ಭಗವದ್ಗೀತಾ ಪಠಣ

posted in: Bhagavadgeeta Abhiyana | 0

ಕಾರವಾರ ಜಿಲ್ಲಾ ಮಟ್ಟದ ಭಗವದ್ಗೀತಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು.

ದತ್ತ ಭಜನಾ ಮಂಡಳಿ, ಕೋಟೆ,
ರಾಣೆಬೆನ್ನೂರು ಇವರು ಭಗವದ್ಗೀತಾ ಅಭಿಯಾನದ ನಿಮಿತ್ತ ಭಗವದ್ಗೀತಾ ಪಠಣ ಸಪ್ತಾಹವನ್ನು ನಡೆಸಿದರು.

ಶಿಗ್ಗಾಂವಿಯ ಜ್ಞಾನಮಿತ್ರ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

30-11-2025ರಂದು ಹಾನಗಲ್ ನ ಶ್ರೀ ದಯಾಶಂಕರ ಛಾತ್ರಾಲಯದಲ್ಲಿ ಶ್ರೀ ಭಗವದ್ಗೀತೆ ಅಭಿಯಾನ ಕಾರ್ಯಕ್ರಮ ನಡೆಯಿತು. ವಿಶೇಷ ಆಹ್ವಾನಿತರಾಗಿ ಪಂ. ಶ್ರೀ ಗಂಗಾಧರ ಶಾಸ್ತ್ರೀಗಳು ಕಾಶೀಕರ ಆಗಮಿಸಿ ವಿದ್ಯಾರ್ಥಿಗಳಿಗೆ 11ನೇ ಅಧ್ಯಾಯದ ಶ್ಲೋಕ ಹೇಳಿಕೊಟ್ಟು ಮಾತನಾಡಿದರು. ಅಧ್ಯಕ್ಷತೆಯನ್ನು ಛಾತ್ರಾಲಯದ ಅಧ್ಯಕ್ಷರಾದ ಶ್ರೀಮತಿ ರೇಖಾ ಶೆಟ್ಟರ ವಹಿಸಿ ಅಭಿಯಾನ ಮಾಡುತ್ತಿರುವ ದ ಬಗ್ಗೆ ಶ್ಲಾಘನೆ ವೃಕ್ತಪಡಿಸಿ ಮಾತನಾಡಿದರು. ಭಗವದ್ವೀತಾ ಅಭಿಯಾನದ ಹಾನಗಲ್ಲ ಕಾರ್ಯದರ್ಶಿ ರವಿ. ಪೋತದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೂಟಬಂಧು ಮಹಿಳಾ ವೇದಿಕೆಯ ಕಿರಿ ಮಂಜೇಶ್ವರ ಅಂಗಸಂಸ್ಥೆ ಯ ವತಿಯಿಂದ, ಯೆಳಜಿತ್ ರಾಮಕೃಷ್ಣ ಕುಟೀರದ ಸ್ವಾಮಿ ಸತ್ಯ ಸ್ವರೂಪಾನಂದರ ಮಾರ್ಗದರ್ಶನದಂತೆ ಶ್ರೀಮತಿ ಯಶೋಧ ಅಡಿಗರ ನೇತೃತ್ವದಲ್ಲಿ ದಿನಾಂಕ 22.11.25 ರಿಂದ 28.11.25 ರ ವರೆಗೆ ಭಗವದ್ಗೀತಾ ಪಠಣದ ತರಬೇತಿ ಶಿಬಿರ ನಡೆಯಿತು.ಕೊನೆಯ ದಿನ ಸ್ವಾಮೀಜಿಯವರು ಆಗಮಿಸಿ ಗೀತೆಯ ಕುರಿತು ಪ್ರವಚನ ನೀಡಿದರು.