ದೇವಿ ಶ್ರೀ ರಾಜರಾಜೇಶ್ವರೀ (ಶ್ರೀ ಶಾರದಾಂಬಾ)

ಆದಿಶಂಕರಾಚಾರ್ಯರಿಗೆ ಒಲಿದು ಬಂದ ಶಾರದಾಂಬೆ ಶಂಕರ ಪರಂಪರೆಯ ಗುರುಪೀಠದಲ್ಲಿ ವ್ಯಾಖ್ಯಾನ ಸಿಂಹಾಸನಾಧಿಷ್ಠತ ದೇವತೆಯಾಗಿ ಶಕ್ತಿ, ವೈರಾಗ್ಯಗಳನ್ನು ಅನುಗ್ರಹಿಸುವ ಜ್ಞಾನಾಧಿದೇವತೆ ಇವಳು. ಸಕಲ ವಿದ್ಯಾದಿಶಾರದೆಯಾದ ಶಾರದೆ ಶ್ರೀಮಠದಲ್ಲಿ ನೆಲೆ ನಿಂತು ವಾಕ್ ಸಿದ್ಧಿ, ಬುದ್ಧಿ, ಮಾತು, ಆರೋಗ್ಯ, ಸಂಪತ್ತು ಇತ್ಯಾದಿ ಕೋರಿ ಮನದಲ್ಲಿ ಪ್ರಾರ್ಥಿಸಿದವರಿಗೆ ಫಲ ನೀಡಿದ ಉದಾಹರಣೆ ಜನಜನಿತವಾಗಿದೆ. ಯೋಗಮಾಯೆಯಾಗಿ, ಆದಿಶಕ್ತಿಯಾಗಿ ದಾರಿದ್ರ್ಯ ದುಃಖ ನಿವಾರಿಸುವ ತಾಯಿ ಇವಳು. ಈ ಪೀಠದ 2ನೇ ಯತಿಗಳಾದ ಶ್ರೀ ನಾರಾಯಣೇಂದ್ರ ಸರಸ್ವತೀಗಳವರು ವಿಂಧ್ಯಪರ್ವತದಲ್ಲಿ ತಪಸ್ಸಿನಿಂದ ಆರಾಧಿಸಿ ಶ‍್ರೀ ದೇವಿಯನ್ನು ಒಲಿಸಿಕೊಂಡಿದ್ದರು. 53ನೇ ಯತಿಗಳಾದ ಶ್ರೀಮತ್ ಸರ್ವಜ್ಞೇಂದ ಸರಸ್ವತಿಗಳು ಅವ್ಯಾಹತ ಸುಧೀರ್ಘ ತಪೋನಿಷ್ಠೆಯಿಂದ ಶ್ರೀ ಮಾತೆಯನ್ನು ಆರಾಧಿಸಿ ಸಿದ್ಧಿಯನ್ನು ಪಡೆದಿದ್ದರು. ಇದು ಸಂಸ್ಥಾನದ ಆರಾಧ್ಯ ದೇವರು.