ವಿಜಯಪುರದಲ್ಲಿ ಭಗವದ್ಗೀತೆ ಮತ್ತು ಆಯುರ್ವೇದ ವಿಶೇಷ ಉಪನ್ಯಾಸ ಕಾರ್ಯಗಾರ

posted in: Bhagavadgeeta Abhiyana | 0

ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ವತಿಯಿಂದ ಶ್ರೀ ಭಗವದ್ಗೀತಾ ಅಭಿಯಾನವು ರಾಜ್ಯಾದ್ಯಂತ ನಡೆಯುತ್ತಿದೆ. ಈ ವರ್ಷದ ಅಭಿಯಾನವು ವಿಜಯಪುರವನ್ನು ಕೇಂದ್ರೀಕರಿಸಿ ನಡೆಯುತ್ತಿದೆ. 21-11-2024ರಂದು ಆರ್. ಕೆ ಎಮ್ ಆಯುರ್ವೇದ ಮಹಾವಿದ್ಯಾಲಯ ವಿಜಯಪುರದಲ್ಲಿ ಭಗವದ್ಗೀತೆ ಮತ್ತು ಆಯುರ್ವೇದ ವಿಶೇಷ ಉಪನ್ಯಾಸ ಕಾರ್ಯಗಾರ ನೆರವೇರಿತು. ಶ್ರೀ ಭಗವದ್ಗೀತಾ ಅಭಿಯಾನದ ರೂವಾರಿಗಳಾದ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿಯನ್ನು ನೀಡಿ ಆಶೀರ್ವದಿಸಿದರು. ಪೂಜ್ಯ ಶ್ರೀ ಕೈವಲ್ಯಮಯಿ ಮಾತಾಜಿಯವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಉಪನ್ಯಾಸಕರಾಗಿ ಆಗಮಿಸಿದ ಡಾ ll ಶ್ರೀನಿವಾಸ ಒಡೆಯರ್ ಮತ್ತು ಡಾ ll ವಿನಯಕ ಹೆಬ್ಬಾರ್ ಶಿರಸಿ ಭಗವದ್ಗೀತೆಯ ಬೆಳಕಿನಲ್ಲಿ ಆಯುರ್ವೇದ ಶಾಸ್ತ್ರದ ಚಿಂತನೆಯನ್ನು ನಿರೂಪಿಸಿದರು. ಆರ್. ಕೆ ಎಂ ಆಯುರ್ವೇದ ಮಹಾ ವಿದ್ಯಾಲಯದ ಅಧ್ಯಕ್ಷರಾದ ಡಾ ll ಶಂಭುಲಿಂಗಯ್ಯ ಕರ್ಪೂರಮಠ ಹಾಗೆ ಪ್ರಾಚಾರ್ಯರಾದ ಡಾ ll ಸದಾನಂದ ಜಿಗಜಿನ್ನಿ , ಅಮಿತ್ ಹೊನಕೇರಿ ಹಾಗೂ ಇತರರು ಇದ್ದರು.