ಭಗವದ್ಗೀತಾ ಅಭಿಯಾನದ ಚಿತ್ರಗಳು

posted in: Bhagavadgeeta Abhiyana | 0
10-11-2024ರಂದು ಹಾವೇರಿಯ ಶ್ರೀರಾಮ ಮಂದಿರದಲ್ಲಿ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಹಾವೇರಿ ಜಿಲ್ಲಾ ಭಗವದ್ಗೀತಾ ಅಭಿಯಾನದ ಅಧ್ಯಕ್ಷರಾದ ಶ್ರೀ ಕಮಲಾಕರ ಹೆಗಡೆ ಹಾಗೂ ಮುಖಂಡರಾದ ಶ್ರೀ ದತ್ತಾತ್ರೇ ಕಳ್ಳಿ ಹಾಳ ಹಾಗೂ ಮೈತ್ರಿಯಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ದೀಪ ಕಳ್ಳಿಹಾಳ, ಶ್ರೀಮತಿ ದೀಪಾ ಪಾಟೀಲ, ಶ್ರೀಮತಿ ಪಿ ಆರ್ ಭಾಗ್ಯಲಕ್ಷ್ಮಿ ಇವರು ನೆರವೇರಿಸಿದರು. ಉಪನ್ಯಾಸಕರಾಗಿ ಬಂದಂತಹ ಶ್ರೀಮತಿ ಸಂಗೀತ ದೇಸಾಯಿ ಇವರು ಮಾತನಾಡಿ ಭಗವಂತನನ್ನು ಒಲಿಸಿಕೊಳ್ಳುವುದು ಯಾವುದೇ ಆಡಂಬರದಿಂದಲ್ಲ ನಿರ್ಮಲ ಮನಸ್ಸಿನಿಂದ ನಮ್ಮನ್ನು ನಾವು ಭಗವಂತನಿಗೆ ಸಮರ್ಪಣೆ ಮಾಡಿ ಸರಳತೆಯಿಂದ ಪೂಜಿಸಿದರೆ ಭಗವಂತ ಒಲಿಯುತ್ತಾನೆ ಹೀಗೆ ಅನೇಕ ಸಂಗತಿಗಳು ಈ ಭಗವದ್ಗೀತೆಯಲ್ಲಿವೆ ಎಂದು ಹೇಳಿದರು. ಉದ್ಘಾಟಕರಾದ ಶ್ರೀಯುತ ದತ್ತಣ್ಣ ಕಳ್ಳಿಹಾಳ
ಇವರು ಮಾತನಾಡಿ ಗೀತೆ ಮಾನವನ ಜೀವನದ ದಾರಿದೀಪ ಎಂದು ಹೇಳಿದರು. ಅಭಿಯಾನದಲ್ಲಿ ಮಹಿಳಾ ಮಂಡಲದ ಸದಸ್ಯರು ಅನೇಕ ಸಮಾಜದ ಹಿರಿಯರು ಉಪಸ್ಥಿತರಿದ್ದರು.
ಕರೂರ್ ಸೀಮಾ ಮತ್ತಿಗಾರ್ ಭಾಗಿ ಶ್ರೀ ಮಾರುತಿ ದೇವಸ್ಥಾನ ಕೊಳಗೀಬಿಸಿನಲ್ಲಿ ನಡೆದ ಭಗವದ್ಗೀತೆಯ ಪಠಣ
ಬೀಗಾರ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಭಗವದ್ಗೀತಾ ಸಪ್ತಾಹವು ದಿನಾಂಕ 9-11-2024 ಶನಿವಾರದಿಂದ ಪ್ರಾರಂಭವಾಯಿತು. ಚಿನ್ನಾಪುರ ಸಿಮಾ ಕೆಳತರ್ಪ ಸಿಮಾದ್ಯಕ್ಷರು, ಮಾತೃಮಂಡಳಿ ಅದ್ಯಕ್ಷರು, ಹಾಜರಿದ್ದರು. ಶ್ರಿಮತಿ ರಾಜೇಶ್ವರಿ ಬಟ್ ಭಗವದ್ಗೀತೆಯ ಒಂಬತ್ತನೇ ಅಧ್ಯಾಯವನ್ನು ಹೇಳಿ ಕೊಟ್ಟರು.
ಭಗವದ್ಗೀತಾ ಅಭಿಯಾನದ ಅಂಗವಾಗಿ ಬಾಗಲಕೋಟೆಯ ಬ್ರಾಹ್ಮಣ ತರುಣ ಸಂಘದ ಗಾಯತ್ರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗವದ್ಗೀತೆ ಯನ್ನು ಬೋಧಿಸಲಾಯಿತು.