
ಶಿವನುಕೇವಲಶಿವನಲ್ಲ. ಶಿವನೇಸೃಷ್ಟಿಕರ್ತಬ್ರಹ್ಮನು, ಶಿವನೇಪಾಲಕಹರಿಯು, ಶಿವನೇಇಂದ್ರಾದಿದೇವನು. ಅಷ್ಟೇಯಾಕೇಶಿವನೇಜಗದ್ಯಂತ್ರದಪ್ರತಿಯೊಂದೂಕಣವು. ಇದನ್ನುಸ್ವಲ್ಪವಿವರಿಸಿದರೆಅರ್ಥವಾಗಬಹುದು. ಆದಿಶಂಕರಾಚಾರ್ಯರುಅದ್ವೈತಸಿದ್ಧಾಂತವನ್ನುಪ್ರತಿಪಾದಿಸಿದರು. ಆಅದ್ವೈತತತ್ವವೇಸಕಲಜಗತ್ತಿನಪರಮಾರ್ಥವಾಗಿದೆ, ಅದೇಅದ್ವೈತಅಂತಿಮಸತ್ಯವಾಗಿದೆ. ಜಗದಾದಿಯಲ್ಲಿನಿರಾಕಾರಪರಬ್ರಹ್ಮಪರಮಾತ್ಮನುತನ್ನಲೀಲಾನಾಟಕಕ್ಕೋಸ್ಕರಜಗತ್ಸೃಷ್ಟಿಯನ್ನುಆರಂಭಿಸಿದನು. ತನ್ನನಿರಾಕಾರರೂಪಕ್ಕೆಸತ್ವಾಗುಣಗಳಉಪಾದಿಯನ್ನುಹೊಂದಿಸಾಕಾರರೂಪದಲ್ಲಿಪ್ರಕಟಗೊಂಡನು. ತನ್ನಂತರದಲ್ಲಿತನ್ನನ್ನುತಾನೇಎರಡಾಗಿವಿಭಜಿಸಿಕೊಂಡುಪ್ರಕೃತಿ- ಪುರುಷರೂಪತಾಳಿದನು. ಈಪೃಕೃತಿ-ಪುರುಷರೂಪಗಳೇಸದಾಶಿವಹಾಗೂಆದಿಶಕ್ತಿ. ನಂತರದಲ್ಲಿಇದೇಸ್ವರೂಪಗಳುಸತ್ವಾದಿಗುಣಗಳಿಗನುಸಾರವಾಗಿಸೃಷ್ಟಿಯಪ್ರತ್ಯೇಕಕಾರ್ಯಕ್ಕೋಸ್ಕರಮತ್ತೆಪುರುಷರೂಪವಾಗಿಜಗತ್ಸೃಷ್ಟಿಗಾಗಿಬ್ರಹ್ಮನಾಗಿಸತ್ವಗುಣದಿಂದ, ಜಗತ್ಪಾಲನೆಗಾಗಿವಿಷ್ಣುವಾಗಿರಜೋಗುಣದಿಂದಹಾಗೂಲಯಕಾರಕನಾಗಿರುದ್ರನಾಗಿತಮೋಗುಣಯುಕ್ತವಾಗಿಪ್ರಕಟವಾದರು. ಹಾಗೂಅವರಶಕ್ತಿಸ್ವರೂಪವಾಗಿಕ್ರಮವಾಗಿಸರಸ್ವತಿ, ಲಕ್ಷ್ಮಿ, ಪಾರ್ವತಿರೂಪತಾಳಿತು. ಹೀಗೆಪ್ರಕಟಗೊಂಡರೂಪಗಳಿಂದಪ್ರಾರಂಭಿಸಿಇಂದ್ರಾದಿದೇವತೆಗಳುಸತ್ವಗುಣಗಳಿಂದಲೂ, ಅಸುರಾದಿಗಳುತಮೋಗುಣಯುಕ್ತರಾಗಿಯೂಜನಿಸಿದರು. ಎಲ್ಲಾಗುಣಗಳಿಂದಮಾನವನಜನನವಾಯಿತು. ಹೀಗೆಆಪರಬ್ರಹ್ಮಪರಮಾತ್ಮನಅಂಶದಿಂದಲೇಜಗತ್ತಿನಅಣು, ತೃಣ, ಕಾಷ್ಠಾದಿಗಳು, ಸಕಲಚರಾಚರಗಳೂಸೃಷ್ಟಿಯಾದವು. ಹೇಗೆಅಗ್ನಿಯಿಂದಹೊರಡುವಜ್ವಾಲೆಗಳುಹಾಗೂಜ್ವಾಲೆಗಳಿಂದಹೊರಡುವಕಿಡಿಗಳೂಅಗ್ನಿಯಅಂಶವಾಗಿರುವುದೋಹಾಗೆಯೇಜಗತ್ತಿನಪ್ರತಿಯೊಂದೂಅಣುವೂಆಪರಬ್ರಹ್ಮಪರಮಾತ್ಮನಅಂಶವೇಆಗಿದೆ.
