ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ

posted in: Bhagavadgeeta Abhiyana | 0
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ದೇವರುಗಳ ಪೂಜೆಯು 11-11-2024 ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ನೆರವೇರಿತು. ಹುಬ್ಬಳ್ಳಿಯ ಶಿಷ್ಯರು ಪರಮ ಪೂಜ್ಯ ಶ್ರೀಗಳವರ ಪಾದಪೂಜೆ ಭಿಕ್ಷಾ ಸೇವೆಯನ್ನು ನೆರವೇರಿಸಿದರು. ಹುಬ್ಬಳ್ಳಿಯಲ್ಲೇ ಹುಟ್ಟಿದಂತಹ ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮವೂ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಸಾಮೂಹಿಕವಾಗಿ ಒಂಭತ್ತನೆಯ ಅಧ್ಯಾಯದ ಪಠಣವನ್ನು ಮಾಡಿದರು. ಶ್ರೀ ಶ್ರೀಗಳು ಶಿಷ್ಯರಿಗೆ ತಮ್ಮ ಮಾರ್ಗದರ್ಶನದ ನುಡಿಗಳಿಂದ ಆಶೀರ್ವದಿಸಿದರು
ಶಿರಸಿಯ ನರೇಬಯ್ಲಿನಲ್ಲಿನರುವ ಚಂದನ ಶಾಲೆಯಲ್ಲಿ ಶಿರಸಿತಾಲೂಕಾ ಭಗವದ್ಗೀತಾ ಅಭಿಯಾನ 11-11-2024 ಉದ್ಘಾಟನೆಯಾಯಿತು
ಶಿರಸಿಯ ಯೋಗ ಮಂದಿರದಲ್ಲಿ 11-11-2024ರಿಂದ ೯ನೇ ಅಧ್ಯಾಯದ ಪಠಣ ಪ್ರಾರಂಭ
ಬಾಳೂರಿನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಭಗವದ್ಗೀತೆ ಸಪ್ತಾಹ ಪ್ರಾರಂಭಿಸಲಾಯಿತು
ಕರೂರ್ ಸೀಮಾ ಮತ್ತಿಗಾರ್ ಬಾಗಿ ಶ್ರೀ ಮಾರುತಿ ದೇವಸ್ಥಾನ ಕೊಳಗೀಬಿಸಿನಲ್ಲಿ ನಡೆದ ಭಗವದ್ಗೀತೆಯ ಪಠಣ
ಹಳಿಯಾಳ ತಾಲೂಕಿನ ಭಗವದ್ಗೀತಾ ಅಭಿಯಾನ ಸಮಿತಿ