ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಮಠದೇವಳ, ಶಿರಸಿ
|| ದಾನೇ ಸರ್ವಂ ಪ್ರತಿಷ್ಠಿತಮ್ ||
ಭೂದಾನ ಸಮರ್ಪಣಾ ಪರ್ವ ಹಾಗೂ ಆಶೀರ್ವಚನ ಕಾರ್ಯಕ್ರಮ
ಸಮಸ್ತ ಶ್ರೀಮಠದ ಭಕ್ತಾದಿಗಳಲ್ಲಿ ಹಾಗೂ ಸಜ್ಜನರಲ್ಲಿ ಸಪ್ರೇಮ ವಿನಂತಿ,
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಹಾಗೂ ತತ್ಕರಕಮಲಸಂಜಾತ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಮತ್ತು ಆಶೀರ್ವಾದಗಳೊಂದಿಗೆ, ಶ್ರೀಕ್ಷೇತ್ರ ಗೋಕರ್ಣದ ಪವಿತ್ರ ಭೂಮಿಯನ್ನು ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ಖರೀದಿಸಲು ಸಂಕಲ್ಪಿಸಲಾಗಿದೆ.
ಈ ಮಹತ್ಕಾರ್ಯಕ್ಕಾಗಿ ದಾನಿಗಳು ಪಾಲ್ಗೊಂಡು, ಭೂದಾನದ ಪವಿತ್ರ ಸೇವೆಯನ್ನು ಸಮರ್ಪಿಸುವ ವಿಶೇಷ “ಭೂದಾನ ಸಮರ್ಪಣಾ ಪರ್ವ” ಕಾರ್ಯಕ್ರಮವನ್ನು ಶ್ರೀಮಠದಲ್ಲಿ ಆಯೋಜಿಸಲಾಗಿದೆ. ತಾವುಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರಾಧ್ಯ ಶ್ರೀ ಲಕ್ಷ್ಮೀನರಸಿಂಹ, ಶ್ರೀ ರಾಜರಾಜೇಶ್ವರೀ, ಶ್ರೀ ಚಂದ್ರಮೌಳೀಶ್ವರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.
ಪರಾಭವ ಸಂವತ್ಸರದ ಭಾದ್ರಪದ ಶುದ್ಧ ದ್ವಾದಶಿ
ದಿನಾಂಕ: 23-09-2026, ಬುಧವಾರ
ಸ್ಥಳ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ
ಕಾರ್ಯಕ್ರಮದ ವಿವರ
ಪೂರ್ವಾಹ್ನ 10:30: ದಾನಿಗಳಿಂದ ಭೂದಾನ ಸಮರ್ಪಣೆ
ಪೂರ್ವಾಹ್ನ 11:30 ಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರಿಂದ ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಸಮರ್ಪಣಾ ಪ್ರಮಾಣ ಪತ್ರ’ ಪ್ರದಾನ.
ಮಧ್ಯಾಹ್ನ 1 -30 ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ತೀರ್ಥಪ್ರಸಾದ / ಮಹಾಪ್ರಸಾದ
“ಗೋಕರ್ಣ ಪವಿತ್ರ ಕ್ಷೇತ್ರದಲ್ಲಿ ಶ್ರೀಮಠದ ಸೇವೆಗಾಗಿ ಕನಿಷ್ಠ 10 ಚದರ ಅಡಿ ಭೂಮಿ ಸಮರ್ಪಿಸಿ ಪುಣ್ಯಫಲಕ್ಕೆ ಭಾಜನರಾಗಿ.”
ದಾನಿಗಳು ಚೆಕ್ ಮೂಲಕವಾಗಿ ಸಮರ್ಪಿಸಿದರೆ ಉತ್ತಮ.
10 ಚದರ ಅಡಿಗೆ 11,100/- ರೂಗಳು ಎಂದು ನಿಗದಿಪಡಿಸಲಾಗಿದೆ.
ದಾನಿಗಳು ಶ್ರೀ ಮಠಕ್ಕೆ ಬರುವಾಗ ಮಡಿ,ಶಲ್ಯ, ಆಚಮನಕ್ಕೆ ಉದ್ಧರಣೆ ಪಾತ್ರೆಯನ್ನು ತರಬೇಕಾಗಿ ವಿನಂತಿ.
ಸರ್ವರಿಗೂ ಆದರದ ಸ್ವಾಗತ
ಆಡಳಿತ ಮಂಡಳಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