ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತವು ಈ ವರ್ಷ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮಾ (ಗುರು ಪೂರ್ಣಿಮಾ) ದಿನಾಂಕ 13-07-2022, ಬುಧವಾರದಂದು ಪ್ರಾರಂಭವಾಗಿ ದಿನಾಂಕ 10-09-2022, ಶನಿವಾರ ಭಾದ್ರಪದ ಪೂರ್ಣಿಮೆಯಂದು ಸಂಪನ್ನಗೊಳ್ಳಲಿದೆ. ಚಾತುರ್ಮಾಸ್ಯ ವ್ರತಾಚರಣೆಯ ದಿನಗಳಲ್ಲಿ ಸೀಮೆ/ ಭಾಗಿ ಹಾಗೂ ವಿವಿಧ ಸಮಾಜ ಬಾಂಧವರು, ರಾಮ ಕ್ಷತ್ರಿಯ ಸಂಘಗಳು, ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನಗಳ ಶಿಷ್ಯ ಭಕ್ತರುಗಳಿಂದ ಪ.ಪೂ ಶ್ರೀಗಳವರ ಭಿಕ್ಷಾ, ಪಾದಪೂಜೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಆಯಾ ಸೀಮಾ ಮಾತೃಮಂಡಲ ಸದಸ್ಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಶ್ರೀಮಠದ ಸಮಸ್ತ ಶಿಷ್ಯರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ.ಪೂ. ಶ್ರೀಗಳವರ ಆಶೀರ್ವಾದ ಮಂತ್ರಾಕ್ಷತೆ ಹಾಗೂ ಆರಾಧ್ಯ ದೇವರುಗಳ ಅನುಗ್ರಹ ಪಡೆದು ಕೃತಾರ್ಥರಾಗಬೇಕಾಗಿ ವಿನಂತಿ. ಪುರುಷರು ಗಾಯತ್ರಿ ಜಪಾನುಷ್ಠಾನದಲ್ಲಿ ಪಾಲ್ಗೊಳ್ಳಬೇಕೆಂದು ಪ.ಪೂ. ಶ್ರೀಗಳವರ ಅಪೇಕ್ಷೆಯಾಗಿದೆ.