ಮೂರು ಕಡೆ ಮೂರ್ಖವಾಗುವ ಮನಸ್ಸು
ನಮ್ಮ ನಿಜಸ್ವರೂಪವನ್ನೇ ಮನಸ್ಸು ಗ್ರಹಿಸುವುದಿಲ್ಲ. ಶರೀರವೇ ನಾವು ಎಂದು ಅಜ್ಞಾನಿಗಳಾದ ನಾವೆಲ್ಲಾ ಕಾಣುತ್ತೇವೆ. ಈ ಶರೀರ ಹುಟ್ಟುವುದಕ್ಕಿಂತ ಮುಂಚೆಯೂ ನಾನು ಇದ್ದದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಅಷ್ಟೇ ಏಕೆ, ಹಿಂದೆ ತಾಯಿಯ ಉದರದಲ್ಲಿದ್ದು ಹುಟ್ಟಿಬಂದದ್ದನ್ನು ನಮ್ಮ ಇಂದಿನ ಮನಸ್ಸು ಗ್ರಹಿಸುವುದಿಲ್ಲ. ಈ ರೀತಿಯಲ್ಲಿ ಮನಸ್ಸು ವಸ್ತುಸ್ಥಿತಿಯನ್ನು ಗ್ರಹಿಸಲಾರದೇ ಮೂರ್ಖನಂತಾಗಿಬಿಡುತ್ತದೆ. ಸಂಸ್ಕಾರ ಇಲ್ಲದಿರುವಿಕೆಯೇ ಇದಕ್ಕೆ ಕಾರಣ. Read More
ದೇವರಲ್ಲಿ ಆನಂದಿಸುವವನು ಎಲ್ಲಕಡೆ ಗೆಲ್ಲುತ್ತಾನೆ
ಮನುಷ್ಯನಿಗೆ ಎರಡು ರೀತಿಯ ಆನಂದದ ಅನುಭವಕ್ಕೆ ಅವಕಾಶವಿದೆ. ಇಂದ್ರಿಯಗಳ ಮೂಲಕ ವಿಷಯಸುಖವೆಂಬ ಆನಂದ ಮತ್ತು ವಿಷಯಸುಖಗಳಿಂದ ದೂರವಿರುವ ಮನಸ್ಸಿನಿಂದ ದೇವರ ಚಿಂತನೆಯಲ್ಲಿ ಸಿಗುವ ಆನಂದ. ವಿಷಯಸುಖಗಳಲ್ಲಿಯೇ ನಿಂತವನು ಜೀವನದಲ್ಲಿ ಸೋಲುತ್ತಾನೆ. ಯಾಕೆಂದರೆ ಅವನ ಶರೀರ, ಇಂದ್ರಿಯ, ಮನಸ್ಸುಗಳು ದುರ್ಬಲಗೊಳ್ಳುತ್ತವೆ. ಪರದಲ್ಲಿ ಸದ್ಗತಿಯ ವಿಷಯವಂತೂ ಅವನಿಗೆ ತುಂಬಾ ದೂರವೇ ಆಗಿದೆ. ದೇವರ ಪೂಜಾ-ಜಪ-ಧ್ಯಾನಗಳಲ್ಲಿ ಸಹಜವಾದ ಆನಂದವನ್ನು ಪಡೆಯುವವನು ಗೆಲ್ಲುತ್ತಾನೆ. Read More
ಚಾತುರ್ಮಾಸ್ಯ – ಯುಕ್ತವಾದ ಸಂಚಾರ
ಶರೀರವೆಂಬ ರಥಕ್ಕೆ ಕಟ್ಟಲ್ಪಟ್ಟ ಇಂದ್ರಿಯಗಳೆಂಬ ಹತ್ತು ಕುದುರೆಗಳಲ್ಲಿ ಪಾದಗಳು ಸಂಚಾರದ ಮುಖ್ಯಸಾಧನಗಳು. ಸಂಚರಿಸುವ ಎಲ್ಲಾ ಪ್ರಾಣಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಇವು ಇರುತ್ತವೆ. ನಮ್ಮನ್ನು ಒಂದು ವಾತಾವರಣದಿಂದ ಎನ್ನೊಂದು ವಾತಾವರಣಕ್ಕೆ ಕೊಂಡೊಯ್ಯುವ ಮೂಲಕ ನಮ್ಮ ಮನಸ್ಸಿನಲ್ಲಿ ಪಾದಗಳು ಬದಲಾವಣೆಯನ್ನು ತರುತ್ತವೆ. Read More
ದೇವರು ಕೂಡ ನಿದ್ದೆ ಮಾಡುತ್ತಾನೆಯೇ?
