ಯಾವುದೇಕಾರ್ಯದಲ್ಲಿ ಹೆಚ್ಚು ಪ್ರಯತ್ನಿಸುವವನಿಗೆ ಹೆಚ್ಚು ಫಲ. ಹೆಚ್ಚು ಓದುವವನಿಗೆ ಹೆಚ್ಚು ತಿಳುವಳಿಕೆ ಬರುತ್ತದೆ. ಹೆಚ್ಚು ಪರಿಶ್ರಮ ಪಡುವ ಕೃಷಿಕನಿಗೆ ಹೆಚ್ಚು ಆದಾಯದೊರೆಯುತ್ತದೆ. ಹಾಗೆಯೇಅಧ್ಯಾತ್ಮಕ್ಷೇತ್ರದಲ್ಲಿಹೆಚ್ಚು ಪ್ರಯತ್ನಿಸುವವನಿಗೆ ಮೋಕ್ಷ ಎಂಬ ಫಲ ಬೇಗ ದೊರೆಯುತ್ತದೆ. “ಜಯತಿಅಧಿಕಯತ್ನವಾನ್” ಎಂಬುದಾಗಿ ಯೋಗವಾಸಿಷ್ಠವು ಹೇಳುತ್ತದೆ. ಆದ್ದರಿಂದ ಪೌರುಷ(ಮನುಷ್ಯ ಶಕ್ತಿ)ವನ್ನು ಉಪಯೋಗಿಸಿ ಹೆಚ್ಚು ಪ್ರಯತ್ನಿಸುವ ಮೂಲಕ ಯಶಸ್ವಿಯಾಗಬೇಕು.
“ತಸ್ಮಾತ್ ಪೌರುಷಮಾಶ್ರಿತ್ಯ ಸಚ್ಛಾಸ್ತ್ರೈಃ ಸತ್ಸಮಾಗಮೈಃ | ಪ್ರಜ್ಞಾಮಮುಲತಾ ನೀತ್ವಾ ಸಂಸಾರ ಜಲಧಿಂತರೇತ್ || ತನ್ನೆಲ್ಲ ಶಕ್ತಿಯನ್ನುಉಪಯೋಗಿಸಿ ಪ್ರಯತ್ನಿಸುವಾಗ ಹೇಗೆ ಪ್ರಯತ್ನ ಮಾಡಬೇಕೆಂಬುದನ್ನು ಈ ಶ್ಲೋಕ ಹೇಳುತ್ತದೆ. ಮನುಷ್ಯನ ಒಳಗಿನ ದೌರ್ಬಲ್ಯಗಳು ಮತ್ತು ಸುತ್ತಲಿನ ಪರಿಸರದಕಾರಣದಿಂದಅಧ್ಯಾತ್ಮಸಾಧನೆಗೆ ಅಡ್ಡಿಗಳು ಉಂಟಾಗುತ್ತವೆ. ಅವುಗಳನ್ನು ತನ್ನ ಪ್ರಭಲ ಇಚ್ಛಾಶಕ್ತಿಯಿಂದ, ಕೆಲವೊಮ್ಮೆ ಶರೀರದ ಶಕ್ತಿಯನ್ನು ಸೇರಿಸುಕೊಂಡು ಪ್ರಯತ್ನಿಸುವ ಮೂಲಕ ಗೆಲ್ಲಬೇಕಾಗುತ್ತದೆ. ಈ ಪ್ರಯತ್ನವೇಇಲ್ಲಿ ಹೇಳಿರುವ ‘ಪೌರುಷ’. ಆಲಸ್ಯ, ಭೋಗ ವಿಷಯಗಳ ಸೆಳೆತ, ಅತಿಯಾದಅಹಂಕಾರ ಮುಂತಾದವು ಮನುಷ್ಯನ ಒಳಗಿರುವ ದೌರ್ಬಲ್ಯಗಳು. ಸಾಮಾಜಿಕ ಮನ್ನಣೆ, ಭೊಗವಿಷಯಗಳ ಬಗ್ಗೆ ಹೆಚ್ಚು ಪ್ರಚಾರ ಮುಂತಾದವುಗಳು ಸುತ್ತಲಿನ ಪರಿಸರದಿಂದ ಆಗುವ ಅಡ್ಡಿಗಳು. ಇವುಗಳಿಂದ ಭವಸಾಗರವನ್ನುದಾಟುವ ಪ್ರಯತ್ನಗಳು ಕುಂಠಿತವಾಗುತ್ತವೆ. ಭಕ್ತಯೋಗ, ಕರ್ಮಯೋಗ, ಅಷ್ಟಾಂಗಯೋಗಗಳ ಮೂಲಕ ಜ್ಞಾನಯೋಗವೇಭವಸಾಗರವನ್ನುದಾಟುವ ಪ್ರಯತ್ನ. ಒಳಗಿನ ಮತ್ತು ಹೊರಗಿನ ಈ ಅಡ್ಡಿಗಳು ಎಷ್ಟು ಪ್ರಭಲವಾಗಿರುತ್ತವೆಯೆಂದರೆ, ಭವಸಾಗರದಾಟುವಪ್ರಯತ್ನವು ಕೈ ಬಿಟ್ಟೇ ಹೋಗುತ್ತದೆ. ವಿಶ್ವಾಮಿತ್ರನಿಗೆ ಹೀಗೆಯೇಆದದ್ದನ್ನುಕಥೆಯಲ್ಲಿಒದುತ್ತೇವೆ. ಆದ್ದರಿಂದ ಹೆಚ್ಚು ಶಕ್ತಿ ಹಾಕಿ ಪ್ರಯತ್ನಿಸಬೇಕು. ಅದಕ್ಕಾಗಿ ‘ಪೌರುಷ’ಎಂಬ ಶಬ್ದ ಬಳಕೆಯಾಗಿದೆ.
