂಪದಲ್ಲಿ ಅವನನ್ನು ನೋಡಿದರೆ ಅವನಿಗೆ ಪಂಚ ಮಹಾಭೂತಗಳ ಶರೀರೇಂದ್ರಿಯಗಳಿಲ್ಲ. Read More
ವೇದಾಂತದ ಎಲ್ಲ ಸಿದ್ಧಾಂತಗಳ ಸಾರ ಏನು?
ಭಕ್ತಿ, ಜ್ಞಾನ ಮುಂತಾದ ಯಾವುದಾದರೂ ಒಂದು ಉಪಾಯದ ಮೂಲಕ ಪರಮಾತ್ಮನನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಕೋತಿಯ ಮರಿಯು ತಾಯಿ ಕೋತಿಯನ್ನು ಬಲವಾಗಿ ಹಿಡಿದುಕೊಳ್ಳುವಂತೆ ಹಿಡಿದುಕೊಳ್ಳಬೇಕು. Read More
ಭಾರತೀಯತೆಗೆ ಶ್ರೀ ಶಂಕರ ಭಗವತ್ಪಾದರು ಕೊಟ್ಟ ದಿವ್ಯ ಭಾಷ್ಯ
ವೇದಗಳಲ್ಲಿಯೇ ಉಪನಿಷತ್ತುಗಳು ಬರುವುದರಿಂದ ಉಪನಿಷತ್ತುಗಳಿಗೂ ಸಾಯಣಭಾಷ್ಯವಿದೆ. ಉಪನಿಷತ್ತುಗಳಿಗೆ ಅರ್ಥವಿವರಣೆ ನೀಡುವಾಗ ಶ್ರೀ ಶಂಕರರ ಚಿಂತನಾ ಶೈಲಿಯನ್ನೇ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಹೀಗೆ ವೇದಗಳಿಗೆ ಅರ್ಥ ಮಾಡುವ ವಿಶಿಷ್ಟ ಕ್ರಮದ ಮೊದಲ ಆವಿಷ್ಕಾರವಾದದ್ದು ಶ್ರೀ ಶಂಕರರಿಂದ. ಇಂದಿಗೂ ಅದೇ ಕ್ರಮ ಮುಂದುವರೆದಿದೆ. Read More
ಕಾಲವನ್ನು ತಪ್ಪುಗಳಿಲ್ಲದೆ ಕಳೆಯುವುದು ಮುಖ್ಯ
ಸಂತೋಷದಲ್ಲಿ ಕಾಲ ಕಳೆಯುತ್ತಿರುವಾಗ ತಪ್ಪು ಕೆಲಸಗಳಾಗಿದ್ದರೆ ಆ ಸಮಯದಲ್ಲಿ ಏನೂ ಅನಿಸಲಾರದು. ಸಂತೋಷದ ಅವಧಿ ಮುಗಿದ ನಂತರ ಹಿಂದೆ ಆದ ತಪ್ಪಿನ ಬಗ್ಗೆ ’ಇದು ತಪ್ಪು’ ಎಂಬ ಅರಿವು ಮೂಡುತ್ತದೆ. ತಪ್ಪಿನ ಬಗ್ಗೆ ಪಶ್ಚಾತ್ತಾಪ ಶುರುವಾಗುತ್ತದೆ. ಕೆಲವೊಮ್ಮೆ ಈ ಪಶ್ಚಾತ್ತಾಪಕ್ಕೆ ಕೊನೆಯಿರುವುದಿಲ್ಲ. ಜೀವನ ಪರ್ಯಂತ ಪಶ್ಚಾತ್ತಾಪವೇ ಆಗಿರುತ್ತದೆ. Read More
ಮನಸ್ಸಿದ್ದರೆ ಮಾರ್ಗ
ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಈ ಸ್ಥಿತಿ ಇರುತ್ತದೆ, ಸ್ವಲ್ಪ ಪ್ರಯತ್ನಿಸಿದರೂ ಬೇಗ ಬರುತ್ತದೆ. ದಿನಾಲೂ ಯೋಗಾಸನ ಪ್ರಾಣಾಯಾಮದಿಗಳನ್ನು ಮಾಡುವವನಿಗೆ ಈ ಸ್ಥಿತಿ ಕ್ರಮೇಣ ಬರುತ್ತದೆ. ತೀವ್ರ ಭಯ, ತುಂಬಾ ಶೋಕ, ಅತಿಯಾದ ಮನಸ್ತಾಪಗಳು ಮನಸ್ಸಿನ ಸರಿಯಾದ ಸ್ಥಿತಿಗೆ ಪ್ರಬಲ ವಿರೋಧಿಗಳು. Read More
ಉತ್ತಮ ಗತಿಗೆ ಸೂರ್ಯೋಪಾಸನೆ
ಶ್ರೇಷ್ಠ ಸಾಧಕನು ಸೂರ್ಯನ ಮೂಲಕ ಉತ್ತರಾಯಣ ಮಾರ್ಗದಲ್ಲಿ ಸಾಗುವುದನ್ನು ಉಪನಿಷತ್ತು ಹೇಳುತ್ತದೆ. ” ತಪಃ ಶ್ರದ್ಧೇ ಯೇ ಹ್ಯುಪವಸಂತಿ ಅರಣ್ಯೇ ಶಾಂತಾ ವಿದ್ವಾಂಸೋ ಭೈಕ್ಷ್ಯಾಚರ್ಯೇಣ ಚರಂತಃ l ಸೂರ್ಯದ್ವಾರೇಣ ತೇ ವಿರಜಾ: ಪ್ರಯಾಂತಿ …. ll” Read More
ಸಾತ್ವಿಕ ಸಾಧಕತ್ವ ರಾಜಸಕ್ಕಿಂತ ಶ್ರೇಷ್ಠ
ಹೆಚ್ಚಿನ ಸಾಧಕರು ರಾಜಸರಾಗಿರುವುದರಿಂದ ಅವರಿಗೆ ಉತ್ಸಾಹ ತುಂಬಲು “ನೀನು ಗೆಲ್ಲುತ್ತೀಯೆ , ಪ್ರಯತ್ನ ಮಾಡು” ಎಂದು ಹೇಳಿ ಬೆನ್ನು ತಟ್ಟಬೇಕಾಗುತ್ತದೆ. ಗೆಲುವಿನ ಆಸೆ ಹುಟ್ಟಿಸುವ ಮೂಲಕ ಪ್ರಯತ್ನದಲ್ಲಿ ಮುಂದುವರಿಯುವಂತೆ ಮಾಡಬೇಕಾಗುತ್ತದೆ. ಭಗವಂತನು ಭಗವದ್ಗೀತೆಯಲ್ಲಿ ಒಂದು ಸಲ ಹಾಗೆ ಮಾಡಿದ್ದಾನೆ – “ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ” Read More
ಯಜ್ಞ ಮತ್ತು ವಿಶ್ವಾಸಗಳಿಂದ ಕುಟುಂಬ ಸಾಮರಸ್ಯ
ಗೃಹಸ್ಥಾಶ್ರಮದಲ್ಲಿರುವಾಗ ಯಜ್ಞಗಳನ್ನು ಮಾಡಬೇಕು. ಅಗ್ನಿಯಲ್ಲಿ ಹವಿಸ್ಸಿನ ಸಮರ್ಪಣೆಯಷ್ಟೇ ಯಜ್ಞವಲ್ಲ. ಜಪ,ಪೂಜೆಗಳೂ ಯಜ್ಞಗಳೇ, ನಾಮ ಸಂಕೀರ್ತನೆಯೂ ಯಜ್ಞವೇ. ಕುಟುಂಬದ ವ್ಯವಸ್ಥೆಯಲ್ಲಿದ್ದುಕೊಂಡು ಇಂತಹ ಯಜ್ಞಗಳನ್ನು ಮಾಡಬೇಕು. Read More
ಅವನ ವಿಸ್ಮರಣೆಯಿಂದ ಕಳೆದುಹೋಗದಿರಲಿ
ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಯೋಗಿಗಳು ಶರೀರವನ್ನು ತ್ಯಜಿಸಿ, ಊರ್ಧ್ವಗತಿಯ ಮೂಲಕ ಪರಮಾತ್ಮನನ್ನು ಪಡೆಯುವ ಕ್ರಮವನ್ನು ತಿಳಿಸಿದ್ದಾರೆ. ಆ ಕ್ರಮದಂತೆ ಮರಣ ಪ್ರಕ್ರಿಯೆಯಾಗಲು ತುಂಬಾ ದೃಢವಾದ ಸಾಧನೆ ಬೇಕು. ಆದುದರಿಂದ ಸುಲಭವಾದ ಉಪಾಯವನ್ನು ಅಲ್ಲಿಯೇ ಮುಂದೆ ಭಗವಂತನೇ ಕೊಟ್ಟಿದ್ದಾನೆ. Read More
ಋಷಿಗಳ ತ್ರಿಕಾಲ ಜ್ಞಾನ
ಈ ಸೂತ್ರವೂ ಹೇಳುವಂತೆ ಯಾವುದೇ ವಸ್ತುವಿನ ಧರ್ಮ ಲಕ್ಷಣ ಅವಸ್ತಾ ಎಂಬ ಮೂರು ಪರಿಣಾಮಗಳಲ್ಲಿ ಮನಸ್ಸನ್ನು ಸಂಯಮ ಮಾಡುವುದರಿಂದ ಆ ವಸ್ತುವಿನ ತ್ರಿಕಾಲ ಜ್ಞಾನ ಉಂಟಾಗುತ್ತದೆ. ಸಹಿಯಮ ಎಂದರೆ ಧಾರಣ ಜಾಣ ಮತ್ತು ಸಮಾಧಿ ಇವು ಮೂರು ಏಕಾಗ್ರತೆಯ ಮೂರು ಸೋಪಾನಗಳೆಂದು ಹೇಳಬಹುದು. Read More