ಶ್ರೀ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ ಬೆಂಗಳೂರು ಅಭ್ಯುದಯ – ಶ್ರೇಯೋಧಾಮದಲ್ಲಿ ವಾರ್ಷಿಕ ಕಾರ್ಯಕ್ರಮ

posted in: Press Note/News | 0

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ ಬೆಂಗಳೂರು ಅಭ್ಯುದಯ – ಶ್ರೇಯೋಧಾಮದಲ್ಲಿ ವಾರ್ಷಿಕ ಕಾರ್ಯಕ್ರಮಗಳು ನೆರವೇರಿದವು. ದಿನಾಂಕ 22-12-24 ರ ಬೆಳಿಗ್ಗೆ ಗಣಹವನವು ಉಭಯ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ಪೂರ್ಣಾಹುತಿಯೊಂದಿಗೆ ನೆರವೇರಿತು. ಉಭಯ ಶ್ರೀಗಳವರ ಪಾದುಕಾ ಪೂಜೆ ಭಿಕ್ಷಾ ಸೇವೆಯನ್ನು ಬೆಂಗಳೂರು ಮಹಾನಗರದ ಶಿಷ್ಯ ಭಕ್ತ ಮಹಾಜನರು ಒಡಗೂಡಿ ನೆರವೇರಿಸಿದರು. ಶ್ರೀ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ ಬೆಂಗಳೂರು, ಶ್ರೀ ಸ್ವರ್ಣ ರಶ್ಮಿ, ಶ್ರೀ ಸ್ವರ್ಣವಲ್ಲೀ ಸೀಮಾ ಪರಿಷತ್ ಬೆಂಗಳೂರು, ಯುವ ಪರಿಷತ್ ಬೆಂಗಳೂರು, ಮಾತೃ ಮಂಡಳಿ ಬೆಂಗಳೂರು ವಾರ್ಷಿಕ ಸರ್ವ ಸಾಧಾರಣ ಸಭೆಯು ಹಾಗೂ ಬೆಂಗಳೂರು ಆಚಾರ ಭಟ್ಟರ, ಶ್ರೀ ರಾಜರಾಜೇಶ್ವರೀ – ಶ್ರೀ ಲಕ್ಷ್ಮಿನರಸಿಂಹ – ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಸಮಿತಿಯ ಸಭೆಯು ಉಭಯ ಶ್ರೀ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು. ಬೆಂಗಳೂರಿನ ವೈದಿಕ ಪರಿಷತ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ರುದ್ರಾನುಷ್ಠನವು ನೆರವೇರಿತು. ಶ್ರೀ ಸಂಸ್ಥಾನದ ಆರಾಧ್ಯ ದೇವರುಗಳ ಪೂಜಾ ಕೈಂಕರ್ಯಗಳನ್ನು ಶಿಷ್ಯರುಗಳು ಭಕ್ತಿಯಿಂದ ಕಣ್ತುಂಬಿಕೊಂಡರು. ಸಾಗರೋಪಾದಿಯಲ್ಲಿ ಭಕ್ತರು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ತತ್ಕರಕಮಲ ಸಂಜಾತ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದರ್ಶನ, ಮಂತ್ರಾಕ್ಷತೆಯನ್ನು ಪಡೆದರು. ಉಭಯ ಯತಿಗಳ ಭವ್ಯ ಸ್ವಾಗತದೊಂದಿಗೆ ಆರಂಭ ಗೊಂಡು ಇಂದಿನ ವರೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನ ವಿದ್ಯಾರಣ್ಯಪುರದ ಅಭ್ಯುದಯ- ಶ್ರೇಯೋಧಾಮವು ಸಾಕ್ಷಿಯಾಯಿತು.