ಬೇಡುವೆನು ಇನ್ನೇನು?

posted in: Kavan | 0

ಜೀವ-ಭಕ್ತಿಯ ಪಯಣ
ಮನಸು ಯುಕ್ತಿಯ ನಯನ
ಮಗಳಾಗಿ,ಸಖಿಯಾಗಿ
ತಾಯಾಗಿ ಬೆಂದು-ಮಿಂದು
ದಾರಿಯ ‌ದೃಷ್ಟಿಸೇ
ಫಲಕಗಳು ಹಲವಾರು
ದಾರಿ ದಿಕ್ಕು ಇದ್ಯಾವುದು?

ಬೇಡುವೆನು ಇನ್ನೇನು
ನನ್ನೊಡಲ ಕಾಪಾಡು
ಹುಟ್ಟಿ ಬರಲಿ ಮತ್ತದೇ
ಜೀವ ನಲಿವು
ಹರಸು ಗುರುವೇ ಮತ್ತಷ್ಟು
ನಡೆದಾಡುವೆ ಇನ್ನಷ್ಟು
ಸೂಚಿಸದೇ ಆ ದಾರಿಗೆ!
ಮುಂದುವರಿಯಲಿ ಹೇಗೆ?

ದಾರಿ ಕವಲುಗಳು ಹೆಚ್ಚಾಗಿ
ತಿರುಗಿ ತಿರುಗಿ ಶಕ್ತಿ ಬರಿದಾಗಿ
ಸೋತ ಜೀವಕೆ
ಸುಗಮವಾಗಿರಲಿ ಮುಂದೆ
ಹರಿಸಿದರೆ ತಂದೆ
ಮನಸು ಯೌವನವಾಗಿ
ದೇಹ ಚೈತನ್ಯ ಶಿರಬಾಗಿ
ಬೆಳೆಯುವೆ ಹೊಸಭಕ್ತಿಯ ಬೆಳೆ
ಬರದೆ ಇರಲಿ ಕಳೆ !

ಈಶ್ವರ ಭಟ್,ತೋಟಮನೆ