ಹಸಿರೇ ಉಸಿರು

posted in: Kavan | 0

ಭುವಿಯೆಲ್ಲ ಹಸಿರಾದರೆ

ಬಾಳೆಲ್ಲ ನಲಿವಿನಾ ಸೆಲೆ

ಮನೆಗೊಂದು ಗಿಡಮರ

ನೀಡುವುದು ಸುಖದಾ ನೆಲೆ

        ಹಸಿರೇ ಭುವಿಯ ಉಸಿರು

  ಉಸಿರೇ ಪ್ರತಿ ಮನುಜನ ಜೀವಾಳ

  ಕಾಪಿಡಲೆ ಬೇಕು ಮುಂದಿನ ದಿನಕೆ

 ಭವಿಷ್ಯದ ಜನಾಂಗ ಆಗಲಿ ನಿರಾಳ.

 ಪ್ರತಿ ಸಸಿಯ ತೊನೆ ತೊನೆದಾಟ

ಏರಿಸೆ ವಸುಂಧರೆಯ ಅಂದ

ತುಂಬುವುದು ಮನಕೆ ಉಲ್ಲಾಸ

ಸುಮದ ರಂಗು ತರಿಸೆ ಆನಂದ.

              ಬೆಳೆಸೋಣ ಮನೆಗೊಂದಾದರೂ

                ಅಮೂಲ್ಯ ಗಿಡಮರವ

               ನೀರೆರೆದು ಪೋಷಿಸಿ ಆರೈಸುತ

               ತೀರಿಸೋಣ ಭುವಿಯ ಋಣವ.                      

-ಮಾಧವಿ ಭಟ್. ಬೆಂಗಳೂರು.