


30-11-2025 ಭಾನುವಾರ – ಶ್ರೀ ಗುರುಗಳು ರಾಯಚೂರಿನಲ್ಲಿ
ಗೀತಾ ಜಯಂತಿಯ ಆಚರಣೆಯ ಅಂಗವಾಗಿ ರಾಯಚೂರಿನ ಭಕ್ತಾದಿಗಳು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳನ್ನು ರಾಯಚೂರಿಗೆ ಆಹ್ವಾನಿಸಿದ್ದರು.
ಶಾಲಾ ಮಕ್ಕಳು ಮತ್ತು ಹಿರಿಯರು ಸೇರಿದಂತೆ ಅನೇಕರು ಭಗವದ್ಗೀತೆಯ 11ನೆ ಅಧ್ಯಾಯವನ್ನು ಪಾರಾಯಣ ಮಾಡಿದರು. ಶ್ರೀ ಗುರುಗಳು ಭಗವದ್ಗೀತೆಯ ಧ್ಯಾನ ಶ್ಲೋಕಗಳ ಅರ್ಥ ಮತ್ತು 11ನೆ ಅಧ್ಯಾಯದ ಕಡೆಯ ಶ್ಲೋಕದ ಅರ್ಥವನ್ನು ಅನೇಕ ಉದಾಹರಣೆಗಳ ಮೂಲಕ….. ಕಥೆಗಳನ್ನು ಹೇಳುತ್ತಾ ಆಶೀರ್ವಚನ ನೀಡಿದರು.
ಶ್ರೀಗುರುಗಳ ಆಶೀರ್ವಚನವು ನಿಜಕ್ಕೂ ಅಮೃತದ ನುಡಿಗಳು. ಬಲು ಸೊಗಸಾಗಿತ್ತು ಪ್ರೇರಣದಾಯಕವಾಗಿತ್ತು. ಸಮಯ ಹೋದದ್ದೇ ತಿಳಿಯಲಿಲ್ಲ. ಇನ್ನೂ ಪ್ರವಚನ ಮುಂದುವರಿಸಬೇಕಿತ್ತು…. ಎಂದು ಭಕ್ತಾದಿಗಳು ಉದ್ಗರಿಸಿದರು.
ರಂಗೋಲಿ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಶ್ರೀಗುರುಗಳಿಂದ ಬಹುಮಾನವನ್ನು ವಿತರಿಸಲಾಯಿತು.
ರಾಯಚೂರಿನ ಭಕ್ತ ದಂಪತಿಳೋರ್ವರು ಧೂಳಿ ಪಾದ ಪೂಜೆಯನ್ನು ನೆರವೇರಿಸಿದರು. ಶ್ರದ್ಧೆಯಿಂದ, ವಿಜೃಂಭಣೆಯಿಂದ ಆಯೋಜನೆಗೊಂಡಿದ್ದ ಗೀತಾ ಜಯಂತಿಯ ಕಾರ್ಯಕ್ರಮವು ಶ್ರೀ ಗುರುಗಳ ಆಶೀರ್ವಚನಗಳಿಂದ ಸಂಪನ್ನಗೊಂಡಿತು.
|| ಅವಧೂತ ಚಿಂತಾಮಣಿ ಶ್ರೀ ಗುರುದೇವ ದತ್ತ – ಜಯ ಜಯ ರಘುವೀರ ಸಮರ್ಥ||