ಗೋಪೂಜೆ

posted in: Events | 0

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಬಲಿಪಾಡ್ಯಮಿಯ ಸಂದರ್ಭದಲ್ಲಿ ಗೋಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನೆರವೇರಿದವು.
ಶ್ರೀಮಠದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಸಾನಿಧ್ಯ ಮತ್ತು ಕೃಪಾಶೀರ್ವಾದದಲ್ಲಿ ಪರಾಭವ ಸಂವತ್ಸರದ ಕಾರ್ತೀಕ ಮಾಸದ ಶುಕ್ಲ ಪ್ರತಿಪದೆಯಂದು ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು. ಗೋವರ್ಧನ ಗಿರಿಯ ಸ್ಮರಣೆ ಹಾಗೂ ಪೂಜೆಯೊಂದಿಗೆ ಗೋಗ್ರಾಸ ಸಮರ್ಪಣೆ ನೆರವೇರಿಸಲಾಯಿತು. ಗೋಮಾತೆಯರನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ಪೂಜಿಸಿ, ಆರತಿ ಬೆಳಗುವ ಮೂಲಕ ಭಕ್ತಿಪೂರ್ವಕವಾಗಿ
ಶ್ರೀಮಠದ ಆವರಣದಲ್ಲಿರುವ ಮೂರು ಪ್ರಮುಖ ಗೋಶಾಲೆಗಳಿಗೆ ಉಭಯ ಶ್ರೀಗಳು ಭೇಟಿ ನೀಡಿ, ಅಲ್ಲಿರುವ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಮನಗಳನ್ನು ಅರ್ಪಿಸಿದರು. ಗೋವುಗಳ ಸಂರಕ್ಷಣೆ ಮತ್ತು ಸೇವೆಯ ಮಹತ್ವವನ್ನು ಸಾರುವ ಸಾಂಪ್ರದಾಯಿಕ ಆಚರಣೆಯಂತೆ ಗೋವುಗಳನ್ನು ಸಾಲಾಗಿ ಬಯಲಿಗೆ ಬಿಡುವ ಕಾರ್ಯಕ್ರಮವೂ ನಡೆಯಿತು.
ಇದರೊಂದಿಗೆ ಪಂಚಾಂಗ ಶ್ರವಣ ಹಾಗೂ ಹುಲಿದೇವರ ಪೂಜಾ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನೆರವೇರಿದವು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿದ್ವಾಂಸರು, ಶ್ರೀಮಠದ ಪಾಠಶಾಲೆಯ ವಿದ್ಯಾರ್ಥಿಗಳು, ಸ್ಥಳೀಯ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.