ಶ್ರೀ ಭಗವದ್ಗೀತಾ ಅಭಿಯಾನದ ಛಾಯಾಚಿತ್ರಗಳು

posted in: Bhagavadgeeta Abhiyana | 0
ದಿನಾಂಕ 05-11-2024ರಂದು ವಿಜಯಪುರದ BDE ಶಿಕ್ಷಣ ಸಂಸ್ಥೆಯಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ. ಶ್ರೀಗಳ ಆಶೀರ್ವಚನವು ನಡೆಯಿತು. ಸುಮಾರು 200 ವಿದ್ಯಾರ್ಥಿಗಳಿಗೆ ಪ್ರಶಿಕ್ಷಕರು ಭಗವದ್ಗೀತಾ 9 ನೇಯ ಅಧ್ಯಾಯದ ಶ್ಲೋಕಗಳನ್ನು ಹೇಳಿ ಕೊಟ್ಟರು.
ವಿಜಯಪುರದ ವೇದ ಶಿಕ್ಷಣ ಸಂಸ್ಥೆಯಲ್ಲಿ 06-11-2024ರಂದು ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮವು ನೆರವೇರಿತು.
ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಅಕ್ಕನಾಗಮ್ಮ ಪ್ರೌಢಶಾಲೆಯಲ್ಲಿ 07-11-2024ರಂದು ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ.
ವಿಜಯಪುರದ ನಗರದ ಚೇತನಾ ಶಿಕ್ಷಣ ಸಂಸ್ಥೆಯಲ್ಲಿ ಅಭಿಯಾನ.
ವಿಜಯಪುರದ ಇಂಡಿ ತಾಲೂಕಿನಲ್ಲಿ 08-11-2024ರಂದು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಸಿದ್ಧಾರೂಢ ಮಠದ ಶ್ರೀ ಡಾ ll ಸ್ವರೂಪಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.
ಬಸವನ ಬಾಗೇವಾಡಿಯ ಉತ್ತರಾದಿ ಮಠದಲ್ಲಿ ಗೀತಾ ಅಭಿಯಾನ ನಡೆಯಿತು