
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಿಷ್ಯ – ಭಕ್ತರ ಸಹಾಯ – ಸಹಕಾರದಿಂದ ಭವ್ಯವಾಗಿ ಅದ್ಭುತವಾಗಿ ಶಾಲ್ಮಲಾ ನದೀ ತಟದ ಸ್ವರ್ಣವಲ್ಲೀ ಕತ್ರಿಯಲ್ಲಿ ನಿರ್ಮಾಣಗೊಂಡ ಮಹಾದ್ವಾರದ ಲೋಕಾರ್ಪಣೆ ಸೋಮವಾರ ನಡೆಯಿತು.
ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಾಗೂ ಮಠದ ಕಿರಿಯ ಶ್ರೀಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ನೆರವೇರಿತು.
ಇದೇ ದಿನ ದೊಡ್ಡ ಗುರುಗಳು ಶ್ರೀಮದಾನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರನ್ನು ಶಿಷ್ಯರಾಗಿ ಸ್ವೀಕಾರ ಮಾಡಿ ಒಂದನೇ ವರ್ಷದ ಪವಿತ್ರ ದಿನದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ಶ್ರೀಮಠದಲ್ಲಿ ನೆರವೇರಿದವು. ವಿಶೇಷವಾಗಿ ಹಿರಿಯ ಶ್ರೀಗಳ ಪಾದಪೂಜೆಯನ್ನು ಕಿರಿಯ ಶ್ರೀಗಳು ನೆರವೇರಿಸಿದರು. ಶ್ರೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷರು ವಿ. ಎನ್ ಹೆಗಡೆ ಬೊಮ್ಮನಳ್ಳಿ, ಮಹಾದ್ವಾರದ ಗುತ್ತಿಗೆದಾರರು ಉಲ್ಲಾಸ್ ನಾಯ್ಕ, ಇಂಜಿನಿಯರ್ ಎಂ ಎನ್ ಹೆಗಡೆ ಸಂಪೆಕಟ್ಟು ಇತರರು ಇದ್ದರು.


