ಶರೀರವನ್ನೇ ತಾನಾಗಿ ಗುರುತಿಸಿಕೊಳ್ಳವಿಕೆ ಅಜ್ಞಾನ
’ಈ ಯೋಗವನ್ನು ಸೃಷ್ಟಿಯ ಆದಿಯಲ್ಲಿ ನಾನು ವಿವಸ್ವಂತನಿಗೆ(ಸೂರ್ಯ ನಿಗೆ) ಹೇಳಿದೆ. ವಿವಸ್ವಂತನು ತನ್ನ ಮಗನಾದ ವೈವಸ್ವತ ಮನುವಿಗೆ ಹೇಳಿದನು. ಮನುವು ಇದನ್ನು ತನ್ನ ಮಗನಾದ ಇಕ್ಷ್ವಾಕುವಿಗೆ ಹೇಳಿದನು. (ಇಕ್ಷ್ವಾಕುವು ಸೂರ್ಯವಂಶದ ಮೊದಲ ರಾಜ. ಮುಂದೆ ಅವನ ವಂಶದಲ್ಲಿಯೇ ಶ್ರೀರಾಮನ ಅವತಾರ.ತ್ರೇತಾಯುಗದಲ್ಲಿ ರಾಮಾವತಾರದ ನಂತರ ಈಗ ದ್ವಾಪರಯುಗದ ಕೃಷ್ಣಾವತಾದಲ್ಲಿ ಭಗವಂತನು ಈ ಮಾತನ್ನು ಹೇಳುತ್ತಿದ್ದಾನೆ.) ಇಕ್ಷ್ವಾಕುವಿನಿಂದ ಮುಂದೆ ಅವನ ವಂಶದಲ್ಲಿ ಬಂದ ರಾಜರ್ಷಿಗಳು ಈ ಯೋಗವನ್ನು ಮುಂದುವರೆಸಿಕೊಂಡು ಬಂದರು. Read More