ಎಲ್ಲ ಪ್ರಾಣಿಗಳಿಗೆ ಶ್ರಮ ಜಾಸ್ತಿಯಾದಾಗ ನಿದ್ರೆ ಬರುತ್ತದೆ. ವಿಶ್ರಾಂತಿಯಲ್ಲಿ ಶ್ರಮ ಪರಿಹಾರವಾಗುತ್ತದೆ. ಭಗವಂತನಿಗೆ ಶ್ರಮವಿಲ್ಲ, ನಿದ್ರೆಯಿಂದ ಶ್ರಮದ ಪರಿಹಾರವೂ ಇಲ್ಲ. ಪಂಚ ಮಹಾಭೂತಗಳ ಕಾರ್ಯವಾಗಿರುವ ಶರೀರಕ್ಕೆ ಮತ್ತು ಇಂದ್ರಿಯಗಳಿಗೆ ಶ್ರಮ ಇರುತ್ತದೆ. ಮನಸ್ಸು ಕೂಡ ಪಂಚ ಮಹಾಭೂತಗಳಿಂದಲೇ ಆದುದರಿಂದ ಅದಕ್ಕೆ ಶ್ರಮವಿರುತ್ತದೆ. ಭಗವಂತನಿಗೆ ಪಂಚಮಹಾಭೂತಗಳ ದೇಹೇಂದ್ರಿಯಗಳಿಲ್ಲ. ಅವನ ಮೂಲಸ್ವರೂಪದಲ್ಲಿ ಅವನನ್ನು ನೋಡಿದರೆ ಅವನಿಗೆ ಪಂಚ ಮಹಾಭೂತಗಳ ಶರೀರೇಂದ್ರಿಯಗಳಿಲ್ಲ. Read More
ವೇದಾಂತದ ಎಲ್ಲ ಸಿದ್ಧಾಂತಗಳ ಸಾರ ಏನು?
ಭಕ್ತಿ, ಜ್ಞಾನ ಮುಂತಾದ ಯಾವುದಾದರೂ ಒಂದು ಉಪಾಯದ ಮೂಲಕ ಪರಮಾತ್ಮನನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಕೋತಿಯ ಮರಿಯು ತಾಯಿ ಕೋತಿಯನ್ನು ಬಲವಾಗಿ ಹಿಡಿದುಕೊಳ್ಳುವಂತೆ ಹಿಡಿದುಕೊಳ್ಳಬೇಕು. Read More
ಭಾರತೀಯತೆಗೆ ಶ್ರೀ ಶಂಕರ ಭಗವತ್ಪಾದರು ಕೊಟ್ಟ ದಿವ್ಯ ಭಾಷ್ಯ
ವೇದಗಳಲ್ಲಿಯೇ ಉಪನಿಷತ್ತುಗಳು ಬರುವುದರಿಂದ ಉಪನಿಷತ್ತುಗಳಿಗೂ ಸಾಯಣಭಾಷ್ಯವಿದೆ. ಉಪನಿಷತ್ತುಗಳಿಗೆ ಅರ್ಥವಿವರಣೆ ನೀಡುವಾಗ ಶ್ರೀ ಶಂಕರರ ಚಿಂತನಾ ಶೈಲಿಯನ್ನೇ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಹೀಗೆ ವೇದಗಳಿಗೆ ಅರ್ಥ ಮಾಡುವ ವಿಶಿಷ್ಟ ಕ್ರಮದ ಮೊದಲ ಆವಿಷ್ಕಾರವಾದದ್ದು ಶ್ರೀ ಶಂಕರರಿಂದ. ಇಂದಿಗೂ ಅದೇ ಕ್ರಮ ಮುಂದುವರೆದಿದೆ. Read More
ಕಾಲವನ್ನು ತಪ್ಪುಗಳಿಲ್ಲದೆ ಕಳೆಯುವುದು ಮುಖ್ಯ
