
ಪರಶಿವ ಹರಸತಿ ಶಂಕರಿಗೆ
ಆರತಿ ಬೆಳಗೋಣ.
ಭುವನೇಶ್ವರಿಯ ಚರಣಕೆ ನಮಿಸುತ
ಪುನೀತರಾಗೋಣ. ಆರತಿ
ಬೆಳಗೋಣ.
ಪರಶಿವ ಹರಸತಿ ಶಂಕರಿಗೆ
ಆರತಿ ಬೆಳಗೋಣ.
ಭುವನೇಶ್ವರಿಯ ಚರಣಕೆ ನಮಿಸುತ
ಪುನೀತರಾಗೋಣ. ಆರತಿ
ಬೆಳಗೋಣ.
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಪ
ಜಯಜಗದೀಶ್ವರಿಗೆ.
ಆನಂದರೂಪಿಣಿ ಜಯ ಅಭಯಂಕರಿ
ಕಾತ್ಯಾಯನಿಗೆ. ಮಂಗಲದಾರತಿ
ಬೆಳಗೋಣ.
ಕುಂಕುಮ ಅರ್ಚಿಸಿ ಶಾಕಾಂಬರಿಗೆ
ಬಾಗಿನ ಇರಿಸೋಣ
ಬಗೆ ಬಗೆ ಪುಷ್ಪದ ಹಾರವನರ್ಪಿಸಿ
ಜಯಜಯ ವೆನ್ನೋಣ.
ದೇವಿಗೆ ಆರತಿ ಬೆಳಗೋಣ.
ಮಧುಮಧುರ ಭಕ್ಷ ಶಾಲ್ಯಾನ್ನವ
ಪ್ರೀತಿಯಲಿರಿಸೋಣ
ಭಕ್ತಿಯೊಳ್ ಭಜನೆಯ ಹಾಡುತ ದೇವಿಗೆ
ಆರತಿ ಬೆಳಗೋಣ.
ಮಂಗಲದಾರತಿ ಬೆಳಗೋಣ.
–ಮಾಧವಿ ಭಟ್. ಬೆಂಗಳೂರು.
Leave a Reply