ಸಸ್ಯ ಸಂರಕ್ಷಣೆ ಅಗತ್ಯ: ಸ್ವರ್ಣವಲ್ಲೀ ಶ್ರೀ
ಇಂದು ಶ್ರೀ ಮಠದ ಸಸ್ಯಲೋಕದಲ್ಲಿ ಪೂಜ್ಯ ಉಭಯ ಶ್ರೀ ಶ್ರೀಗಳವರು ತಮ್ಮ ಅಮೃತ ಹಸ್ತದಿಂದ ಸಸ್ಯರೋಪಣವನ್ನು ನೆರವೇರಿಸಿದರು. ಸ್ವತಃ ಪರಮಪೂಜ್ಯ ಶ್ರೀ ಶ್ರೀಗಳವರೇ ಸಸ್ಯವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನೆರವೇರಿಸಿದ ಅವರು ಸಸ್ಯದ ಸಂರಕ್ಷಣೆ ಅಗತ್ಯ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾವು ಹೊರಬೇಕು, ಅದರ ಪಾಲನೆಯನ್ನು ಮಾಡಬೇಕು ಎಂದು ಆಶಿಸಿದರು. ಇಂದು ಸುಮಾರು 100 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.ಅರಣ್ಯ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಇಂದು ನೆರವೇರಿತು. ಅರಣ್ಯ ಇಲಾಖೆಯ ಪದಾಧಿಕಾರಿಗಳು, ಶ್ರೀ ಮಠದ ಆಡಳಿತ ಮಂಡಳಿಯವರು, ಶಿಷ್ಯರು ಭಾಗವಹಿಸಿದ್ದರು. Read More
ಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ21 ರಿಂದ
ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಉಭಯ ಶ್ರೀಗಳು ಜುಲೈ 21 ರಿಂದ ಸೆಪ್ಟೆಂಬರ್ 19 ರ ತನಕ ಚಾತುರ್ಮಾಸ್ಯ ವೃತಾಚರಣೆಯಲ್ಲಿ ತೊಡಗಲಿದ್ದಾರೆ. Read More
‘ಸರ್ಕಾರ ಸಂಸ್ಕ್ರತಕ್ಕೆ ಉತ್ತೇಜನ ನೀಡಲಿ
ಶ್ರೀ ಶ್ರೀಗಳವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕ್ರತ ಅಧ್ಯಾಪಕರ ಸಂಘದ ಶಿರಸಿ ಜಿಲ್ಲಾ ಘಟಕ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಸ್ಕ್ರತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ನೀಡಿ ಆಶೀರ್ವದಿಸಿದರು. Read More
ಕೃಷ್ಣಯಜುರರ್ವೇದ ಪಾದಘನಪಾರಾಯಣ
ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷ್ಣಯಜುರರ್ವೇದ ಪಾದಘನಪಾರಾಯಣ ಉಭಯ ಶ್ರೀಗಳವರ ಸಾನ್ನಿಧ್ಯದಲ್ಲಿ ಆರಂಭಗೊಂಡಿತು. Read More
‘ಪರಿಸರ ಉಳಿದರೆ ಪರಿವಾರ ಉಳಿವು’
ಶಿರಸಿಯಲ್ಲಿ ಶ್ರೀ ಶ್ರೀಗಳವರು ವೃಕ್ಷಲಕ್ಷ ಪ್ರಶಸ್ತಿಯನ್ನು ಪ್ರಕಾಶ ಮೇಸ್ತ ಅವರಿಗೆ ಪ್ರಧಾನ ಮಾಡಿದರು. Read More
ಶ್ರೀ ಮಠದಲ್ಲಿ ಯೋಗ ದಿನಾಚರಣೆ
ಶ್ರೀ ಮಠದಲ್ಲಿ ಯೋಗ ದಿನಾಚರಣೆಯ ಆಚರಣೆ ಪರಮಪೂಜ್ಯ ಉಭಯ ಶ್ರೀ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸಂಪನ್ನವಾಯಿತು. Read More
ಸ್ವರ್ಣವಲ್ಲೀಯಲ್ಲಿ ರಥೋತ್ಸವ ಸಂಪನ್ನ
ಶ್ರೀ ಮಠದಲ್ಲಿ ನೃಸಿಂಹ ಜಯಂತಿಯ ನಿಮಿತ್ತ ಶ್ರೀಲಕ್ಷ್ಮೀನೃಸಿಂಹ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. Read More
ಕೃಷಿ ಜಯಂತಿಗೆ ಚಾಲನೆ
ಶ್ರೀ ಮಠದಲ್ಲಿ ನಡೆದ ಕೃಷಿ ಜಯಂತಿ ಕಾರ್ಯಕ್ರಮವನ್ನು ಶ್ರೀ ಶ್ರೀಗಳವರು ಉದ್ಘಾಟಿಸಿದರು. Read More
ಸ್ವರ್ಣವಲ್ಲೀ ರಥಕ್ಕೆ ಕಲಶಾರೋಹಣ
ರಥೋತ್ಸವದ ರಥಕ್ಕೆ ಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಲಶವನ್ನು ಪೂಜಿಸಿ, ರಥಕ್ಕೆ ಕಲಶಾರೋಹಣವನ್ನು ಮಾಡಲಾಯಿತು. Read More
ಸನಾತನ ಧರ್ಮಕ್ಕೆ ಶಕ್ತಿ ನೀಡಿದವರು ಶಂಕರರು
ಶ್ರೀ ಶ್ರೀಗಳವರು ಸ್ವರ್ಣವಲ್ಲೀ ಮಠದಲ್ಲಿ ಶಂಕರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. Read More