‘ನನಗೋಸ್ಕರ’ ಹೋದರೆ, ‘ನನ್ನದು’ ಹೋಗುತ್ತದೆ
ಮಮಕಾರವನ್ನು ಬಿಡಲು ಭಗವದ್ಗೀತೆಯು ಸರಳ ಉಪಾಯವನ್ನು ಕೊಡುತ್ತದೆ. “ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ”(ಭ.ಗೀ ೧೨.೧೦) ಭಗವಂತನಿಗೋಸ್ಕರ ಕರ್ಮ ಮಾಡುವುದನ್ನು ರೂಢಿಸಿಕೊಂಡರೆ ಚಿತ್ತವು ಶುದ್ಧಿಯಾಗುತ್ತದೆ. ಮಮಕಾರದ ನಾಶವೇ ಇಲ್ಲಿ ಹೇಳುತ್ತಿರುವ ಚಿತ್ತಶುದ್ಧಿ ಅಥವಾ ಮಮಕಾರವೆಂಬ ಪಾಶ (ಹಗ್ಗ)ದ ಕಟ್ಟು ಸಡಿಲವಾಗುವಿಕೆಯೇ ಇಲ್ಲಿ ಚಿತ್ತಶುದ್ಧಿ. Read More