
23-11-2025ರಂದು ಹುಬ್ಬಳ್ಳಿ ಧಾರವಾಡದ ಜಿಲ್ಲಾ ಮಟ್ಟದ ಭಗವದ್ಗೀತಾ ಅಭಿಯಾನದ ಸ್ಪಾ
ಸ್ಪರ್ಧೆಗಳು ಭಾವದೀಪ ಶಾಲೆಯಲ್ಲಿ ಜರುಗಿತು

ಬಳ್ಳಾರಿ ಜಿಲ್ಲೆಯ ಗೀತಾ ಅಭಿಯಾನದ ಸ್ಪರ್ಧಾ ಕಾರ್ಯಕ್ರಮಗಳು ಶ್ರೀ ಸಾಧನ ಯೋಗ ಕೇಂದ್ರ ಗಾಂಧಿನಗರ ಬಳ್ಳಾರಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ಶಾಲಾ ಮಕ್ಕಳು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ಸ್ಪರ್ಧಾ ನಿರ್ಣಾಯಕ ರಾಗಿ ಶ್ರೀಮತಿ ಮಾಧವಿ ಲತಾ ಹಾಗೂ ಶ್ರೀಮತಿ ಅನುರಾಧವರು ನಡೆಸಿಕೊಟ್ಟರು.
ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಯುತ ಪಾಪಯ್ಯ ಶೆಟ್ಟಿ ಬಹುಮಾನ ವಿತರಣೆ ಮಾಡಿದರು.
ಜಿಲ್ಲಾ ಸಂಚಾಲಕರಾದ ಶ್ರೀ ಅಶೋಕ್ ಶರ್ಮ ಅವರು ಹಾಗೂ ಗುರುಪಾದ ಹೆಗಡೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮ ನಡೆಯಲು ಸಹಕರಿಸಿದ ಎಲ್ಲರಿಗೂ ಶ್ರೀ ಸ್ವರ್ಣವಲ್ಲಿ ಮಠ ಸೋಂದಾ ಶಿರಸಿ ಭಗವದ್ಗೀತಾ ಅಭಿಯಾನದ ಕಡೆಯಿಂದ ಧನ್ಯವಾದ ಸಮರ್ಪಿಸಲಾಯಿತು.

ಹಾಸನ ಜಿಲ್ಲೆಯ ಭಗವದ್ಗೀತಾ ಅಭಿಯಾನದ ಜಿಲ್ಲಾ ಮಟ್ಟದ ಸ್ಫರ್ಧೆಗಳು ಜರುಗಿದವು

ಸ್ವರ್ಣವಲ್ಲಿ ಸೀಮಾ ಪರಿಷತ್ – ಗೋವಾ, ವತಿಯಿಂದ ಭಗವದ್ಗೀತಾ ಅಭಿಯಾನದ ನಿಮಿತ್ತ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ – ವೆರ್ನ ಗೋವಾ ದಲ್ಲಿ 23-11-2025 ರಂದು ಭಗವದ್ಗೀತಾ ಪಠಣ, ಉಪನ್ಯಾಸಗಳು ನಡೆಯಿತು.

ಧಾರವಾಡದ ರಾಧಾ ದೇಸಾಯಿಯವರ ಮನೆಯಲ್ಲಿ ಭಗವದ್ಗೀತಾ ಸಪ್ತಾಹದ ನಿಮಿತ್ತ ಭಗವದ್ಗೀತಾ ಪಠಣ ಮತ್ತು dr. ಆನಂದ ಪಾಂಡುರಂಗಿ ಅವರ ಪ್ರವಚನವು ನಡೆಯಿತು.

ಯಲ್ಲಾಪುರದ ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವೆಂಬರ್ 19ರಿಂದ 25ರ ವರೆಗೆ ಭಗವದ್ಗೀತಾ ಪಠಣವು ಮಾತೆಯರಿಂದ ಜರುಗಿತು.