ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ

posted in: Bhagavadgeeta Abhiyana | 0

ಅಭಿಯಾನದ ಐತಿಹಾಸಿಕ ಕಾರ್ಯಕ್ರಮಗಳ ಸಾಲಿಗೆ ಸೇರಿದ 27-11-2025ರ ಶಿವಮೊಗ್ಗದ ಮಾಚೇನಹಳ್ಳಿಯ ಕಾರ್ಖಾನೆಯಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ. ಶಿವಮೊಗ್ಗ ನಗರ ಇಂತಹ ಒಂದು ಅಭೂತ ಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಕಾರ್ಮಿಕರನ್ನು ಉದ್ದೇಶಿಸಿ ಆಶೀರ್ವಚನವನ್ನು ಮಾಡಿದರು.

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗ, ಸ್ವರ್ಣರಶ್ಮಿ ಟ್ರಸ್ಟ್ ಶಿವಮೊಗ್ಗ, ಯೋಗ ಶಿಕ್ಷಣ ಸಮಿತಿ, ಮಧುಕೃಪ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಭಿಯಾನದ ಕಾರ್ಯಕ್ರಮವು 28-11-2025ರಂದು ನಡೆಯಿತು. ಶಿವಮೊಗ್ಗದ ಮಧುಕೃಪ ಯೋಗ ಕೇಂದ್ರದಲ್ಲಿ ಪರಮ ಪೂಜ್ಯರ ಆಶೀರ್ವಚನವನ್ನು ನೀಡಿದರು.

ಶಿವಮೊಗ್ಗ ನಗರದ ವಾಸವಿ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ ನಡೆಯಿತು ಪರಮ ಪೂಜ್ಯ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು.

ದಾವಣಗೆರೆ ಜಿಲ್ಲೆಯ ಕಡ್ಲೇಬಾಳು ನಾಗಸುಬ್ರಮಣ್ಯ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನದ ಅಂಗವಾಗಿ ಶ್ಲೋಕ ಪಠಣವು 26-11-2025ರಂದು ನಡೆಯಿತು.
ಶ್ರೀ ಶ್ರೀಪಾದ ದೇಶಪಾಂಡೆಯವರು ಕಾರ್ಯಕ್ರಮವನ್ನು ಚಂಪಾಷಷ್ಟಿಯ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದರು.