ಶಿವಮೊಗ್ಗದ ಕೇಂದ್ರ ಕಾರಾಗ್ರಹದಲ್ಲಿ ಭಗವದ್ಗೀತಾ ಅಭಿಯಾನ

posted in: Bhagavadgeeta Abhiyana | 0

ಸೋಂದಾ ಸ್ವರ್ಣವಲ್ಲೀ ಮಹಾ‌ಸಂಸ್ಥಾನದ‌ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ
ಶಿವಮೊಗ್ಗದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ನಡೆಯುತ್ತಿದೆ. ಈ ವರ್ಷದ ಅಭಿಯಾನದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಶಿವಮೊಗ್ಗದ ಕೇಂದ್ರ ಕಾರಾಗ್ರಹ ಸಾಕ್ಷಿಯಾಯಿತು. ಅಭಿಯಾನ ಶ್ಲೋಕಕೇಂದ್ರದ ಆರಂಭಕ್ಕೆ ಶ್ರೀಗಳವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ ನಡೆಯಿತು. ಖೈದಿಗಳಿಗೆ ಪರಮ ಪೂಜ್ಯ ಶ್ರೀಗಳು ಆಶೀರ್ವಚನ ನುಡಿದರು. ಅಪರಾಧಕ್ಕೆ ಮೂಲ ಕಾರಣಗಳಾದ ಅತಿ ಆಸೆ, ಕ್ರೋಧ, ಅತಿಯಾದ ಭೋಗ, ದ್ವೇಷ, ಆಕ್ರೋಶ ಎಂಬ ದುರ್ಗುಣಗಳನ್ನು ಬಿಡುವ ಪ್ರಯತ್ನ ಮಾಡುವ ಮೂಲಕ ಸದ್ಗುಣಗಳಾದ ತ್ಯಾಗ, ಶಾಂತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಖೈದಿಗಳಿಗೆ ಭಗವಂತನ ಅಮೃತವಾಣಿಯಾದ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಿದರು. ಈ ವೇಳೆ ಮುಖ್ಯ ಅಧೀಕ್ಷಕ ಡಾ. ಪಿ ರಂಗನಾಥ್, ಸಹಾಯಕ ಅಧೀಕ್ಷಕಿ
ಕುಮಾರಿ ಪ್ರೀತಿ ಎ. ಎಸ್ , ಅಭಿಯಾನ ಸಮಿತಿಯ ಪಿ.ಪಿ.ಹೆಗಡೆ,
ಲಕ್ಷ್ಮೀನಾರಾಯಣ ಜೋಶಿ, ಶಿಕ್ಷಕ ಗೋಪಾಲಕೃಷ್ಣ
ಇತರರು ಇದ್ದರು.

ಚಿತ್ರದುರ್ಗದ ಜಿಲ್ಲಾ ಬಂದೀಖಾನೆ ಆವರಣದಲ್ಲಿ 1-11-2025ರಂದು ಉಪನ್ಯಾಸ, ಸಮಾರೋಪ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅಧೀಕ್ಷಕರು ಶ್ರೀ ಸಿದ್ಧರಾಮ ಪಾಟೀಲ್, ಜೈಲರ್ ಶ್ರೀ ರಾಜೇಂದ್ರ, ಉಪ ಜೈಲರ್ ಶ್ರೀ ಮಡಿವಾಳಪ್ಪ, ಶಿಕ್ಷಕರಾದ ಶ್ರೀ ಶ್ರೀರಾಮರೆಡ್ಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.