ಸಸ್ಯ ಸಂರಕ್ಷಣೆ ಅಗತ್ಯ: ಸ್ವರ್ಣವಲ್ಲೀ ಶ್ರೀ
ಇಂದು ಶ್ರೀ ಮಠದ ಸಸ್ಯಲೋಕದಲ್ಲಿ ಪೂಜ್ಯ ಉಭಯ ಶ್ರೀ ಶ್ರೀಗಳವರು ತಮ್ಮ ಅಮೃತ ಹಸ್ತದಿಂದ ಸಸ್ಯರೋಪಣವನ್ನು ನೆರವೇರಿಸಿದರು. ಸ್ವತಃ ಪರಮಪೂಜ್ಯ ಶ್ರೀ ಶ್ರೀಗಳವರೇ ಸಸ್ಯವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನೆರವೇರಿಸಿದ ಅವರು ಸಸ್ಯದ ಸಂರಕ್ಷಣೆ ಅಗತ್ಯ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾವು ಹೊರಬೇಕು, ಅದರ ಪಾಲನೆಯನ್ನು ಮಾಡಬೇಕು ಎಂದು ಆಶಿಸಿದರು. ಇಂದು ಸುಮಾರು 100 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.ಅರಣ್ಯ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಇಂದು ನೆರವೇರಿತು. ಅರಣ್ಯ ಇಲಾಖೆಯ ಪದಾಧಿಕಾರಿಗಳು, ಶ್ರೀ ಮಠದ ಆಡಳಿತ ಮಂಡಳಿಯವರು, ಶಿಷ್ಯರು ಭಾಗವಹಿಸಿದ್ದರು. Read More