
ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಶಾಲೆಯ ಸಭಾ ಮಂಟಪದಲ್ಲಿ ಇಂದು ೧೮-೧೧-೨೦೨೬ ರಂದು ಅತ್ಯಂತ ಭಕ್ತಿಭಾವದಿಂದ ೧,೫೦೦ ಮಕ್ಕಳಿಂದ “ಭಗವದ್ಗೀತೆಯ ಸಾಮೂಹಿಕ ಪಠಣ” ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಠ, ಶಿರಸಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
“ಗೀತಾ ಜ್ಞಾನದಿಂದ ಜೀವನದಲ್ಲಿ ಬೆಳಕು” ಎಂಬ ಸದುದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವು ನೆರೆದಿದ್ದ ಎಲ್ಲ ಮಕ್ಕಳ ಮನಸ್ಸಿನಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸಿತು.
ಕಾರ್ಯಕ್ರಮದ ವಿವರಣೆ
ಬಾಲ್ಯದಲ್ಲೇ ಮಕ್ಕಳಲ್ಲಿ ಸಂಸ್ಕಾರ, ನೈತಿಕತೆ ಮತ್ತು ಧರ್ಮ ಜಾಗೃತಿಯನ್ನು ಮೂಡಿಸುವ ಸದುದ್ದೇಶದಿಂದ ಆಯೋಜಿಸಲಾಗಿದ್ದ ಈ ಸಾಮೂಹಿಕ ಗೀತಾ ಪಠಣದಲ್ಲಿ ಸುಮಾರು ೧,೫೦೦ಕ್ಕೂ ಹೆಚ್ಚು ಬೇರೆ ಬೇರೆ ಶಾಲೆಯ ಉತ್ಸಾಹಿ ಮಕ್ಕಳು ಅತ್ಯಂತ ಶ್ರದ್ಧೆ ಹಾಗೂ ಸ್ಪಷ್ಟತೆಯಿಂದ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಶಾಲೆಯ ಸಭಾ ಮಂಟಪವು ಮಕ್ಕಳ ಮಧುರ ಗೀತಾಘೋಷದಿಂದ ಮೊಳಗಿತು.
ಈ ಭವ್ಯ ಕಾರ್ಯಮದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಅನಿಲ್ ಜೋಶಿ, ಶ್ರೀಪಾದ್ ಭೋಪಾಲ್, ರಾಷ್ಟ್ರೋತ್ಥಾನ ಸಂಸ್ಥೆಯ ಅನಿಲ್ ಚಿದ್ರಿ , ಶಾಲೆಯ ಶಿಕ್ಷಕರು, ಸ್ಥಳೀಯ ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಗಳು ಇತರರು ಇದ್ದರು.