ಶ್ರೀಸ್ವರ್ಣವಲ್ಲಿಯ ಅಧ್ಯಾತ್ಮ ಗರ್ಭದಿಂದ ಅವತರಿಸಿದ ಶ್ರೀ ಆನಂದ ಬೋಧೇಂದ್ರ ಸರಸ್ವತೀಯವರನ್ನು ಬರಮಾಡಿಕೊಂಡ ಶಿಷ್ಯಲೋಕದ ಭಾವಸ್ಪಂದನ ವರ್ಣಿಸಲು ಶಬ್ದಗಳ ಬರವಾಯಿತು. ಶ್ರೀ ಕರುಣಾಮಯಿ ದೃಢ ಗುರುವಿನ ಜ್ಞಾನದ ಕರುಳಿಗೆ ಪಕ್ವವಾದ ಮುಗ್ಧ ಜ್ಞಾನ ತೃಷೆಯ ಕರುವೊಂದು ತಾಯಿಯ ತೆಕ್ಕೆಗೆ ಬಂಧವಾದ ಅನುಭೂತಿ. ಯತಿಶ್ರೇಷ್ಠರ ಅಧ್ಯಾತ್ಮ ವಕ್ತವ್ಯ ಚಿಂತನೆಗಳೊಂದಿಗೆ ಗುರುಶಿಷ್ಯರ ಭಾವಪೂರ್ಣ ಶಬ್ದಜ್ಞಾನ ಸಂಧಾನದಿಂದ ಸಭಾಂಗಣದಲ್ಲಿರುವ ಭಕ್ತರು ಕಣ್ತುಂಬಿಸಿದ ರೀತಿ ತ್ಯಾಗವೇ ಸರ್ವಶ್ರೇಷ್ಠ ಎಂಬುದನ್ನು ಶಿಷ್ಯರ ಮೌನಭಾವ ಸ್ಪಂದನವೇ ಸಾರಿ ಸಾರಿ ಹೇಳಿತು. ಎಲ್ಲರಲ್ಲಿಯೂ ಧನ್ಯತಾ ಭಾವ. ಹಗಲಿರುಳು ದುಡಿದ ಎಲ್ಲಾ ಸಮೀತಿಗಳ ಕಾರ್ಯಕರ್ತರ ಶ್ರಮವೂ ತ್ಯಾಗವೇ ಶ್ರೇಷ್ಠ ಎಂಬುದನ್ನು ಸಹಸ್ರಸಹಸ್ರವಾಗಿ “ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ” ಎಂಬುದನ್ನು ಮನಸ್ಸು ಮನನ ಮಾಡಿತು. ಒಪ್ಪ ಓರಣವಾಗಿ ಸುಂದರವಾದ ಜ್ಞಾನದೇಗುಲದೊಳಗೆ ಜೀವನದ ಅತ್ಯುತ್ತಮ ಸಮಯ ಕಳೆದಂತೆ ಧನ್ಯತಾಭಾವ ಮೂಡುವಂತೆ ಮಾಡಿದ ಶ್ರೀಗುರುಶ್ರೇಷ್ಠರ ಸನ್ನಿಧಾನ ಹಾಗೂ ಸಹಸ್ರಸಹಸ್ರ ಕಾರ್ಯಕರ್ತರು ಸುರಿಸಿದ ಪ್ರತಿಯೊಂದು ಬೆವರ ಹನಿಗೂ ದೀರ್ಘದಂಡ ನಮಸ್ಕಾರಗಳು… ಧನ್ಯವಾದಗಳು…
– ಸಾಮಾಜಿಕ ಜಾಲತಾಣಸಮಿತಿ, ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ
Leave a Reply