ಬೆಳಗಾವಿಯ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಮಹಾಸ್ವಾಮಿಗಳವರಿಗೆ “ಗೀತಾಭಿಯಾನಾರ್ಣವ” ಬಿರುದು ಸಮರ್ಪಿಸಲಾಯಿತು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಪರಮಪೂಜ್ಯ ಶ್ರೀ ಶ್ರೀಗಳವರಿಗೆ “ಗೀತಾಭಿಯಾನಾರ್ಣವ” ಬಿರುದು ಸಮರ್ಪಿಸಿದರು…
ಹುಕ್ಕೇರಿ ಮಠದ ಸ್ವಾಮಿಗಳವರು ಸಮರ್ಪಣೆ ಮಾಡಿದ ಈ ವಿಶೇಷ ಸನ್ಮಾನ ಸ್ವೀಕರಿಸಿದ ಪರಮಾಪಜ್ಯ ಶ್ರೀ ಶ್ರೀಗಳವರು “ಈ ಸನ್ಮಾನನವು ವಾಸ್ತವಿಕವಾಗಿ ಗೀತಾಚಾರ್ಯ ಶ್ರೀಕೃಷ್ಣನಿಗೆ ಸಮರ್ಪಣೆ, ಅವನಿಗೆ ಸಲ್ಲಬೇಕು ಎಂದರು.. ಗೀತೆಯನ್ನು ನಮಗೆ ಕೊಟ್ಟವನು ಶ್ರೀಕೃಷ್ಣ ಪರಮಾತ್ಮ. ಆ ಮಹತ್ತಾದ ಕೊಡುಗೆ ಶ್ರೀಕೃಷ್ಣನದ್ದು. ಭಗವದ್ಗೀತೆಯು ಅವನದ್ದಾದ್ದರಿಂದ ಈ ಅಭಿಯಾನವೂ ಅವನದ್ದೇ. ಆದ್ದರಿಂದ ಈ ಸನ್ಮಾನ ಅವನಿಗೇ ಅರ್ಪಣೆ, ಅವನಿಗೇ ಸಲ್ಲಬೇಕಾದದ್ದು. ಹಾಗೆಯೇ ಅದನ್ನು ಮೊಟ್ಟಮೊದಲು ಮಹಾಭಾರತದಿಂದ ಹೊರತಂದಂತಹ ಪರಶಿವನ ಅವತಾರಿ ಶಂಕರಾಚಾರ್ಯರು. ಅದಕ್ಕಾಗಿ ಈ ಸನ್ಮಾನವು ಇವರಿಬ್ಬರಿಗೆ ಸಲ್ಲಲಿ ಎಂದರು”…