ಪಂಡಿತರತ್ನಂ ಕೆ.ಎಸ್.ವರದಾಚಾರ್ಯ ಶತಮಾನೋತ್ಸವ ಸಮಾರಂಭ

posted in: Upcoming Events | 0

ಪಾಠ-ಪ್ರವಚನ, ಗ್ರಂಥ ರಚನೆ, ಗ್ರಂಥ ಸಂಪಾದನೆ, ಆಧ್ಯಾತ್ಮಿಕ ಚಿಂತನೆ, ಯೋಗ, ತಪಸ್ಸು ಮುಂತಾದವುಗಳನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದ ಪಂಡಿತರತ್ನ ಕೆ.ಎಸ್. ವರದಾಚಾರ್ಯರ ಜನ್ಮಶತಮಾನೋತ್ಸವದ ಅಂಗವಾಗಿ *ಚತುರ್ವೇದ ಪಾರಾಯಣ, “ಸಮನ್ವಯ ವರದ” ಸಂಸ್ಮರಣ ಗ್ರಂಥದ ಪ್ರಕಟಣೆ, ದರ್ಶನ ಸಮನ್ವಯ – ಮತತ್ರಯ ಸಮನ್ವಯ – ಜೀವನ ಸಮನ್ವಯ ಎಂಬ ಮೂರು ಚಿಂತನಾಗೋಷ್ಠಿಗಳು, ಹಾಗೂ ವಿದ್ವತ್ ಸಮ್ಮಾನಗಳು* ನಾಡಿನ ಪ್ರಮುಖ ಸಂತರು, ಗಣ್ಯರು ಹಾಗೂ ವಿದ್ವಾಂಸರ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ನಡೆಯಲಿವೆ.