10 Dec 2024 ವಿವಿಧ ಕಡೆಗಳಲ್ಲಿ ಶ್ರೀ ಭಗವದ್ಗೀತಾ ಅಭಿಯಾನ by swarnavalli | posted in: Bhagavadgeeta Abhiyana | 0 ಒಂದು ಮಹತ್ವದ ಹಾಗೂ ತುಂಬಾ ಅರ್ಥ ಪೂರ್ಣವಾದ ಕಾರ್ಯಕ್ರಮವು ಇಂದು ವಿಜಯಪುರದ ಜಿಲ್ಲಾ ಕಾರಾಗೃಹದಲ್ಲಿ ಅತ್ಯಂತ ಯಶಸ್ವಿಯಾಗಿ ಸುಂದರವಾಗಿ ನಡೆಯಿತು. ಸುಮಾರು 100 ಕ್ಕೂ ಹೆಚ್ಚು ಜೈಲಿನ ನಿವಾಸಿಗಳಿಗೆ ಭಗವದ್ಗೀತೆಯ ಒಂಭತ್ತನೆಯ ಅಧ್ಯಾಯದ ಶ್ಲೋಕಗಳನ್ನು ಒಂದು ವಾರಗಳ ಕಾಲ ಹೇಳಿಕೊಡಲಾಯಿತು. ಇಂದು ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಕಾರಾಗೃಹಕ್ಕೆ ಭೇಟಿ ನೀಡಿದರು. ಅಲ್ಲಿನ ಖೈದಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಿದರು. ಜೈಲಿನ ಖೈದಿಗಳನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನವನ್ನು ನೀಡಿದರು. ಸಮಾಜದ ಯಾರೂ ಒಬ್ಬರನ್ನು ಬಿಡದೆ ಎಲ್ಲರಿಗೂ ಭಗವದ್ಗೀತೆ ಮುಟ್ಟಬೇಕು. ಭಗವದ್ಗೀತೆಯು ಕೊಟ್ಟ ಒಳ್ಳೆಯ ಮೌಲ್ಯಗಳು ಪ್ರತಿಯೊಬ್ಬರನ್ನೂ ತಲುಪಬೇಕು ಎಂಬ ಪರಮ ಉದ್ದೇಶವೂ ಇಂದು ಭಗವದ್ಗೀತಾ ಅಭಿಯಾನವು ಜೈಲಿನಲ್ಲೂ ನೆರವೇರುವ ಹಾಗೆ ಆಯಿತು. ಶ್ರೀ ಭಗವದ್ಗೀತಾ ಅಭಿಯಾನ ರಾಜ್ಯವ್ಯಾಪಿ ಯಾಗಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈ ವರ್ಷದ ಅಭಿಯಾನವು ವಿಜಯಪುರವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿದೆ. ವಿಜಯಪುರದ ನಗರದ ಅನೇಕ ಶಾಲೆಗಳಲ್ಲಿ ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸಲಾಗಿದೆ. ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾದ ಮಕ್ಕಳ ಬಾಯಲ್ಲಿ ಶ್ಲೋಕಗಳನ್ನು ಹೇಳಿಸುವುದು ಬಹಳ ಮುಖ್ಯವಾದದ್ದು. ಇದನ್ನು ಇಂದು ವಿಜಯಪುರ ವಿದ್ಯಾಭಾರತಿ ಶಾಲೆಯಲ್ಲಿ ಸ್ವತಃ ಅಭಿಯಾನದ ರೂವಾರಿಗಳಾದ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಮಕ್ಕಳಿಗೆ ಹೇಳಿಕೊಟ್ಟರು. ಅಲ್ಲಿನ ಚಿಕ್ಕ ಚಿಕ್ಕ ವಿದ್ಯಾರ್ಥಗಳೆಲ್ಲರೂ ಅತ್ಯಂತ ಸುಂದರವಾಗಿ ಹೇಳಿದರು.