ಆಹಾರಕ್ಕಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ಎಳ್ಳೆಣ್ಣೆಯೂ ಒಂದು. ಉಪಯೋಗದ ದೃಷ್ಟಿಯಿಂದ ಎಣ್ಣೆಗಳ ರಾಣಿ ಎಳ್ಳೆಣ್ಣೆ ಎಂದೇ ಪ್ರಖ್ಯಾತವಾಗಿದೆ. ಸಾಮಾನ್ಯವಾಗಿ ಉಪಯೋಗಿಸುವ ಎಳ್ಳೆಣ್ಣೆಯಲ್ಲಿ ಎರಡು ರೀತಿ ಅಂತ ಕೇಳಿದ್ದೇನೆ ಒಂದನೆದು ಬಿಳೇ ಎಳ್ಳಿನಿಂದ ತಯಾರಿಸಿದ ಎಣ್ಣೆ, ಎರಡನೆಯದು ಕರೆಎಳ್ಳಿನಿಂದ ತಯಾರಿಸಿದ ಎಳ್ಳೆಣ್ಣೆ. ಆದರೆ ಇದರಲ್ಲಿಯ ಬದಲಾವಣೆ ಹಾಗೂ ಇದರಲ್ಲಿಯ ಗುರುತಿಸುವಿಕೆ ಬಗ್ಗೆ ನಿಖರ ಮಾಹಿತಿ ನನಗಂತೂ ತಿಳಿದಿಲ್ಲ.
ಆದರೆ ಪೇಟೆಯಲ್ಲಿ ಸಹಜವಾಗಿ ತಾವೆಲ್ಲರೂ ವಿಚಾರಿಸಿದಾಗ ಎರಡು ರೀತಿಯ ಎಳ್ಳೆಣ್ಣೆ ಕೇಳಿ ಬರುತ್ತದೆ ಒಂದನೆಯದು ಎಳ್ಳೆಣ್ಣೆ, ಎರಡನೆಯದು ದೀಪದ ಎಳ್ಳೆಣ್ಣೆ. ಒಂದು ಎಳ್ಳೆಣ್ಣೆಯ ದರ ಹೆಚ್ಚಿಗೆ ಇದ್ದು ದೀಪದ ಎಳ್ಳೆಣ್ಣೆಯ ದರ ಸ್ವಲ್ಪ ಕಡಿಮೆ ಇರುತ್ತದೆ. ಇದರಲ್ಲಿ ತಾಂತ್ರಿಕವಾಗಿ ಹೇಳುವುದಾದರೆ
1. ಆಹಾರ ದರ್ಜೆಯ ಎಳ್ಳೆಣ್ಣೆ
2. ಆಹಾರದರ್ಜೆಯಲ್ಲದ ಎಳ್ಳೆಣ್ಣೆ( ದೀಪದ ಎಣ್ಣೆ)
1. ಆಹಾರ ದರ್ಜೆಯ ಎಳ್ಳೆಣ್ಣೆ:
ಇದನ್ನು ಎಳ್ಳಿನಿಂದಲೇ ತಯಾರಿಸಲಾಗುತ್ತದೆ. ಎಳ್ಳೆಣ್ಣೆಯಲ್ಲಿ ವಿಟಮಿನ್ E ,
B6 ತಾಮ್ರ, ಕಾಲ್ಸಿಯಂ, ಜಿಂಕ್, Omega 3, Omega 6 ಮುಂತಾದ ಆರೋಗ್ಯವನ್ನು ಉತ್ತಮಪಡಿಸುವ ಗುಣಗಳನ್ನು ಹೊಂದಿರುತ್ತದೆ. ಸ್ನಾಯುಗಳಿಗೆ ಹಾಗೂ ಮಾಂಸ ಖಂಡಗಳು ಶಕ್ತಿಯುತವಾಗಲು ಕ್ರೀಡಾಪಟುಗಳು ನಿತ್ಯ ಲೇಪನ ಮಾಡಬಹುದು. ಅದರಲ್ಲೂ
calf muscle ಗೆ ಹೆಚ್ಚಿನ ಶ್ರಮ ಬೀಳುವ ಕ್ರೀಡೆಗಳ ಕ್ರೀಡಾಪಟುಗಳು ಅವಶ್ಯವಾಗಿ ಇದನ್ನು ಲೇಪಿಸಿಕೊಳ್ಳಬೇಕು.
ನೋವು ನಿವಾರಕವಾಗಿ ಇದನ್ನ ಲೇಪಿಸಬಹುದು. ಕೈಕಾಲು ಸೆಳೆತ ಇದ್ದವರು ಇದನ್ನು ಹಚ್ಚಿಕೊಳ್ಳಬಹುದು. ಮಾಯ್ಶ್ಚರೈಸರ್ ತರಹ ಇದನ್ನು ಬಳಸಬಹುದು. ಇದು UV ವಿಕಿರಣವನ್ನು ತಡೆಯುವುದರಿಂದ ಸನ್ ಸ್ಕ್ರೀನ್ ನಂತೆ ಉಪಯೋಗಿಸಬಹುದು. ಕಾಂತಿಯುತ ಚರ್ಮಕ್ಕಾಗಿ ಇದನ್ನು ಹಚ್ಚಬಹುದು. ಸಂದು ಮಾಂಸಖಂಡಗಳ ನೋವು ಬರದಂತೆ ಇದನ್ನು ಸೇವಿಸಬಹುದು.
2. ಆಹಾರದರ್ಜೆಯಲ್ಲದ ಎಳ್ಳೆಣ್ಣೆ( ದೀಪದ ಎಣ್ಣೆ):
ಇದನ್ನು ಹೊರಗಡೆಯಿಂದ ಹಚ್ಚಲು ಅಥವಾ ಆಂತರಿಕವಾಗಿ ಸೇವಿಸಲು ಉಪಯೋಗಿಸಬಾರದು. ಎಳ್ಳೆಣ್ಣೆಯ ಜೊತೆಗೆ ಇತರ ಕೆಲವು ಎಣ್ಣೆಗಳ ಮಿಶ್ರಣ ಇದಾಗಿರುತ್ತದೆ. ಎಣ್ಣೆಯ ಮೇಲೆ ಮುದ್ರಿತವಾದಂತಹ ಮಾಹಿತಿಯಿಂದ ಇದನ್ನು ತಾವು ತಿಳಿಯಬಹುದು ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಉತ್ತಮ ಅಲ್ಲ, ಕಾರಣ ಸೇವಿಸಬಾರದು ಮತ್ತು ಹಚ್ಚಲು ಹೊರಗಿನಿಂದ ಹಚ್ಚಲು ಉಪಯೋಗಿಸಬಾರದು.
ಲೇಖಕರು: ಡಾ|| ರವಿಕಿರಣ ಪಟವರ್ಧನ್
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