ಮಾರಿಕಾಂಬಾ ದೇವಸ್ಥಾನಕ್ಕೆ ಶ್ರೀಗಳವರ ಭೇಟಿ
ಶಿರಸಿ ತಾಲೂಕಿನ ಹಾರೇಹುಲೇಕಲ್ ನ ಗ್ರಾಮದೇವಿ ಮಾರಿಕಾಂಬಾ ದೇವಸ್ಥಾನಕ್ಕೆ ಶ್ರೀ ಶ್ರೀಗಳವರು ಭೇಟಿ ನೀಡಿ, ದೇವರ ದರ್ಶನ ಪಡೆದರು. Read More
ಶಿರಸಿ ತಾಲೂಕಿನ ಹಾರೇಹುಲೇಕಲ್ ನ ಗ್ರಾಮದೇವಿ ಮಾರಿಕಾಂಬಾ ದೇವಸ್ಥಾನಕ್ಕೆ ಶ್ರೀ ಶ್ರೀಗಳವರು ಭೇಟಿ ನೀಡಿ, ದೇವರ ದರ್ಶನ ಪಡೆದರು. Read More
ಶಾಸ್ತ್ರಗೋಷ್ಠಿ 2025 Read More
ಪ್ರವೇಶ ಪ್ರಾರಂಭ ಮೇ 15 ರಿಂದ Read More
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಭಯ ಶ್ರೀಗಳಾದ ಶ್ರೀ ಗಂಗಾಧೇಂದ್ರ ಸರಸ್ವತೀ ಮತ್ತು ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಗೋಕರ್ಣಕ್ಕೆ ಆಗಮಿಸಿ ಮಹಾಗನಪತಿ,ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಪಾರ್ವತಿಯ ದರ್ಶನ ಪಡೆದರು. Read More
ಯಲ್ಲಾಪುರ ತಾಲೂಕಿನ ಚಂದುಗುಳಿಯಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಮಹೋತ್ಸವದ ಕಾರ್ಯಕ್ರಮ ಉದ್ಘ್ಹಾಟಿಸಿದರು. Read More
ಯಕ್ಷ ಸಂಭ್ರಮ ಟ್ರಸ್ಟ್ ಹಮ್ಮಿಕೊಂಡ ದಶಕಂ ಧರ್ಮ ಲಕ್ಷಣಂ ತಾಳಮದ್ದಲೆ ದಶಾಹದ ಹಿನ್ನೆಲೆಯಲ್ಲಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ಶಿರಸಿಯ ಸ್ವಾದಿ ಜೈನಮಠದಲ್ಲಿ ಆಯೋಜಿಸಿದ್ದ ಸೋಂದಾ ಇತಿಹಾಸೋತ್ಸವವನ್ನು ಶ್ರೀ ಶ್ರೀಗಳವರು ಉದ್ಘಾಟಿಸಿದರು. Read More
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ವಿಜಯ ದಶಮಿ ಹಿನ್ನಲೆಯಲ್ಲಿ ಭಕ್ತರನ್ನು ಉದ್ದೇಶಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸರ್ವರ ಇಷ್ಟಾರ್ಥ ಸಿದ್ಧಿಸುವ ದೇವಿಯ ಆರಾಧನೆ ಆರಂಭಗೊಂಡಿತು. ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಅವರ ಕರಕಮಲ ಸಂಜಾತರಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ವ್ರತಾಚರಣೆಯ ಅಂಗವಾಗಿ ನಡೆಯುವ ಎಲ್ಲಾ ವೈದಿಕ ಕಾರ್ಯಕ್ರಮಗಳನ್ನು ಮಹಾಸಂಕಲ್ಪದ ಮೂಲಕ ಆರಂಭಿಸಲಾಯಿತು. ಪ್ರತಿನಿತ್ಯವೂ ಉಭಯ ಶ್ರೀಗಳು ಶ್ರೀ ಮಾತೆಯ ವಿಶೇಷ ಪೂಜೆಯನ್ನು , ಶ್ರೀಚಕ್ರಾರ್ಚನೆಯನ್ನು, ಮಹಾಮಂಗಳಾರತಿಯನ್ನು ನೆರವೇರಿಸುತ್ತಾರೆ. ವೇದಗಳ ಪಾರಾಯಣ, ಅಧ್ಯಾತ್ಮ ರಾಮಾಯಣ ಪಾರಾಯಣ, ದೇವೀ ಭಾಗವತ ಪಾರಾಯಣ, ಸಪ್ತಶತೀ ಪಾರಾಯಣ, ಶತರುದ್ರಾಭಿಷೇಕ ಈ ಎಲ್ಲಾ ವೈದಿಕ ಕಾರ್ಯಕ್ರಮಗಳು ಆರಂಭಗೊಂಡವು. ನಿತ್ಯವೂ ಅನೇಕ ವಿದ್ವಾಂಸರುಗಳಿಂದ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ದೇವೀ ಆರಾಧನೆಗೆ ಪ್ರಶಸ್ತವಾದ ಈ ಪುಣ್ಯತಮವಾದ ಪರ್ವದಲ್ಲಿ, ದೇವೀ ಆರಾಧನೆಯನ್ನು ಅನೇಕ ವರ್ಷಗಳಿಂದ, ಅನೇಕ ಯತಿಗಳು ನಿಷ್ಠೆಯಿಂದ ನಡೆಸಿಕೊಂಡು ಬಂದ ದಿವ್ಯ ಕ್ಷೇತ್ರವಾಗಿದೆ. Read More
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಅವರ ಕರಕಮಲ ಸಂಜಾತರದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರು ಚಾತುರ್ಮಾಸ್ಯ ವ್ರತ ಸಮಾಪ್ತಿ ಅಂಗವಾಗಿ ಶಾಲ್ಮಲಾ ತೀರದಲ್ಲಿ ಗಂಗಾಪೂಜೆ ನೆರವೇರಿಸಿ ಸೀಮೋಲ್ಲಂಘನಗೈದರು.