ಹೀಗೆ ನಮ್ಮ ಭಕ್ತಿಗನುಗುಣವಾಗಿ ಬೇರೆ ಬೇರೆ ದೇವತೆಗಳನ್ನು ನಮ್ಮ ಇಷ್ಟಾರ್ಥದಂತೆ ಆರಾಧಿಸುತ್ತೇವೆ. ಪ್ರತಿಯೊಂದು ದೇವತೆಗಳ ಹಬ್ಬಗಳನ್ನು ಶದ್ಧಾ–ಭಕ್ತಿಯಿಂದ ಆಚರಿಸುತ್ತೇವೆ. ಆದರೆ ಆ ಎಲ್ಲ ದೇವತೆಗಳ ಮೂಲ ಸ್ವರೂಪನ ಆರಾಧನೆ ಹೇಗೆ ಮಾಡುತ್ತೇವೆ, ಯಾವ ದಿನ ಮಾಡುತ್ತೇವೆ, ಅದರ ವಿಧಾನಗಳೇನು ತಿಳಿದಿದೆಯೇ. ಹೌದು ಈ ಲೇಖನದ ಮೂಲ ಮೂಲ ವಿಷಯ ಅದೇ ಆಗಿದೆ. ಮಾಘ ಕೃಷ್ಣ ಚತುರ್ದಶಿಯು ಆ ಪರಬ್ರಹ್ಮ ಪರಮಾತ್ಮನ ಆರಾಧನೆಯ ದಿನವಾಗಿದೆ. ಆ ದಿನ ನಾವು ಶಿವರಾತ್ರಿ ಎಂಬುದಾಗಿ ಆಚರಿಸುತ್ತೇವೆ.
ಶ್ರೂಯತಾಂ ಧರ್ಮಸರ್ವಸ್ವಂ ಶಿವರಾತ್ರೌ ಶಿವಾರ್ಚನಂ ವ್ರಲಗ್ನವಿಧಾನೇನ ಸ್ವರ್ಗಂ ಪುಣ್ಯೇನಕರ್ಮಣಾ||
ಶಿವರಾತ್ರಿಯ ದಿನ ವಿಧಾನೋಕ್ತವಾಗಿ ಶಿವಾರಾಧನೆಯನ್ನು ಮಾಡಿದರೆ ಆ ಒಂದು ಪುಣ್ಯ ಫಲದಿಂದ ಸ್ವರ್ಗ (ಮೋಕ್ಷ) ಪ್ರಾಪ್ತವಾಗುವುದಲ್ಲದೇ ಇಹ ಜನ್ಮದಲ್ಲಿ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ. ಹಾಗಾದರೆ ಆ ಇಷ್ಟಾರ್ಥ ಪ್ರದವಾದ ವ್ರತದ ವಿಧಾನಗಳೇನು, ಯಾವ ರೂಪದಲ್ಲಿ ಶಿವನನ್ನು ಪೂಜಿಸಬೇಕು, ಯಾವ ಯಾವ ರೂಪದಲ್ಲಿ ಪೂಜಿಸಿದರೆ ಏನು ಫಲ ಎಂಬುದನ್ನು ತಿಳಿಯೋಣ.
ಚತುರ್ದಶ್ಯಾಂ ನಿರಾಹಾರೋ ಭೂತ್ವಾಶಂಭೋ ಪರೇಹನಿ| ಭೋಕ್ಷಯೇsಹಂ ಭುಕ್ತಿಮುಕ್ತ್ಯರ್ಥಂ ಶರಣಂ ಮೇ ಭವೇಶ್ವರ||ಚತುರ್ದಶಿಯ ದಿನದಂದು ನಿರಾಹಾರನಾಗಿ ಸದಾಶಿವನ ಪೂಜೆಯನ್ನು ಮಾಡಬೇಕು. ಸಾಯಂಕಾಲದಲ್ಲಿ ಕಪ್ಪು ಎಳ್ಳು ಸೇರಿಸಿದ ನೀರಿನಿಂದ ಸ್ನಾನ ಮಾಡಿ ಭಸ್ಮ ತ್ರಿಪುಂಡ್ರ, ರುದ್ರಾಕ್ಷಗಳನ್ನು ಧರಿಸಿ ಮುಸ್ಸಂಜೆಯಿಂದ ಶಿವ ಪೂಜೆಯನ್ನಾರಂಭಿಸಬೇಕು. ಶಿವನಿಗೆ ಯಾಮಪೂಜೆಯು ಶ್ರೇಷ್ಠವಾದದ್ದು. ಹಿಂದಿನ ದಿನ ಸೂರ್ಯಾಸ್ತದಿಂದಾರಂಭಿಸಿ ಮರುದಿನ ಸೂರ್ಯೋದಯದವರೆಗೆ ನಾಲ್ಕು ಯಾಮಗಳು. ಪ್ರತಿ ಯಾಮದಲ್ಲೂ ಅರ್ಘ್ಯ, ಪಾದ್ಯಾದಿಗಳಿಂದೊಳಗೊಂಡ ಉಪಚಾರ ಪೂಜೆಗಳನ್ನು ಮಾಡಬೇಕು.
ಶತಾವರ್ತಿ, ಏಕಾದಶಾವರ್ತಿ ಅಥವಾ ಕನಿಷ್ಠಪಕ್ಷ ಒಂದಾವರ್ತಿಯಾದರೂ ರುದ್ರ ನಮಕ–ಚಮಕ ಮಂತ್ರಗಳಿಂದ ಅಭಿಷೇಕವನ್ನು ಮಾಡಬೇಕು. ಧೂಪ–ದೀಪ, ನೈವೇದ್ಯಾದಿಗಳನ್ನು ಮಾಡಬೇಕು. ಪ್ರಾರ್ಥನಾಪೂರ್ವಕ ಪತ್ರ–ಪುಷ್ಪವನ್ನು ಅರ್ಪಿಸಿ ವ್ರತಾರ್ಘ್ಯವನ್ನು ಬಿಡಬೇಕು. ಶಿವನಿಗೆ ದತ್ತೂರ, ಕರವೀರ ಹಾಗೂ ಬಿಲ್ವಪತ್ರೆಯು ಶ್ರೇಷ್ಠವು. ಸಹಸ್ರನಾಮಾಷ್ಟೋತ್ತರಗಳಿಗೆ ಬಿಲ್ವಾರ್ಚನೆ ಮಾಡಬೇಕು. ಹೀಗೆ ರಾತ್ರಿಯೆಲ್ಲ ಜಾಗರಣ ಮಾಡಿ ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಪುನಃ ಶಿವನನ್ನು ಪೂಜಿಸಬೇಕು. ನಂತರದಲ್ಲಿ ಹನ್ನೆರಡು ಅಥವಾ ಕನಿಷ್ಠ ಪಕ್ಷ ಒಬ್ಬ ಸದ್ಬ್ರಾಹ್ಮಣನಿಗಾದರೂ ದಾನಗಳನ್ನು ಕೊಟ್ಟು, ಸಂತರ್ಪಣೆ ಮಾಡಿ ವ್ರತ ಸಮಾಪ್ತಿ ಮಾಡಬೇಕು.
ಮೃಣ್ಮಯ ಅಥವಾ ಪಾರ್ಥಿವ ಲಿಂಗ ಪೂಜೆ ಮಾಡುವುದಾದಲ್ಲಿ ಶುಭ್ರವಾದ ಮಣ್ಣನ್ನು ತಂದು ಗಾಳಿಸಿ ಲಿಂಗ ಮಾಡಬೇಕು. ಆ ಲಿಂಗವು ಎಂಭತ್ತು ಗುಂಜಿ ಪ್ರಮಾಣಕ್ಕಿಂತ ಕಡಿಮೆಯಾಗಬಾರದು.ಅಂದರೆ “ಅಂಗುಷ್ಠಮಾನಾದಧಿಕಂ ವಿತಸ್ತ್ಯವಧಿ ಸುಂದರಂ| ಪಾರ್ಥಿವಂ ರಚಯೇಲ್ಲಿಂಗಂ ನ ನ್ಯೂನಂ ನಾಧಿಕಂ ಚತತ್|| ಮಾಡಿದ ಲಿಂಗವು ಅಂಗುಷ್ಠ ಪ್ರಮಾಣಕ್ಕಿಂತ ಚಿಕ್ಕದೂ-ದೊಡ್ಡದೂ ಆಗಿರಬಾರದೆಂದರ್ಥ.
“ಆಯುಷ್ಮಾನ್ಬಲವಾನ್ಶ್ರೀಮಾನ್ಪುತ್ರವಾನ್ಧನವಾನ್ಸುಖೀ| ವರಮಿಷ್ಟಂಲಭೇಲ್ಲಿಂಗಂಪಾರ್ಥಿವಂಯಃಸಮಾಚರೇತ್|| ಅಂದರೆಪಾರ್ಥಿವಲಿಂಗದಪೂಜೆಮಾಡುವುದರೊಂದಆಯುಷ್ಯವಂತರೂ, ಬಲಯುತರೂ, ಶ್ರೀಮಂತರೂ, ಪುತ್ರಪ್ರಾಪ್ತಿಯೂ, ಧನವಂತರೂ, ಸುಖಿಗಳೂಆಗುವುದಲ್ಲದೆಇಚ್ಚಿಸಿದಫಲವನ್ನುಪಡೆಯಬಹುದಾಗಿದೆ. ಮೃತ್ತಿಕಾಲಿಂಗದಂತೆಬಾಣಲಿಂಗವೂಶ್ರೇಷ್ಠವಾದದ್ದು. ಏಳುಬಾರಿಲಿಂಗವನ್ನುತೂಕಮಾಡಿದಾಗಲೂಪ್ರತಿಬಾರಿಯೂಅದರಭಾರವುಹೆಚ್ಚಾಗುತ್ತದೆಹೊರತುಸಮನಾಗಿರುವುದಿಲ್ಲ, ಇದುಉತ್ತಮಬಾಣಲಿಂಗದವಿಶೇಷಲಕ್ಷಣವಾಗಿದೆ. ಈಲಕ್ಷಣಗಳಿಂದೊಡಗೂಡಿದಲಿಂಗವನ್ನುನರ್ಮದಾಬಾಣಲಿಂಗಎನ್ನುತ್ತಾರೆ. ಇನ್ನುಸುವರ್ಣ-ರಜತಾದಿಲಿಂಗಗಳಿಗೆಪಂಚಸೂತ್ರಿಪರೀಕ್ಷಾಕ್ರಮವಿದೆ. ಆಕ್ರಮವಾಗಿಪರೀಕ್ಷಿಸಿಯೇಪೂಜಿಸಬೇಕು. ಆದರೆ “ದ್ವಾಪರೇಪಾದರಂಶ್ರೇಷ್ಠಂಮೃಣ್ಮಯಂತುಕಲೌಯುಗೇ” ಈವಚನದಂತೆಕಲಿಯುಗದಲ್ಲಿಪಾರ್ಥಿವಲಿಂಗದಪೂಜೆಶ್ರೇಷ್ಠವಾದದ್ದು. ಸಹಸ್ರಸಂಖ್ಯೆಯಲ್ಲಿಮೃಣ್ಮಯಲಿಂಗವನ್ನುಪೂಜಿಸುವವಿಶೇಷಕ್ರಮವೂಒಂದಿದೆ.
ಇನ್ನುಲಿಂಗಭೇದದಪಲವಿಶೇಷಗಳನ್ನುನೋಡುವುದಾದರೆವಜ್ರಲಿಂಗದಿಂದಆಯುಷ್ಯಪ್ರಾಪ್ತವಾಗುವುದು. ಮುತ್ತಿನಲಿಂಗದಿಂದರೋಗನಾಶವು. ವೈಢೂರ್ಯಲಿಂಗದಿಂದಶತ್ರುನಾಶ. ಐಶ್ವರ್ಯಪ್ರಾಪ್ತಿಗಾಗಿಪದ್ಮರಾಗಲಿಂಗ. ಪುಷ್ಯರಾಗದಿಂದಸುಖ, ಇಂದ್ರನೀಲದಿಂದ, ಯಶಸ್ಸು, ಪಚ್ಚೆಯಿಂದಪುಷ್ಟಿಪ್ರಾಪ್ತಿಯಾದರೆಸ್ಪಟಿಕಲಿಂಗದಿಂದಸಕಲಕಾಮನೆಗಳೂಈಡೇರುತ್ತವೆ. ಬೆಳ್ಳಿಯಿಂದರಾಜ್ಯಪ್ರಾಪ್ತಿಹಾಗೂಪಿತೃಮುಕ್ತಿಯಫಲವನ್ನುಹೇಳಲಾಗಿದೆ. ಬಂಗಾರದಲಿಂಗದಿಂದಸತ್ಯಲೋಕಪ್ರಾಪ್ತಿಹಾಗೂಸ್ಥಿರಲಕ್ಷ್ಮೀ, ತಾಮ್ರದಿಂದಪುಷ್ಟಿಮತ್ತುಆಯುಷ್ಯ, ಹಿತ್ತಾಳೆಯಿಂದತುಷ್ಟಿ, ಕಂಚಿನಿಂದಕೀರ್ತಿ, ಲೋಹದಿಂದಶತ್ರುನಾಶ, ಸೀಸದಿಂದಆಯುಷ್ಯ, ಗಂಧದಿಂದಸೌಭಾಗ್ಯ, ಪಿಷ್ಟ(ಹಿಟ್ಟು) ಲಿಂಗದಿಂದಪುಷ್ಟಿ, ರೋಗನಾಶಮತ್ತುಸುಖಪ್ರಾಪ್ತಿಯಾಗುತ್ತದೆ. ಉದ್ದಿನಹಿಟ್ಟಿನಲಿಂಗದಿಂದಸ್ತ್ರೀಲಾಭ, ಬೆಣ್ಣೆಯಲಿಂಗದಿಂದಸುಖ, ಗೋಮಯಲಿಂಗದಿಂದರೋಗನಾಶ, ಬೆಲ್ಲದಲಿಂಗದಿಂದಅನ್ನಾಹಾರಪ್ರಾಪ್ತಿ, ಬಿದಿರಿನಮೊಳಕೆಯಲಿಂಗದಿಂದವಂಶವೃದ್ಧಿಹೀಗೆಲ್ಲಪ್ರತ್ಯೇಕಪಲಗಳನ್ನುಹೇಳಿದರೂಸಹಪರದಲ್ಲಿಮೋಕ್ಷಪ್ರಾಪ್ತಿಯೆಂದುಹೇಳಲಾಗುತ್ತದೆ. ಅಲ್ಲದೆನಾವುಗಮನಿಸಬೇಕಾದದ್ದೆಂದರೆಜಗದ್ವಾಪಕನಾದಪರಶಿವನನ್ನುಸಕಲವಸ್ತುಗಳಲ್ಲಿಯೂಆರಾಧಿಸಬಹುದು. ಅಂದರೆಜಗತ್ತಿನಪ್ರತಿಯೊಂದುಕಣವೂಪರಮಾತ್ಮನಅಂಶವೇಆಗಿದೆ.
ಪ್ರತಿ ತಿಂಗಳ ಕೃಷ್ಣ ಚತುರ್ದಶಿಯಂದು ಮಾಸ ಶಿವರಾತ್ರಿಯನ್ನು ಆಚರಿಸುವ ಕ್ರಮವೂ ಇದೆ. ಇದು ಕಾಮ್ಯ ಶಿವರಾತ್ರಿ ಎಂದು ಕರೆಯಲ್ಪಡುತ್ತದೆ. ಮನೆಯಲ್ಲಿ ಎರಡು ಲಿಂಗವನ್ನು ಪೂಜಿಸಬಾರದು. ಸ್ತ್ರೀಯರು ಬಾಣಲಿಂಗವನ್ನು ಸ್ಪರ್ಶಿಸಬಾರದು. ಶಿವನಿರ್ಮಾಲ್ಯವಾದ ಪತ್ರ, ಪುಷ್ಪ, ಫಲ, ಜಲಗಳು ಗ್ರಾಹ್ಯವಲ್ಲ. ಶಿವ ನೈವೇದ್ಯವನ್ನು ಭಕ್ಷಿಸಿದರೆ ಚಾಂದ್ರಾಯಣ ಹಾಗೂ ಸಾಂತಪನ ಕೃಚ್ಛ್ರವನ್ನು ಆಚರಿಸಬೇಕು. ಆದರೂ ಅವು ಶಾಲಿಗ್ರಾಮ ಸಂಪರ್ಕದಿಂದ ಗ್ರಾಹ್ಯವಾಗುತ್ತದೆ. ಜ್ಯೋತಿರ್ಲಿಂಗ, ಸ್ವಯಂಭೂಲಿಂಗ ಹಾಗೂ ಸಿದ್ಧಪುರುಷರು ಸ್ಥಾಪಿಸಿದ ಲಿಂಗಗಳಿಗೆ ಈ ಅಗ್ರಾಹ್ಯ ದೋಷವಿರುವುದಿಲ್ಲ. ಭಸ್ಮ, ರುದ್ರಾಕ್ಷಿ ಧಾರಣೆಯಿಲ್ಲದೆ ಮಾಡಿದ ಶಿವಪೂಜೆಯು ನಿಷ್ಫಲವು. ಶಿವಲಿಂಗಕ್ಕೆ ಕೈಗಾಣದಿಂದ ತೆಗೆದ ಎಳ್ಳೆಣ್ಣೆಯಿಂದ ಇಪ್ಪತ್ತೈದು ಫಲ ಪ್ರಮಾಣದಲ್ಲಿ ಅಭ್ಯಂಗವನ್ನು ಮಾಡಬೇಕು, ನೂರು ಫಲ ಪ್ರಮಾಣದಿಂದ ನೀರಿನ ಅಭಿಷೇಕ, ಮಹಾಭಿಷೇಕವು ಎರಡುಸಾವಿರ ಫಲ ಜಲಪ್ರಮಾಣವಾಗಿದೆ. ಶಿವನಿಗೆ ಉಷ್ಣೋದಕ ಹಾಗೂ ಶಿತೋದಕದಿಂದ ಅಭಿಷೇಕ ಮಾಡಬಹುದು. ಒಟ್ಟಿನಲ್ಲಿ ಶಿವಾರ್ಚನೆಯಿಂದಲೇ ಸಕಲ ದೇವತೆಗಳ ಪೂಜಾ ಫಲಗಳೂ ದೊರಕುತ್ತವೆ, ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ.
ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರು ಚಂದ್ರಾವತಂಸಂ ರತ್ನಾಕಲ್ಪೋಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಮ್|
ಪದ್ಮಾಸೀನಂ ಸಮಂತಾತ್ ಸ್ತುತಮಮರಗಣೈರ್ವ್ಯಾಘ್ರಕೃತ್ತಿಂ ವಸಾನಂ ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲಭಯಹರಂ ಪಂಚವಕ್ತ್ರಂ ತ್ರಿಣೇತ್ರಂ||
ಲೇಖನ- ಶ್ರೀಸುಬ್ರಹ್ಮಣ್ಯಜೋಶಿಕೋಡಿಗಾರ
ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ
ಚಿತ್ರ – ಗೂಗಲ್