10 Nov 2024 ವಿವಿಧ ಕಡೆಗಳಲ್ಲಿ ನಡೆದ ಭಗವದ್ಗೀತಾ ಅಭಿಯಾನಗಳು by swarnavalli | posted in: Bhagavadgeeta Abhiyana | 0 ವಿಜಯಪುರದ ಸಂಗನ ಬಸವ ಶಾಲೆಯಲ್ಲಿ 9-11-2024ರಂದು ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ ಶ್ರೀಗಳವರ ಉಪಸ್ಥಿತಿಯಲ್ಲಿ ನಡೆಯಿತು ಭಗವದ್ಗೀತಾ ಜಿಲ್ಲಾ ಸಮಿತಿ ದಾವಣಗೆರೆವತಿಯಿಂದ ಬ್ಯಾಡಗಿ ಶೆಟ್ರು ಶಾಲೆ, ದಾವಣಗೆರೆಯಲ್ಲಿ 9-11-2024ರಂದು ಶ್ಲೋಕ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ. ರೂಪಶ್ರೀ ಶಶಿಕಾಂತ MDS. ಅವರು ಭಗವದ್ಗೀತೆಯ ಮಹತ್ವವನ್ನು ಮಕ್ಕಳಿಗೆ ತಮ್ಮ ಉಪನ್ಯಾಸದ ಮೂಲಕ ತಿಳಿಸಿಕೊಟ್ಟರು. ಬಾಗಲಕೋಟೆಯ ಶಾರದಾ ಮಹಿಳಾ ಮಂಡಲದಿಂದ , ಆರ್ ಎಚ್ ಪಾಟೀಲ ಶಾಲೆಯ ವಿದ್ಯಾರ್ಥಿಗಳಿಗೆ ದಿನಾಂಕ 06/11/2024ರಿಂದ ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದ ಶ್ಲೋಕಗಳನ್ನು ಹೇಳಿಕೊಡಲಾರಂಭಿಸಲಾಯಿತು. ಹಳಿಯಾಳ ತಾಲೂಕು ಸ ಹಿ ಶಾಲೆ ಗುಡ್ನಾಪುರದಲ್ಲಿ ಭಗವದ್ಗೀತಾ ಅಭಿಯಾನದ ಕ್ಷಣ ತುಮಕೂರಿನಲ್ಲಿ ಭಗವದ್ಗೀತಾ ಅಭಿಯಾನದ ಕ್ಷಣ ಶಿರಸಿ ತಾಲೂಕಿನ ತೆರಕನಳ್ಳಿ ಶಾಲೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣ ಸಿರಸಿಯ ವಿವೇಕಾನಂದನಗರದ ಶ್ರೀ ನಾಗಚೌಡೇಶ್ವರಿ ಹಾಗೂ ಅಭಯ ಮಾರುತಿ ದೇವಸ್ಥಾನದಲ್ಲಿ ಶ್ರೀ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಆಶಯದಂತೆ ಶ್ರೀಮದ್ಭಗವದ್ಗೀತಾ ಪಠಣ ಸಪ್ತಾಹ ಆರಂಭಗೊಂಡಿತು. ಶ್ರೀಮತಿ ಮಹಾಲಕ್ಷ್ಮಿ ಭಟ್ಟ ಹಾಗೂ ಶ್ರೀಮತಿ ಭಾರತಿ ಎಸ್ ಹೆಗಡೆ ಸಿರಸಿ ಇವರು ದೀಪ ಬೆಳಗಿ ಚಾಲನೆ ನೀಡಿದರು.ಸುಶೀಲಾ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಗೀತೆಯ ಮಹತ್ವ ತಿಳಿಸಿದರು. ಶಿರಸಿ ತಾಲೂಕಿನ ಪಂಚಲಿಂಗದ ಪ್ರಾಥಮಿಕ ಶಾಲೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣ Previous Next Share this… Facebook Whatsapp Twitter Gmail Telegram