‘ಪೌರುಷ’ವನ್ನು ಹೇಗೆ ಬಳಸಬೇಕು ? ಸಚ್ಛಾಸ್ತ್ರಗಳಿಂದ ಮತ್ತು ಸತ್ಪುರುಷರ ಸಮಾಗಮದಿಂದ ಬುದ್ಧಿಯನ್ನು ಶುದ್ಧೀಕರಿಸುವ ಮೂಲಕ ‘ಪೌರುಷ’ಪ್ರಯತ್ನವಾಗಬೇಕು. ಸಚ್ಛಾಸ್ತ್ರಗಳೆಂದರೆ ವೇದಾನುಸಾರಿಯಾದ ಶಾಸ್ತ್ರಗಳು ಅಥವಾ ಸುದೀರ್ಘಕಾಲದಿಂದ ಅನೇಕ ಹಿರಿಯರಿಂದಆಚರಿಸಲ್ಪಟ್ಟ ಗ್ರಂಥಗಳು. ಉದಾ:- ಭಗವದ್ಗೀತೆ. ಸಚ್ಛಾಸ್ತ್ರಗಳಲ್ಲಿ ಬುದ್ಧಿಯನ್ನು ನಿರ್ಮಲಗೊಳಿಸುವ ಉಪಾಯಗಳು ಮತ್ತು ಶುದ್ಧವಾದ ಬುದ್ಧಿಯ ಲಕ್ಷಣಗಳನ್ನು ಕೊಟ್ಟಿರುತ್ತಾರೆ. ಅವುಗಳನ್ನು ಅವಲಂಬಿಸಿಕೊಂಡು ಬುದ್ಧಿಯ ಶುದ್ಧಿಯ ಪ್ರಕ್ರಿಯೆ ನಡೆಸಬೇಕು. ಸಚ್ಛಾಸ್ತ್ರಗಳಲ್ಲಿ ಹೇಳಿರುವ ಕ್ರಮದಂತೆ ಸಾಧನಾ ಮಾರ್ಗವನ್ನುಅನುಸರಿಸುತ್ತಾಅನುಭವಾತ್ಮಕಜ್ಞಾನವನ್ನು ಪಡೆದು ಸಂತರೆನಿಸಿಕೊಳ್ಳುತ್ತಾರೆ. ಸಂತರ ಸಮಾಗಮದಿಂದಕ್ರಿಯಾತ್ಮಕ ಸಾಧನಾಮಾರ್ಗ ಚುರುಕುಗೊಳ್ಳುತ್ತದೆ. ಅಲ್ಲದೇ ಅನೇಕ ಸಂದೇಹಗಳಿಗೆ ಸಂತರಿಂದ ಪರಿಹಾರಗಳು ದೊರೆಯುತ್ತವೆ. ‘ಪೌರುಷ’ಯತ್ನವನ್ನು ಶಾಸ್ತ್ರಗಳು ಮತ್ತು ಸಂತರು ಹೇಳಿದಂತೆಯೇ ಮಾಡುವುದರಿಂದ ಸಾಧನಾಮಾರ್ಗವು ಸಂಕ್ಷೇಪಗೊಂಡು ವೇಗಫಲ ದೊರೆಯುವ ಸಂಭವಇರುತ್ತದೆ. ಒಟ್ಟಾರೆಕ್ರಮವರಿತು ಮಾಡಲ್ಪಡು ಪ್ರಯತ್ನವೇದೊಡ್ಡತಪಸ್ಸು.