ಯಕ್ಷಗಾನ,ತಾಳಮದ್ದಲೆಯಲ್ಲಿ ತತ್ವ ನೀಡಿದರೆ ಸನ್ಮಾರ್ಗ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಯಕ್ಷ ಸಂಭ್ರಮ ಟ್ರಸ್ಟ್ ಹಮ್ಮಿಕೊಂಡ ದಶಕಂ ಧರ್ಮ ಲಕ್ಷಣಂ ತಾಳಮದ್ದಲೆ ದಶಾಹದ ಹಿನ್ನೆಲೆಯಲ್ಲಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಅವನ ವಿಸ್ಮರಣೆಯಿಂದ ಕಳೆದುಹೋಗದಿರಲಿ

posted in: Gurubodhe | 0

ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಯೋಗಿಗಳು ಶರೀರವನ್ನು ತ್ಯಜಿಸಿ, ಊರ್ಧ್ವಗತಿಯ ಮೂಲಕ ಪರಮಾತ್ಮನನ್ನು ಪಡೆಯುವ ಕ್ರಮವನ್ನು ತಿಳಿಸಿದ್ದಾರೆ. ಆ ಕ್ರಮದಂತೆ ಮರಣ ಪ್ರಕ್ರಿಯೆಯಾಗಲು ತುಂಬಾ ದೃಢವಾದ ಸಾಧನೆ ಬೇಕು. ಆದುದರಿಂದ ಸುಲಭವಾದ ಉಪಾಯವನ್ನು ಅಲ್ಲಿಯೇ ಮುಂದೆ ಭಗವಂತನೇ ಕೊಟ್ಟಿದ್ದಾನೆ. Read More

ಋಷಿಗಳ ತ್ರಿಕಾಲ ಜ್ಞಾನ

posted in: Gurubodhe | 0

ಈ ಸೂತ್ರವೂ ಹೇಳುವಂತೆ ಯಾವುದೇ ವಸ್ತುವಿನ ಧರ್ಮ ಲಕ್ಷಣ ಅವಸ್ತಾ ಎಂಬ ಮೂರು ಪರಿಣಾಮಗಳಲ್ಲಿ  ಮನಸ್ಸನ್ನು  ಸಂಯಮ ಮಾಡುವುದರಿಂದ ಆ ವಸ್ತುವಿನ ತ್ರಿಕಾಲ ಜ್ಞಾನ ಉಂಟಾಗುತ್ತದೆ. ಸಹಿಯಮ ಎಂದರೆ ಧಾರಣ ಜಾಣ ಮತ್ತು ಸಮಾಧಿ ಇವು ಮೂರು ಏಕಾಗ್ರತೆಯ ಮೂರು ಸೋಪಾನಗಳೆಂದು ಹೇಳಬಹುದು. Read More

ಶರನ್ನವರಾತ್ರಿ; ಸ್ವರ್ಣವಲ್ಲೀ ಶ್ರೀ ಆಶೀರ್ವಚನ

posted in: Press Note/News | 0

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ವಿಜಯ ದಶಮಿ ಹಿನ್ನಲೆಯಲ್ಲಿ ಭಕ್ತರನ್ನು ಉದ್ದೇಶಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಸ್ವರ್ಣವಲ್ಲೀ ಮಠದಲ್ಲಿ ದೇವಿಯ ಆರಾಧನೆ ಆರಂಭ

posted in: Press Note/News | 0

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸರ್ವರ ಇಷ್ಟಾರ್ಥ ಸಿದ್ಧಿಸುವ ದೇವಿಯ ಆರಾಧನೆ ಆರಂಭಗೊಂಡಿತು. ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಅವರ ಕರಕಮಲ ಸಂಜಾತರಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ವ್ರತಾಚರಣೆಯ ಅಂಗವಾಗಿ ನಡೆಯುವ ಎಲ್ಲಾ ವೈದಿಕ ಕಾರ್ಯಕ್ರಮಗಳನ್ನು ಮಹಾಸಂಕಲ್ಪದ ಮೂಲಕ ಆರಂಭಿಸಲಾಯಿತು. ಪ್ರತಿನಿತ್ಯವೂ ಉಭಯ ಶ್ರೀಗಳು ಶ್ರೀ ಮಾತೆಯ ವಿಶೇಷ ಪೂಜೆಯನ್ನು , ಶ್ರೀಚಕ್ರಾರ್ಚನೆಯನ್ನು, ಮಹಾಮಂಗಳಾರತಿಯನ್ನು ನೆರವೇರಿಸುತ್ತಾರೆ. ವೇದಗಳ ಪಾರಾಯಣ, ಅಧ್ಯಾತ್ಮ ರಾಮಾಯಣ ಪಾರಾಯಣ, ದೇವೀ ಭಾಗವತ ಪಾರಾಯಣ, ಸಪ್ತಶತೀ ಪಾರಾಯಣ, ಶತರುದ್ರಾಭಿಷೇಕ ಈ ಎಲ್ಲಾ ವೈದಿಕ ಕಾರ್ಯಕ್ರಮಗಳು ಆರಂಭಗೊಂಡವು. ನಿತ್ಯವೂ ಅನೇಕ ವಿದ್ವಾಂಸರುಗಳಿಂದ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ದೇವೀ ಆರಾಧನೆಗೆ ಪ್ರಶಸ್ತವಾದ ಈ ಪುಣ್ಯತಮವಾದ ಪರ್ವದಲ್ಲಿ, ದೇವೀ ಆರಾಧನೆಯನ್ನು ಅನೇಕ ವರ್ಷಗಳಿಂದ, ಅನೇಕ ಯತಿಗಳು ನಿಷ್ಠೆಯಿಂದ ನಡೆಸಿಕೊಂಡು ಬಂದ ದಿವ್ಯ ಕ್ಷೇತ್ರವಾಗಿದೆ. Read More