ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವರ್ಧಂತಿ ಮಹೋತ್ಸವದ ಶುಭ ಸಂದರ್ಭದಲ್ಲಿ ಒಂದು ಅಪೂರ್ವ ಭಕ್ತಿ ಕೊಡುಗೆ. ಅವರ ಕರಕಮಲಸಂಜಾತ ಶಿಷ್ಯರಾದ ಪೂಜ್ಯ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ತಮ್ಮ ಗುರುದೇವರ ಮೇಲಿನ ಪರಮ ಭಕ್ತಿಯಿಂದ ‘ಶ್ರೀ ಪಾದುಕಾಪಂಚಕಮ್’ ಎಂಬ ಶ್ಲೋಕಮಾಲಿಕೆಯನ್ನು ರಚಿಸಿ ಶ್ರೀಗುರುಗಳ ಪಾದಾರವಿಂದಗಳಿಗೆ ಸಮರ್ಪಿಸಿದ್ದಾರೆ.
ಜಗತ್ತಿನ ಮೋಹ-ಮಾಯೆಗಳನ್ನು ಕಳೆದು, ಸಚ್ಚಿದಾನಂದ ಸುಧೆಯನ್ನು ಉಣಿಸುವ ಶ್ರೀಗುರುಗಳ ಪಾದುಕೆಗಳ ಮಹತ್ವವನ್ನು ಸಾರುವ ಸುಂದರ ಶ್ಲೋಕಗಳು ಮತ್ತು ಅವುಗಳ ಕನ್ನಡ ತಾತ್ಪರ್ಯವನ್ನು ಲಗತ್ತಿಸಲಾದ ಚಿತ್ರದಲ್ಲಿ ಕಾಣಬಹುದು. ಈ ಪವಿತ್ರ ಸಂದರ್ಭದಲ್ಲಿ ಎಲ್ಲ ಸನಾತನ ಭಕ್ತಾದಿಗಳೂ ಈ ಶ್ಲೋಕಗಳನ್ನು ಪಠಿಸಿ, ಶ್ರೀ ಗುರುಗಳ ಮತ್ತು ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