ಸಂತೋಷದಲ್ಲಿ ಕಾಲ ಕಳೆಯುತ್ತಿರುವಾಗ ತಪ್ಪು ಕೆಲಸಗಳಾಗಿದ್ದರೆ ಆ ಸಮಯದಲ್ಲಿ ಏನೂ ಅನಿಸಲಾರದು. ಸಂತೋಷದ ಅವಧಿ ಮುಗಿದ ನಂತರ ಹಿಂದೆ ಆದ ತಪ್ಪಿನ ಬಗ್ಗೆ ’ಇದು ತಪ್ಪು’ ಎಂಬ ಅರಿವು ಮೂಡುತ್ತದೆ. ತಪ್ಪಿನ ಬಗ್ಗೆ ಪಶ್ಚಾತ್ತಾಪ ಶುರುವಾಗುತ್ತದೆ. ಕೆಲವೊಮ್ಮೆ ಈ ಪಶ್ಚಾತ್ತಾಪಕ್ಕೆ ಕೊನೆಯಿರುವುದಿಲ್ಲ. ಜೀವನ ಪರ್ಯಂತ ಪಶ್ಚಾತ್ತಾಪವೇ ಆಗಿರುತ್ತದೆ. Read More
ಮನಸ್ಸಿದ್ದರೆ ಮಾರ್ಗ
ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಈ ಸ್ಥಿತಿ ಇರುತ್ತದೆ, ಸ್ವಲ್ಪ ಪ್ರಯತ್ನಿಸಿದರೂ ಬೇಗ ಬರುತ್ತದೆ. ದಿನಾಲೂ ಯೋಗಾಸನ ಪ್ರಾಣಾಯಾಮದಿಗಳನ್ನು ಮಾಡುವವನಿಗೆ ಈ ಸ್ಥಿತಿ ಕ್ರಮೇಣ ಬರುತ್ತದೆ. ತೀವ್ರ ಭಯ, ತುಂಬಾ ಶೋಕ, ಅತಿಯಾದ ಮನಸ್ತಾಪಗಳು ಮನಸ್ಸಿನ ಸರಿಯಾದ ಸ್ಥಿತಿಗೆ ಪ್ರಬಲ ವಿರೋಧಿಗಳು. Read More
ಉತ್ತಮ ಗತಿಗೆ ಸೂರ್ಯೋಪಾಸನೆ
ಶ್ರೇಷ್ಠ ಸಾಧಕನು ಸೂರ್ಯನ ಮೂಲಕ ಉತ್ತರಾಯಣ ಮಾರ್ಗದಲ್ಲಿ ಸಾಗುವುದನ್ನು ಉಪನಿಷತ್ತು ಹೇಳುತ್ತದೆ. ” ತಪಃ ಶ್ರದ್ಧೇ ಯೇ ಹ್ಯುಪವಸಂತಿ ಅರಣ್ಯೇ ಶಾಂತಾ ವಿದ್ವಾಂಸೋ ಭೈಕ್ಷ್ಯಾಚರ್ಯೇಣ ಚರಂತಃ l ಸೂರ್ಯದ್ವಾರೇಣ ತೇ ವಿರಜಾ: ಪ್ರಯಾಂತಿ …. ll” Read More
ಸಾತ್ವಿಕ ಸಾಧಕತ್ವ ರಾಜಸಕ್ಕಿಂತ ಶ್ರೇಷ್ಠ
ಹೆಚ್ಚಿನ ಸಾಧಕರು ರಾಜಸರಾಗಿರುವುದರಿಂದ ಅವರಿಗೆ ಉತ್ಸಾಹ ತುಂಬಲು “ನೀನು ಗೆಲ್ಲುತ್ತೀಯೆ , ಪ್ರಯತ್ನ ಮಾಡು” ಎಂದು ಹೇಳಿ ಬೆನ್ನು ತಟ್ಟಬೇಕಾಗುತ್ತದೆ. ಗೆಲುವಿನ ಆಸೆ ಹುಟ್ಟಿಸುವ ಮೂಲಕ ಪ್ರಯತ್ನದಲ್ಲಿ ಮುಂದುವರಿಯುವಂತೆ ಮಾಡಬೇಕಾಗುತ್ತದೆ. ಭಗವಂತನು ಭಗವದ್ಗೀತೆಯಲ್ಲಿ ಒಂದು ಸಲ ಹಾಗೆ ಮಾಡಿದ್ದಾನೆ – “ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ” Read More