ಶ್ರೀಭಗವದ್ಗೀತಾ ಅಭಿಯಾನ

posted in: Bhagavadgeeta Abhiyana | 0

ಶಿವಮೊಗ್ಗ ಸಂಸದರಾದ ಶ್ರೀ ಬಿ.ವ್ಯೆ.ರಾಘವೇಂದ್ರ ಮತ್ತು ಶಾಸಕ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಶ್ರೀ ಡಿ.ಎಸ್.ಅರುಣ 17-11-2025ರಂದು ಸೋಮವಾರ ಸಂಜೆ ಶಿವಮೊಗ್ಗದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದರ್ಶನ ಮಾಡಿ ಆಶೀರ್ವಾದ ಪಡೆದರು. ಅಭಿಯಾನದ ಮುಂದಿನ ಕಾರ್ಯಚಟುವಟಿಕೆಗಳು, ನ.30ರ ಮಹಾಸಮರ್ಪಣೆ ಕುರಿತ ತಯಾರಿ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಅಭಿಯಾನದ ಕಾರ್ಯಾಧ್ಯಕ್ಷ ಶ್ರೀ ಅಶೋಕ ಜಿ.ಭಟ್ಟ, ಪ್ರಮುಖರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ, ಡಾ.ಬಾಲಕೃಷ್ಣ ಹೆಗಡೆ ಮತ್ತಿತರರಿದ್ದರು.