
ಪ್ರಾರಂಭದಲ್ಲಿ ಜಿಲ್ಲಾ ಸಂಚಾಲಕ ಸಂಪತ್ ಕುಮಾರ್ ರವರು ಪ್ರಾಸ್ತಾವಿಕ ನುಡಿಗಳನಾಡಿದರು.




ಶ್ರೀಯುತ ಶ್ರೀಕಾಂತ್ ಭಟ್ರು ( Development Manager LIC ) ಉಪನ್ಯಾಸಕರು,
ಹಿರಿಯ ಪ್ರಾಥಮಿಕ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯರ್ಥಿಗಳಿಗೆ ಅವರ ಮನಸ್ಸಿಗೆ ಅರ್ಥವಾಗುವ ಹಾಗೆ ಭಗವದ್ಗೀತೆಯ ಮಹತ್ವವನ್ನು ಸಣ್ಣ ಕಥೆ ಮತ್ತು ಶ್ಲೋಕಗಳ ಮೂಲಕ ತುಂಬಾ ಸುಂದರವಾಗಿ ತಿಳಿಸಿಕೊಟ್ಟರು.
ಶ್ರೀಮತಿ ಸಾವಿತ್ರಿ ಭಟ್ ಅವರು ಶ್ಲೋಕ ಪಠಣ ಮಾಡಿಸಿದರು.





ದಿನಾಂಕ :28.21.2024, ಗುರುವಾರ ಸಂಜೆ, ಶ್ರೀ ಸ್ವರ್ಣ ರಶ್ಮೀ, ಮನೆ, ಗುಂಡಪ್ಪ ಶೆಡ್, ಶಿವಮೊಗ್ಗ ಇಲ್ಲಿ ಮಹಾ ಪ್ರದೋಷ ಪೂಜೆ, ಕಾರ್ತೀಕ ದೀಪೋತ್ಸವ ಹಾಗೂ ಶ್ರೀ ಭಗವದ್ಗೀತಾ 9 ನೇ ಅಧ್ಯಾಯದ ಪಾರಾಯಣ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಶ್ರೀಮತಿ ವಿನುತಾ ಜೋಶಿ ಮತ್ತು ಭಾಗವಹಿಸಿದ ಭಕ್ತರು ಸುಶ್ರಾವ್ಯವಾಗಿ ಹಾಡಿದರು.
ವಿದ್ವಾನ್ ನರಹರಿ ಭಟ್ಟರು ಸರಳ ಸಂಸ್ಕೃತದಲ್ಲಿ ಗೀತೆಯ ವಿಚಾರಗಳನ್ನು ತಿಳಿಸಿದರು. ಡಾ. ಕೃಷ್ಣ ಭಟ್ಟರು ಕನ್ನಡದಲ್ಲಿ 9ನೇ ಅಧ್ಯಾಯದ ಮುಖ್ಯ ವಿಚಾರಗಳನ್ನು ಪ್ರಸ್ತುತ ಪಡಿಸಿದರು.