ಬನವಾಸಿಯಲ್ಲಿ ಭಗವದ್ಗೀತಾ ಅಭಿಯಾನ

posted in: Bhagavadgeeta Abhiyana | 0
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ವತಿಯಿಂದ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನವನ್ನು ನಡೆಸಲಾಗುತ್ತಿದೆ. ಪರಮ ಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮವು ಬನವಾಸಿಯಲ್ಲಿ ಬಹಳ ಸುಂದರವಾಗಿ 19-11-2024ರಂದು ನಡೆಯಿತು. ಸುಮಾರು 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಅತ್ಯಂತ ಸುಂದರವಾಗಿ ಭಗವದ್ಗೀತೆಯ ಒಂಭತ್ತನೆಯ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು.