ಭಗವದ್ಗೀತಾ ಸಪ್ತಾಹ ಅಭಿಯಾನ

posted in: Bhagavadgeeta Abhiyana | 0

ಭಗವದ್ಗೀತಾ ಸಪ್ತಾಹ ಅಭಿಯಾನದ ಅಡಿಯಲ್ಲಿ 12-11-2025ರಂದು ಯಲ್ಲಾಪುರ ತಾಲೂಕ ಶಿಸ್ತುಮಡಿ ಗ್ರಾಮದ ಗಣಪತಿ ಕಟ್ಟೆ ದೇವಸ್ಥಾನದಲ್ಲಿ ಭಗವದ್ಗೀತಾ ಸಪ್ತಾಹ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀಮಾನ್ ವಿದ್ವಾನ್ ಗೋಪಾಲಕೃಷ್ಣ ಭಟ್ ಕೊರಗಿ,ಮತ್ತು ಶ್ರೀಯುತ ಕೆ ಟಿ ಹೆಗಡೆ, ಶ್ರೀಯುತ ಆರ್, ಜಿ,ಭಟ್ ದವಣ್ಣ ಮನೆ, ಶ್ರೀಜಿ ಜಿ ಭಟ್ ದಿವಾಕರಮನೆ ಶ್ರೀಜಿ,ಜಿ ಭಟ್ ಕೈಶೆಟ್ಟಿಮನೆ, ದೇವಸ್ಥಾನ ಅರ್ಚಕರಾದ ಶ್ರೀವಿಶ್ವನಾಥ್ ಭಟ್, ಹಾಗೂ ಶ್ರೀಮಂಜುನಾಥ್ ಭಟ್ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಮಾತೆಯರಿಂದ ಭಗವದ್ಗೀತೆಯ 11ನೇ ಅಧ್ಯಾಯದ ಪಠಣ ಮಾಡಲಾಯಿತು.

ಸೊರಬ ತಾಲೂಕು ಭಗವದ್ಗೀತಾ ಅಭಿಯಾನ ಸಮಿತಿ ಸೊರಬ ಮತ್ತು ಮಾತೆಯರ ಸಹಯೋಗದಲ್ಲಿ ೫ ನೇ ದಿನವಾದ 7-11-2025 ಮತ್ತು ನಿನ್ನೆ ಪ್ರವಚನ ನಡೆಸಿಕೊಟ್ಟ ಶ್ರೀ ನರಹರಿ ಭಟ್ ಶಿವಮೊಗ್ಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಗೌರವ ಅಧ್ಯಕ್ಷರು, ಸಂಚಾಲಕರು ಹಾಗೂ ಮಾತಾ ಭಗಿನೀಯರು ಭಾಗವಹಿಸಿ ಶ್ರೀ ಕೃಷ್ಣ ಪರಮಾತ್ಮನ ಕೃಪೆಗೆ ಪಾತ್ರರಾದರು.

ದಿನಾಂಕ :07.11.2025, ಶುಕ್ರವಾರ, ಶಿರಾಳಕೊಪ್ಪದಲ್ಲಿ, ಚೆನ್ನಾಮಲ್ಲಿಕಾರ್ಜುನ ಶಾಲೆಯಲ್ಲಿ ನಡೆದ, ಭಗವದ್ಗೀತಾ ಕಲಿಕಾ ಕಾರ್ಯಕ್ರಮ.

ಶಿವಮೊಗ್ಗದ ಕುಮದ್ವತಿ ರೆಸಿಡೆನ್ಸಿಯಲ್ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ

ಶಿವಮೊಗ್ಗದ ಎಜುರೈಟ್ ಕಾಲೇಜಿನಲ್ಲಿ ವಿ. ನರಹರಿ ಭಟ್ಟರ ಉಪನ್ಯಾಸ ಕಾರ್ಯಕ್ರಮ