ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗ

posted in: Bhagavadgeeta Abhiyana | 0

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿ ಶ್ರೇಷ್ಠರ ದಿವ್ಯ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಈ ವರ್ಷದ ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗ ಕೇಂದ್ರವಾಗಿ ನಡೆಯುತ್ತಿದೆ. ಈ ಅಭಿಯಾನದ ಅಂಗವಾಗಿ ಅನೇಕ ಉಪನ್ಯಾಸಗಳನ್ನು, ಶ್ಲೋಕಕೇಂದ್ರಗಳನ್ನು ನಡೆಸಲಾಗುತ್ತಿದೆ. ಈ ವರ್ಷದ ವಿಶೇಷವೆಂದರೆ ಸಂಸ್ಕೃತಿಯ ಕೇಂದ್ರ, ಸಂಸ್ಕೃತ ಗ್ರಾಮ ಎಂದೇ ಹೆಸರಾದ ಮತ್ತೂರಿನಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ ನಡೆಯಿತು. ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಅಭಿಯಾನದ ಕಾರ್ಯಕ್ರಮಗಳು ನಡೆದವು. ಮತ್ತೂರಿನ ಗ್ರಾಮದ ಮಹಾಜನರಿಗೆ, ಮಾತೆಯರಿಗೆ 11 ನೆಯ ಅಧ್ಯಾಯದ ಶ್ಲೋಕಗಳನ್ನು ಹೇಳಿಕೊಡಲಾಯಿತು. ಪರಮ ಪೂಜ್ಯ ಶ್ರೀಗಳವರು ಉಪನ್ಯಾಸವನ್ನು ಮಾಡಿದರು. ಮತ್ತೂರಿನ ಗ್ರಾಮದವರು ಶ್ರೀ ಪಾದುಕಾ ಪೂಜೆಯನ್ನು, ಭಿಕ್ಷವಂದನೆಯನ್ನು ನೆರವೇರಿಸಿದರು.