ವಿದ್ಯಾ ಭಾರತಿ ಶಾಲೆಯು ಇಂದು ಒಂದು ವಿಶೇಷ ಹಾಗೂ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಯಾಯಿತು. ದಾವಣಗೆರೆಯ ಶ್ರೀ ಲಲಿತಾ ಭಜನಾ ಮಂಡಳಿಯಿಂದ ಸಪ್ತಾಹದ ಕೊನೆಯ ದಿವಸ. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ಪಠಣ ಸಪ್ತಾಹದಲ್ಲಿ ನಡೆಯಿತು.ಹಾಗೂ ಉಪನ್ಯಾಸ ನಡೆಯಿತು. ದೇವನಹಳ್ಳಿ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಭಗವದ್ಗೀತಾ ಪಠಣ ಧಾರವಾಡದಲ್ಲಿ ಭಗವದ್ಗೀತಾ ಸಪ್ತಾಹದ 6ನೇ ದಿನ ಡಾ.ಶ್ರೀರಾಮ್ ಭಟ್ಟ ಇವರಿಂದ ಪ್ರವಚನ . ಶ್ರೀ ಗೀತಾ ಜಯಂತಿ ಪ್ರಯುಕ್ತ ಬಳ್ಳಾರಿ ಜಿಲ್ಲಾ ಮಟ್ಟದ ಗೀತಾ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಗಳು ಸಾಧನ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಬಳ್ಳಾರಿಯಲ್ಲಿ ದಿನಾಂಕ 7.12 24 ಶನಿವಾರ ಮಧ್ಯಾಹ್ನ 3:00ಯಿಂದ ನಡೆಯಿತು.ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಾಧನಾ ಯೋಗ ಕೇಂದ್ರದ ಮುಖ್ಯಸ್ಥರಾದ ಶ್ರೀಧರ್ ಅವರು ಹಾಗೂ ಕಾರ್ಯಕ್ರಮಕ್ಕೆ ಬಹುಮಾನ ಪ್ರಯೋಜಕರಾದ ಶ್ರೀಯುತ ಪಾಪಯ್ಯ ಶೆಟ್ಟಿ ಬಳ್ಳಾರಿ ಅವರು ಭಾಗವಹಿಸಿದ್ದರು.ನಿರ್ಣಾಯಕರಾಗಿ ಶ್ರೀಮತಿ ಮಾಧವಿ ಲತಾ ಹಾಗೂ ಶ್ರೀಮತಿ ಮಂಗಳಗೌರಿ ಇವರು ನಡೆಸಿಕೊಟ್ಟರು.ಜಿಲ್ಲಾ ಸಂಚಾಲಕರಾದ ಗುರುಪಾದ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಬೆಳಗಾವಿಯಲ್ಲಿ 18 ಅಧ್ಯಾಯ ಭಗವದ್ಗೀತಾ ಪಠಣ ಕಾರ್ಯಕ್ರಮ 912-2024ರಂದು ನಡೆಯಿತು ಮೈಸೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಗೀತಾ ಕಂಠಪಾಠ ಮತ್ತು ಭಾಷಣ ಸ್ಪರ್ಧೆ ಮೈಸೂರಿನ ಅವನಿ ಶಂಕರ ಮಠದಲ್ಲಿ ಭಗವದ್ಗೀತಾ ಅಭಿಯಾನ ಭಗವದ್ಗೀತೆಯ ಸಪ್ತಾಹ ಶಿರಸಿಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು. ಶ್ರೀಮತಿ ವೇದಾ ಹೆಗಡೆ ನೀನ೯ಳ್ಳಿ ಹಾಗೂ ಗೀತಾ ಜೋಶಿ ಮೂಲೇಮನೆ ಪ್ರಶಿಕ್ಷಕರಾಗಿ 7ದಿನಗಳೂ ನಡೆಸಿ ಕೊಟ್ಟರು ಹಾಗೂ ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು, ಪ್ರಾಂಶುಪಾಲರಾದ ದೇಶಪಾಂಡೆಯವರು ಸ್ವಾಗತಿಸಿ ಭಗವದ್ಗೀತೆಯ ಸಾರವನ್ನು ತಿಳಿಸಿದರು ಭಗವದ್ಗೀತಾ ಅಭಿಯಾನದ ಅಂಗವಾಗಿ ಹಾಸನ ಜಿಲ್ಲಾಮಟ್ಟದ ಸ್ಪರ್ಧೆಗಳು ದಿನಾಂಕ 08/12/2024 ಭಾನುವಾರ ನಡೆಯಿತು. ಸೊಂಡೂರಿ ನಗರದ ಎಲ್ಲಾ ಮಾತೆಯರು ಗೀತಾ ಜಯಂತಿ ಪ್ರಯುಕ್ತ ಭಜನೆ ಹಾಗೂ ಸ್ತೋತ್ರ ಪಠನ ಮಾಡಿದರು ವೇದ ಶಾಸ್ತ್ರಪುರಾಣಗಳ ಸಾರ ಭಗವದ್ಗೀತೆ – ಚಿತ್ರಾಪುರ ಶ್ರೀಗಳುಅರ್ಜುನನ್ನು ನಿಮಿತ್ತವಾಗಿರಿಸಿ ಸಮಸ್ತ ಲೋಕಕ್ಕೆ ಶ್ರೀಕೃಷ್ಣ ನೀಡಿದ ಸಂದೇಶವನ್ನು ಅನುಸರಿಸಬೇಕು. ಸುಖ-ದುಃಖ ಎರಡಕ್ಕೂ ಮನಸ್ಸು ಕಾರಣ ಹಾಗಾಗಿ ಸುಖ ದುಃಖದಲ್ಲಿ ಸಮಚಿತ್ತವನು ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಮನಸ್ಸು ಸುಸಂಸ್ಕೃತ ಗೊಳ್ಳಬೇಕಾದರೆ ಗೀತಾಚಾರ್ಯ ಹೇಳಿದ ಗೀತೋಕ್ತಿಗಳನ್ನು ಜೀವನದಲ್ಲಿ ಪಾಲಿಸಬೇಕು ಎಂಬುದಾಗಿ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ವಿಜಯಧ್ವಜ ತೀರ್ಥ ಪೀಠ ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀಪಾದಂಗಳವರು ಅಭಿಪ್ರಾಯ ಪಟ್ಟರು. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳನ್ನು ಉದ್ಘಾಟಿಸಿ ಪತ್ರವೋ ಪುಷ್ಪವೋ ಯಾವುದನ್ನಾದರೂ ಪ್ರಾಪ್ತಿಮಾಡಿಕೊಳ್ಳಬಹುದು, ವೇದ ಶಾಸ್ತ್ರ ಪುರಾಣಗಳ ಸಾರದಂತಿರುವ ಭಗವದ್ಗೀತೆ ಸರ್ವರಿಂದಲೂ ಪಠಿಸುವಂತಾಗಬೇಕೆಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ.ಪುರಾಣಿಕರು ಗೀತೆಯಲ್ಲಿ ಅಡಕವಾಗಿದೆ. ಮಾನಸಿಕ ನೆಮ್ಮದಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಭಗವದ್ಗೀತೆಯ ಸಾರವನ್ನು ಪ್ರತಿಯೊ ಭಾರತೀಯನು ಅರಿಯುವಂತಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ ಸಂಘದ ಗೌರವಾಧ್ಯಕ್ಷರಾದ ಶ್ರೀ ವಾಸುದೇವ ರಾವ್ ಕಟೀಲು ಮುಂತಾದವರು ಉಪಸ್ಥಿತರಿದ್ದರು Previous Next Share this… Facebook Whatsapp Twitter Gmail Telegram